- Kannada News Photo gallery Niharika Konidela Shares Cryptic post amid divorce news with Chaitanya Jonnalagadda
Niharika Konidela: ‘ಬದುಕಿ, ಬದುಕಲು ಬಿಡಿ’; ವಿಚ್ಛೇದನದ ಸುದ್ದಿ ಮಧ್ಯೆ ಗೂಢಾರ್ಥದ ಪೋಸ್ಟ್ ಹಾಕಿದ ಚಿರಂಜೀವಿ ಮನೆಮಗಳು
ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಅನ್ನು ನಿಹಾರಿಕಾ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಒಂದಷ್ಟು ಕ್ಯಾಪ್ಶನ್ಗಳನ್ನು ಅವರು ಹಾಕಿದ್ದಾರೆ.
Updated on:May 05, 2023 | 3:20 PM

ಚಿರಂಜೀವಿ ತಮ್ಮನ ಮಗಳು ನಿಹಾರಿಕಾ ಕೊನಿಡೆಲಾ ಮತ್ತು ಅವರ ಪತಿ ಚೈತನ್ಯ ಜೆವಿ ಸಂಬಂಧ ಮುರಿದು ಬಿದ್ದಿದೆ ಎಂಬ ಸುದ್ದಿ ಜೋರಾಗಿದೆ. ಹೀಗಿರುವಾಗಲೇ ಅವರು ಹಾಕಿಕೊಂಡಿರುವ ಹೊಸ ಪೋಸ್ಟ್ ವೈರಲ್ ಆಗಿದೆ.

ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಅನ್ನು ನಿಹಾರಿಕಾ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಒಳಗೆ ಒಂದಷ್ಟು ಕ್ಯಾಪ್ಶನ್ಗಳನ್ನು ಅವರು ನೀಡಿದ್ದಾರೆ.

‘ನಿಮ್ಮ ಎನರ್ಜಿ ಸೇವ್ ಮಾಡಿ, ನೀವು ಸಮರ್ಥರು, ನಿಮ್ಮ ಬಗ್ಗೆ ನೀವು ದಯೆ ತೋರಿ, ನೀವು ಅಂದುಕೊಂಡಿದ್ದಕ್ಕಿಂತ ನೀವು ಬಲಶಾಲಿ, ನಿಮ್ಮ ನಿದ್ರೆಗೆ ಆದ್ಯತೆ ನೀಡಿ, ಹೆಚ್ಚು ನೀರನ್ನು ಕುಡಿಯಿರಿ, ಬದುಕಿ ಮತ್ತು ಇತರರನ್ನು ಬದುಕಲು ಬಿಡಿ’ ಎನ್ನುವ ವಿಚಾರ ವಿಡಿಯೋದಲ್ಲಿದೆ.

ನಿಹಾರಿಕಾ ಮತ್ತು ಚೈತನ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ ಎಲ್ಲರನ್ನೂ ಫಾಲೋ ಮಾಡುತ್ತಿರುವ ಚೈತನ್ಯ, ನಿಹಾರಿಕಾ ಅವರನ್ನು ಮಾತ್ರ ಅನ್‌ಫಾಲೋ ಮಾಡಿದ್ದರು.

ನಿಹಾರಿಕಾ ಮತ್ತು ಚೈತನ್ಯ ಅವರದ್ದು ಪ್ರೇಮ ವಿವಾಹ. 2020ರ ಡಿಸೆಂಬರ್ 9ರಂದು ರಾಜಸ್ಥಾನದ ಉದಯಪುರದಲ್ಲಿ ಇವರ ಮದುವೆ ನಡೆಯಿತು. ವಿವಾಹಕಾರ್ಯ ತುಂಬಾನೇ ಅದ್ದೂರಿಯಾಗಿ ನಡೆದಿತ್ತು. ಈಗ ಎರಡೂವರೆ ವರ್ಷ ಕಳೆಯುವುದರೊಳಗೆ ಇವರು ಬೇರೆ ಆಗಿದ್ದಾರೆ ಎನ್ನಲಾಗುತ್ತಿದೆ.
Published On - 12:15 pm, Fri, 5 May 23




