BSNL: ಬಿಎಸ್ಎನ್ಎಲ್ನ 100 ರೂ. ಒಳಗಿನ ಈ ಮೂರು ಪ್ಲಾನ್ನಲ್ಲಿದೆ ಬಂಪರ್ ಆಫರ್
TV9 Web | Updated By: Vinay Bhat
Updated on:
Jul 24, 2022 | 2:15 PM
ಬಿಎಸ್ ಎನ್ ಎಲ್ ಸೈಲೆಂಟ್ ಆಗಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದರಲ್ಲೂ ಬಜೆಟ್ ಬೆಲೆಯ ಆಕರ್ಷಕ ಯೋಜನೆಗಳು ಇವೆ. ಅವುಗಳಲ್ಲಿ ಮೂರು ಮುಖ್ಯ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಇಲ್ಲಿ ತಿಳಿಸಲಾಗಿದೆ.
1 / 6
ಟೆಲಿಕಾಂ ಮಾರುಕಟ್ಟೆಯಲ್ಲಿ ಇಂದು ಖಾಸಗಿ ಕಂಪನಿಗಳ ಹಾವಳಿ ಹೆಚ್ಚಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ (ವಿ) ನಡುವೆ ಸರ್ಕಾರಿ ಸಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗುತ್ತಿಲ್ಲ.
2 / 6
ಆದರೂ ತನ್ನ ಬಳಕೆದಾರರಿಗೆ ಆಕರ್ಷಕ ಆಫರ್ ಗಳನ್ನು ಕೊಡುವುದರಲ್ಲಿ ಬಿಎಸ್ ಎನ್ ಎಲ್ ಹಿಂದೆಬಿದ್ದಿಲ್ಲ. ಒಂದುಕಡೆ ಜಿಯೋವನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಲು ಏರ್ಟಲ್ ಹರಸಾಹಸ ಪಡುತ್ತಿದ್ದರೆ ಇತ್ತ ಬಿಎಸ್ ಎನ್ ಎಲ್ ಸೈಲೆಂಟ್ ಆಗಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದರಲ್ಲೂ ಬಜೆಟ್ ಬೆಲೆಯ ಆಕರ್ಷಕ ಯೋಜನೆಗಳು ಇವೆ. ಅವುಗಳಲ್ಲಿ ಮೂರು ಮುಖ್ಯ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ಇಲ್ಲಿ ತಿಳಿಸಲಾಗಿದೆ.
3 / 6
ಬಿಎಸ್ ಎನ್ ಎಲ್ 87 ರೂ. ಪ್ರಿಪೇಯ್ಡ್ ಪ್ಲಾನ್: ಬಿಎಸ್ ಎನ್ ಎಲ್ ನ ಈ 87 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ 14 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯ್ಸ್ ಕರೆ ಸೌಲಭ್ಯ ನೀಡಲಾಗಿದೆ. ಪ್ರತಿ ದಿನ 1 ಜಿಬಿ ಡೇಟಾ ಸಿಗಲಿದ್ದು, 40Kbps ಸ್ಪೀಡ್ನಲ್ಲಿ ಕಾರ್ಯನಿರ್ವಹಿಸುತ್ತದೆ. ದಿನಕ್ಕೆ 100 ಎಸ್ ಎಮ್ ಎಸ್ ಉಚಿತ. ಇದು ಬಿಎಸ್ ಎನ್ ಎಲ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಯೋಜನೆಯಾಗಿದೆ.
4 / 6
ಬಿಎಸ್ ಎನ್ ಎಲ್ 97 ರೂ. ಪ್ರಿಪೇಯ್ಡ್ ಪ್ಲಾನ್: ಬಿಎಸ್ ಎನ್ ಎಲ್ 100 ರೂ. ಒಳಗಡೆ ಇರುವ ಯೋಜನೆಯಲ್ಲಿ 97 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ಕೂಡ ಒಂದಾಗಿದ್ದು ಇದು 18 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯ್ಸ್ ಕರೆ ಸೌಲಭ್ಯ ನೀಡಲಾಗಿದೆ.
5 / 6
ಈ 97 ರೂ. ಪ್ಲಾನ್ ನಲ್ಲಿ ಪ್ರತಿ ದಿನ 2 ಜಿಬಿ ಡೇಟಾ ಸಿಗಲಿದ್ದು, ಡೇಟಾ ಮುಗಿದ ಬಳಿಕ 80Kbps ಸ್ಪೀಡ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಇದರಲ್ಲಿ ಯಾವುದೇ ಉಚಿತ ಎಸ್ ಎಮ್ ಎಸ್ ಪ್ಯಾಕ್ ಇರುವುದಿಲ್ಲ.
6 / 6
ಬಿಎಸ್ ಎನ್ ಎಲ್ 99 ರೂ. ಪ್ರಿಪೇಯ್ಡ್ ಪ್ಲಾನ್: ಬಿಎಸ್ ಎನ್ ಎಲ್ ನ 99 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ 18 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯ್ಸ್ ಕರೆಯನ್ನು ಮಾಡಬಹುದು. PRBT ಸೌಲಭ್ಯ ಕೂಡ ಇದೆ. ಆದರೆ, ಇದರಲ್ಲಿ ಯಾವುದೇ ಇತರೆ ಪ್ಲಾನ್ ಗಳು ಇರುವುದಿಲ್ಲ.