Kannada News » Photo gallery » Neeraj Chopra who created history in World Championships is the owner of how much wealth know his net worth
Neeraj Chopra: ಚಿನ್ನದ ಹುಡುಗ ನೀರಜ್ ಚೋಪ್ರಾ ಎಷ್ಟು ಕೋಟಿಯ ಒಡೆಯ ಗೊತ್ತಾ? ದಿನದ ಆದಾಯ ಎಷ್ಟು?
TV9kannada Web Team | Edited By: pruthvi Shankar
Updated on: Jul 24, 2022 | 2:15 PM
Neeraj Chopra: ಟೋಕಿಯೊದಲ್ಲಿ ಪದಕ ಗೆದ್ದ ನಂತರ ನೀರಜ್ ಜೊತೆ ಹಲವು ಕಂಪನಿಗಳು ಒಪ್ಪಂದ ಮಾಡಿಕೊಂಡವು. ಕ್ರೆಡ್, ಬೈಜುಸ್, ಜಿಲೆಟ್, ಟಾಟಾ ಲೈಫ್ ಇನ್ಶುರೆನ್ಸ್, ನೈಕ್ ಜಾಹೀರಾತುಗಳಲ್ಲಿ ನೀರಜ್ ಅವರನ್ನು ಕಾಣಬಹುದು.
Jul 24, 2022 | 2:15 PM
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ನೀರಜ್ ಚೋಪ್ರಾ ಇತಿಹಾಸ ಸೃಷ್ಟಿಸಿದ್ದಾರೆ . ಇದರೊಂದಿಗೆ ನೀರಜ್ ಭಾರತದ 19 ವರ್ಷಗಳ ಬರವನ್ನು ಈ ಟೂರ್ನಿಯಲ್ಲಿ ಕೊನೆಗೊಳಿಸಿದರು. ಜೊತೆಗೆ ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತದಿಂದ ಪದಕ ಗೆದ್ದ ಏಕೈಕ ಜಾವೆಲಿನ್ ಎಸೆತಗಾರರಾಗಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ನೀರಜ್ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ನೀರಜ್ ಪದಕಗಳೊಂದಿಗೆ ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ. ಹೀಗೆ ವಿಶ್ವವಿಖ್ಯಾತಿ ಪಡೆದಿರುವ ನೀರಜ್ ಅವರ ನಿವ್ವಳ ಮೌಲ್ಯದ ಬಗ್ಗೆ ಇಲ್ಲಿದೆ ವಿವರ
1 / 5
ಟೋಕಿಯೊದಲ್ಲಿ ಪದಕ ಗೆದ್ದ ನಂತರ ನೀರಜ್ ಬ್ರಾಂಡ್ ಮೌಲ್ಯದಲ್ಲಿ ಭಾರಿ ಏರಿಕೆಯಾಗಿದೆ. ಸದ್ಯ ನೀರಜ್ ನಿವ್ವಳ ಆಸ್ತಿ ನೋಡಿದರೆ ಮೂರು ಮಿಲಿಯನ್ ಡಾಲರ್. ಭಾರತೀಯ ರೂಪಾಯಿಯಲ್ಲಿ ನೋಡಿದರೆ ಸುಮಾರು 18 ಕೋಟಿ.
2 / 5
CNolage ನ ವರದಿ ಪ್ರಕಾರ ನೀರಜ್ ಅವರ ತಿಂಗಳ ಆದಾಯ 25 ಲಕ್ಷ ರೂ.ಗಿಂತ ಹೆಚ್ಚಿದ್ದು, ಅವರ ವಾರ್ಷಿಕ ಆದಾಯ 3 ಕೋಟಿ ರೂ. ನೀರಜ್ ಆಟದಲ್ಲಿ ಹೆಸರು ಗಳಿಸುತ್ತಿರುವ ರೀತಿ ನೋಡಿದರೆ ಅವರ ಆದಾಯ ನಿರಂತರವಾಗಿ ಹೆಚ್ಚಾಗುವ ನಿರೀಕ್ಷೆ ಇದೆ.
3 / 5
ಟೋಕಿಯೊದಲ್ಲಿ ಪದಕ ಗೆದ್ದ ನಂತರ ನೀರಜ್ ಜೊತೆ ಹಲವು ಕಂಪನಿಗಳು ಒಪ್ಪಂದ ಮಾಡಿಕೊಂಡವು. ಕ್ರೆಡ್, ಬೈಜುಸ್, ಜಿಲೆಟ್, ಟಾಟಾ ಲೈಫ್ ಇನ್ಶುರೆನ್ಸ್, ನೈಕ್ ಜಾಹೀರಾತುಗಳಲ್ಲಿ ನೀರಜ್ ಅವರನ್ನು ಕಾಣಬಹುದು.
4 / 5
ನೀರಜ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಟೋಕಿಯೊದಿಂದ ಹಿಂದಿರುಗಿದಾಗ ಹಣದ ಸುರಿಮಳೆಯಾಯಿತು. ಹರಿಯಾಣ ಸರ್ಕಾರ, ಪಂಜಾಬ್ ಸರ್ಕಾರ, ಬಿಸಿಸಿಐ ಅನೇಕ ಜನರು ನೀರಜ್‌ಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು.