Cauliflower Leaves Benefits: ಹೂಕೋಸು ಎಲೆಗಳನ್ನು ನೀವು ಬಿಸಾಡುತ್ತೀರಾ? ಹಾಗಾದ್ರೆ ಇದನ್ನೊಮ್ಮೆ ಓದಿ

Edited By:

Updated on: Feb 09, 2023 | 10:34 PM

ಹೂಕೋಸು ಚಳಿಗಾಲದಲ್ಲಿ ಹೇರವಾಗಿ ಬೆಳೆಯಲಾಗುವ ತರಕಾರಿಯಾಗಿದೆ. ಹೂಕೋಸಿನಲ್ಲಿ ಎಷ್ಟು ಪೋಷಕಾಂಶಗಳಿವೆಯೋ ಅಷ್ಟೇ ಪೋಷಕಾಂಶ ಅದರ ಎಲೆಗಳಲ್ಲಿಯೂ ಇದೆ.

1 / 5

ಹೂಕೋಸು ಎಲೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಎರಡು ಪಟ್ಟು ಹೆಚ್ಚು ಪ್ರೋಟೀನ್, ಫೈಬರ್, ಫಾಸ್ಫರಸ್ ಮತ್ತು ಹೂಕ್ಕಿಂತ ಮೂರು ಪಟ್ಟು ಹೆಚ್ಚು ಖನಿಜಗಳು, ಜೊತೆಗೆ ಸಾಕಷ್ಟು ಕಬ್ಬಿಣ ಮತ್ತು ಕ್ಯಾಲ್ಸಿಯಂ ಇದೆ.

2 / 5

ಇವು ಮೂಳೆಗಳನ್ನು ಆರೋಗ್ಯವಾಗಿಡುವುದಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಇದಲ್ಲದೆ, ದೇಹದ ಜೀರ್ಣಕಾರಿ ಶಕ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅವು ಪ್ರಮುಖ ಪಾತ್ರವಹಿಸುತ್ತವೆ.

3 / 5

ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈಂಟಿಫಿಕ್ ಅಂಡ್ ಇಂಜಿನಿಯರಿಂಗ್ ರಿಸರ್ಚ್ ಪ್ರಕಾರ, ಹೂಕೋಸು ಎಲೆಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಎಂದು ಸಾಭೀತಾಗಿದೆ.

4 / 5

ಹೂಕೋಸು ಎಲೆಗಳು ಪ್ರೋಟೀನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದ್ದು, ಇದು ಮಕ್ಕಳ ಬೆಳವಣಿಗೆ ಸಹಕಾರಿಯಾಗಿದೆ.

5 / 5

ಮೂಳೆ ನೋವು, ಮೊಣಕಾಲು ನೋವು, ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಹೂಕೋಸು ಎಲೆಗಳ ಸೇವನೆಯು ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.

Published On - 10:33 pm, Thu, 9 February 23

Loading...
Unable to load recommendations.
Follow Us