ಆಕಾಶದಲ್ಲಿ ಮೋಡಿ ಮಾಡುತ್ತಿರುವ ಲೋಹದ ಹಕ್ಕಿ ಹೆಲಿಕಾಪ್ಟರ್, ನಮ್ಮೂರಿಗೂ ಹೆಲಿಕಾಪ್ಟರ್ ಬಂದಿದೆಯಲ್ಲಾ ಎಂದು ಕಣ್ಣುರೆಪ್ಪೆ ಮುಚ್ಚದೇ ವೀಕ್ಷಿಸುತ್ತಿರುವ ಮಂದಿ, ಹೆಲಿಕಾಪ್ಟರ್ನಲ್ಲಿ ಹಾರಾಡಿ ಎಂಜಾಯ್ ಮಾಡುತ್ತಿರುವ ಕುಟಂಬಸ್ಥರು ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ.
ಖಾಸಗಿ ಹೆಲಿಕಾಫ್ಟರ್ ಸಂಸ್ಥೆಯೊಂದು ನಗರದ ಜನತೆಗೆ ಹೆಲಿಕಾಪ್ಟರ್ನಲ್ಲಿ ಹಾರಾಟ ಮಾಡುವ ಬಾಗ್ಯ ಕಲ್ಪಿಸಿದ್ದು. ಜನ 4500 ರೂಪಾಯಿ ಹಣ ನೀಡಿ ಯಾರ್ ಬೇಕಾದ್ರು 15 ನಿಮಿಷಗಳ ಕಾಲ ಹಕ್ಕಿಯಂತೆ ಹೆಲಿಕಾಪ್ಟರ್ನಲ್ಲಿ ಹಾರಾಡಬಹುದಾಗಿದೆ.
ಇಡಿಎಸ್ ಏವಿಯೇಷನ್ ಎನ್ನುವ ಕಂಪನಿಯವರು ಏರ್ಪಡಿಸಿದ್ದ ಏರ್ ಕ್ರಾಪ್ಟಿಂಗ್ ಈವೆಂಟ್ ನಲ್ಲಿ ಜನ ಮುಗಿಬಿದ್ದುನ ಭಾಗವಹಿಸಿದರು. ಇದೆ ಪ್ರಥಮ ಬಾರಿಗೆ ಹೆಲಿಕಾಪ್ಟರ್ನಲ್ಲಿ ಹಾರಾಡಿದ ಮಹಿಳೆಯರು ತಮ್ಮ ಸಂತಸ ವ್ಯಕ್ತಪಡಿಸಿದ್ರು.
ಹೆಲಿಕಾಪ್ಟರ್ನಲ್ಲಿ ಹಾರಾಟ ಮಾಡೋ ಚಾನ್ಸ್ ಮಿಸ್ ಮಾಡಿಕೊಳ್ಬಾರ್ದು ಎಂದು ನಾ ಮುಂದು, ತಾ ಮುಂದು ಎಂದು ಆನ್ಲೈನ್ ಬುಕಿಂಗ್ ಮಾಡಿ ಫ್ಯಾಮಿಲಿ ಸಮೇತ ಲೋಹದಹಕ್ಕಿಯಲ್ಲಿ ಚಿಂತಾಮಣಿ ನಗರದ ಸುತ್ತಮತ್ತ ಹಾರಾಟ ಮಾಡಿ ಎಂಜಾಯ್ ಮಾಡಿ ಫುಲ್ ಖುಷಿಯಾದ್ರು.
ಚಿಕ್ಕಬಳ್ಳಾಪುರ
ವೀಕೆಂಡ್ ಬಂದ್ರೆ ಸಾಕು ಸಿಟಿ ಮಂದಿ, ಫ್ಯಾಮಿಲಿ ಸಮೇತ ಬೈಕ್ ಕಾರುಗಳಲ್ಲಿ ಜಾಲಿಯಾಗಿ ಲಾಂಗ್ ಡ್ರೈವ್ ಹೋಗೋದು ಕಾಮನ್, ಈ ವೀಕೆಂಡ್ನಲ್ಲಿ ಲಾಂಗ್ ಡ್ರೈವ್ ಗೆ ಫುಲ್ ಸ್ಟಾಪ್ ಇಟ್ಟು, ಹೆಲಿಕಾಪ್ಟರ್ ನಲ್ಲಿ ಆಕಾಶದಲ್ಲಿ ಹಾರಾಡುತ್ತಾ ಮೋಜು ಮಸ್ತಿ ಮಾಡಿದ್ರು.