
ರಾಜಧಾನಿ ಕೂಗಳತೆ ದೂರದಲ್ಲಿ 112 ಅಡಿಗಳ ಎತ್ತರದ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದೆ ತಡ, ಆದಿಯೋಗಿ ನೊಡಲು ಪ್ರತಿದಿನ ಸಾವಿರಾರು ಜನ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ದೀಪಾವಳಿ ಪ್ರಯುಕ್ತ ಜನಸಾಗರವೆ ಹರಿದು ಬಂದಿದೆ. ಆದಿಯೋಗಿ ಮುಂದೆ ಸಂಬ್ರಮ ಸಂತಸದಿಂದ ದಿನವಿಡಿ ಕಾಲ ಕಳೆದಿದ್ದಾರೆ.

112 ಅಡಿಗಳ ಎತ್ತರದ ಅಪರೂಪದ ಆದಿಯೋಗಿ ಶಿವನ ವಿಗ್ರಹ ಇರುವುದು ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ. ಆದ್ಯಾತ್ಮಿಕ ಗುರು, ಯೋಗ ಗುರು ಜಗ್ಗಿ ವಾಸುದೇವ್, ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಆದಿಯೋಗಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.

ಪ್ರತಿದಿನ ಆದಿಯೋಗಿ ನೋಡಲು ಸಾವಿರಾರು ಜನರು ಆಗಮಿಸ್ತಿದ್ದಾರೆ. ಸೋಮವಾರದ ದೀಪಾವಳಿ ಅಮವಾಸ್ಯೆ ಪ್ರಯುಕ್ತ ಆದಿಯೋಗಿ ನೋಡಲು ಜನಸಾಗರವೆ ಹರಿದು ಬಂದಿತ್ತು. ಅದರಲ್ಲೂ ಆದಿಯೋಗಿ ಬಳಿ ಎಲ್ಲಿ ನೋಡಿದ್ರೂ ಎತ್ತ ನೊಡಿದ್ರೂ ಮಹಿಳಾ ಭಕ್ತರ ದಂಡೆ ಕಾಣಿಸುತ್ತಿತ್ತು.

ರಾಜಧಾನಿ ಬೆಂಗಳೂರಿನಿಂದ ಆದಿಯೋಗಿ ಈಶಾ ಪೌಂಡೇಷನ್ ಕೇವಲ 70 ಕಿಲೋ ಮೀಟರ್ ದೂರವಿದ್ದು, ರಾಜಧಾನಿ ಬೆಂಗಳೂರಿನ ಜನರಿಗೆ ಒನ್ ಡೇ ಪಿಕ್ನಿಕ್ ಜೊತೆ ದೇವರ ದರ್ಶನ ಮಾಡಿದಂತಾಗುತ್ತೆ ಅಂತ ಇತ್ತಿಚಿಗೆ ನಂದಿಗಿರಿಧಾಮದ ಬದಲು ಇಶಾ ಪೌಂಡೇಷನ್ಗೆ ಬರುತ್ತಿದ್ದಾರೆ. ಈಶಾ ಪೌಂಡೇಷನ್ ಬಳಿ ದೇವರ ಭಕ್ತಿಯಲ್ಲಿ ಸಮಯ ಹೋಗಿದ್ದೆ ಗೊತ್ತಾಗಲ್ಲ ಎನ್ನುತ್ತಾರೆ ಭಕ್ತರು.

ಒಂದಡೆ ದೇವರ ಮೇಲಿನ ಭಕ್ತಿ, ಮತ್ತೊಂದೆಡೆ 112 ಅಡಿಗಳ ಆದಿಯೋಗಿ ಪ್ರತಿಮೆ, ಜನರನ್ನು ಕೈಬಿಸಿ ಕರೆಯುತ್ತಿದೆ. ಇದ್ರಿಂದ ಈಶಾ ಪೌಂಡೇಷನ್ಗೆ ಬರುವವರು ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ನಿರೀಕ್ಷೆಯಷ್ಟು ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಜನ ಊಟ, ತಿಂಡಿ ಮತ್ತು ನೀರಿಗೂ ಪರದಾಡಿದ್ದಾರೆ.
Published On - 8:02 pm, Mon, 13 November 23