ಬರದ ನಾಡಿನಲ್ಲಿ ವಿದೇಶಿ ಪಕ್ಷಿಗಳ ಕಲರವ! ಗುಂಪು ಗುಂಪಾಗಿ ಕಾಣಸಿಗುವ ಸೈಬೇರಿಯನ್ ಪಕ್ಷಿಗಳು
ಈಗ ರಾಜ್ಯದೆಲ್ಲಡೆ ಬಹುತೇಕ ಬರದಿಂದ ಕೂಡಿದೆ. ಎಲ್ಲಿ ನೋಡಿದರೂ ಮಳೆಯಿಲ್ಲ, ಬೆಳೆಯಿಲ್ಲ. ಕೆಲವಡೆ ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರು ಇಲ್ಲ. ಇಂಥದರಲ್ಲಿ ಕೆಲವೆಡೆ ಪಕ್ಷಿಗಳು ನೀರನ್ನು ಹುಡುಕಿಕೊಂಡು ಕೆಲವು ಕೆರೆಗಳತ್ತ ಮುಖ ಮಾಡಿವೆ. ಇದರಿಂದ ಅದೊಂದು ತುಂಬಿದ ಕೆರೆ, ಈಗ ಪಕ್ಷಿಧಾಮದಂತಾಗಿದ್ದು, ನೋಡುಗರ ಮನಸೆಳೆಯುತ್ತಿದೆ. ಅಷ್ಟಕ್ಕೂ ಅದೇಲ್ಲಿ ಅಂತೀರಾ? ಇಲ್ಲಿದೆ ನೋಡಿ.
1 / 6
ಈಗ ರಾಜ್ಯದೆಲ್ಲಡೆ ಬಹುತೇಕ ಬರ ಬರ. ಎಲ್ಲಿ ನೋಡಿದರೂ ಮಳೆಯಿಲ್ಲ, ಬೆಳೆಯಿಲ್ಲ. ಕೆಲವಡೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರು ಇಲ್ಲ. ಇಂಥದರಲ್ಲಿ ಕೆಲವೆಡೆ ಪಕ್ಷಿಗಳು ನೀರನ್ನು ಹುಡುಕಿಕೊಂಡು ಕೆಲವು ಕೆರೆಗಳತ್ತ ಮುಖ ಮಾಡಿವೆ. ಇದ್ರಿಂದ ಅದೊಂದು ತುಂಬಿದ ಕೆರೆ, ಈಗ ಪಕ್ಷಿಧಾಮದಂತಾಗಿದೆ.
2 / 6
ಇದು ಬಯಲು ಸೀಮೆಯ ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆ. ಶಾಶ್ವತ ನದಿ ನಾಲೆಗಳು ಇಲ್ಲದಿದ್ರೂ ಕೆಲವು ವರ್ಷಗಳ ಹಿಂದೆ ಜಿಲ್ಲೆಯ ಕೆರೆಗಳಿಗೆ ಎಚ್.ಎನ್ ವ್ಯಾಲಿ ನೀರು ಹರಿದು ಬಂದಿದ್ದು, ಜಿಲ್ಲೆಯ ಕೆಲವು ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ.
3 / 6
ಚಿಕ್ಕಬಳ್ಳಾಪುರ ನಗರದ ಬಳಿ ಇರುವ ಅಮಾನಿ ಗೋಪಾಲಕೃಷ್ಣ ಕೆರೆ ಬಹುತೇಕ ನೀರಿನಿಂದ ತುಂಬಿ ಕಂಗೋಳಿಸುತ್ತಿದೆ. ಒಂದೆಡೆ ಪ್ರಕೃತಿ ಸೌಂದರ್ಯ ಮತ್ತೊಂದೆಡೆ ದೇಶ ವಿದೇಶದ ಪಕ್ಷಿಗಳು ಇದನ್ನೆ ಆವಾಸ ಸ್ಥಾನ ಮಾಡಿಕೊಂಡಿವೆ. ಇದ್ರಿಂದ ದಾರಿಹೋಕರು ಕೆರೆಯಯಲ್ಲಿರುವ ಪಕ್ಷಿಗಳಿಗೆ ಮನಸೋತಿದ್ದಾರೆ.
4 / 6
ಸ್ಥಳಿಯ ಪಕ್ಷಿಗಳು ನೀರಿಗಾಗಿ ಇಲ್ಲೆ ಬೀಡಾರ ಹೂಡಿದ್ರೆ, ವಿದೇಶಗಳಿಂದ ಬರುವ ಪಕ್ಷಿಗಳು ಇಲ್ಲಿಯ ಗಿಡ ಮರಗಳ ಮೇಲೆ ಮೊಟ್ಟೆಯನ್ನು ಇಟ್ಟು ಮರಿಗಳನ್ನು ಮಾಡಿಕೊಳ್ತಿವೆ.
5 / 6
ವಿದೇಶಿ ಪಕ್ಷಿಗಳಲ್ಲಿ- ಪೇಂಟೆಡ್ ಸ್ಟಾಕ್ಸರ್, ಗೆಹರನ್, ವ್ಹೈಟಾವಿಸ್, ಬ್ಲಾಕಾವಿಸ್, ಪಾಂಡ್ ಹೆರಾನ್, ಪೆಲಕಿನ್, ಮತ್ತು ವಿವಿಧ ಜಾತಿಯ ಕೊಕ್ಕರೆಗಳು ಸೇರಿದಂತೆ ಸೈಬೇರಿಯಾ, ನೈಜಿರಿಯಾ, ವಿವಿಧ ತಳಿಯ ಪಕ್ಷಿಗಳು ಇಲ್ಲಿಗೆ ಬಂದು ಗೂಡು ಕಟ್ಟಿ ಸಂತಾನೋತ್ಪತ್ತಿ ಮಾಡಿಕೊಳ್ತಿವೆ.
6 / 6
ವಿದೇಶಿ ಪಕ್ಷಿಗಳ ಅಂದ-ಚೆಂದ, ವೈಯಾರ ಹಾರಾಡೊ ರೀತಿ-ನೀತಿ ನೋಡಲು ಎಷ್ಟೊಂದು ಸುಂದರವಾಗಿರುತ್ತೆ. ಅದೆ ಕಾರಣಕ್ಕೆ ಇಲ್ಲಿರುವ ಪಕ್ಷಿಗಳನ್ನು ನೋಡಲು ದಾರಿ ಹೋಕರು ವಾಹನಗಳನ್ನು ನಿಲ್ಲಿಸಿ ಪಕ್ಷಿಗಳ ವಿಹಂಗಮ ನೋಟ ನೋಡಿ ಸಂತಸ ಪಡ್ತಿದ್ದಾರೆ.