ತುಂಬಿ ತುಳುಕುತ್ತಿರುವ ಚಿತ್ರದುರ್ಗದ ಐತಿಹಾಸಿಕ ಜಲಮೂಲಗಳು, ಫೋಟೋಸ್ ನೋಡಿ
ಚಿತ್ರದುರ್ಗದ ಐತಿಹಾಸಿಕ ಜಲಮೂಲಗಳು ಈ ವರ್ಷದ ಅಪಾರ ಮಳೆಯಿಂದ ತುಂಬಿ ತುಳುಕುತ್ತಿವೆ. ಕೋಟೆನಾಡಿನ ಈ ಪ್ರಮುಖ ಜಲಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಒತ್ತು ನೀಡಬೇಕೆಂಬುದು ಜನರು ಆಗ್ರಹಿಸಿದ್ದಾರೆ.
1 / 6
ಕೋಟೆನಾಡು ಚಿತ್ರದುರ್ಗ ಪರಾಕ್ರಮದ ಸಂಕೇತವಾಗಿದೆ. ವೀರ ಮದಕರಿ ನಾಯಕ ಪರಾಕ್ರಮಗೈದ ಮತ್ತು ಒನಕೆ ಓಬವ್ವ ದರ್ಗೆಯ ಅವತಾರ ತಾಳಿದ ಪುಣ್ಯಭೂಮಿ. ಈ ನೆಲದಲ್ಲಿ ಪಾಳೇಗಾರರ ಕಾಲದಲ್ಲಿ ನಿರ್ಮಿತ ಅನೇಕ ಐತಿಹಾಸಿಕ ಸ್ಮಾರಕ, ಜಲಮೂಲಗಳಿವೆ. ಮಳೆ ಇಲ್ಲದೆ ಜಲಮೂಲಗಳು ಬರಿದಾಗಿದ್ದವು.
2 / 6
ಈ ವರ್ಷದ ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಐತಿಹಾಸಿಕ ಹೊಂಡ, ಪುಷ್ಕರಣಿಗಳು ತುಂಬಿ ತುಳುಕುತ್ತಿವೆ. ಇದರಿಂದ, ಚಿತ್ರದುರ್ಗದ ಜನರು ಫುಲ್ ಖುಷ್ ಆಗಿದ್ದಾರೆ. ಅಲ್ಲದೇ ಜಲಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆಗ್ರಹಿಸುತ್ತಿದ್ದಾರೆ.
3 / 6
ಕೋಟೆನಾಡು ಚಿತ್ರದುರ್ಗದಲ್ಲಿ ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಹತ್ತಾರು ಜಲಮೂಲಗಳಿವೆ. ಕೋಟೆ ಬಳಿಯ ಸಿಹಿನೀರು ಹೊಂಡ, ಕೆಂಚಪ್ಪಮಲ್ಲಪ್ಪ ಬಾವಿ, ಸಂತೆ ಹೊಂಡ, ಚಿನ್ನಕ್ಕಿ ಹೊಂಡ, ಕೆಳಗೋಟೆಯಲ್ಲಿನ ಚನ್ನಕೇಶವ ದೇಗುಲ ಬಳಿಯ ಹೊಂಡ, ಗಣಪತಿ ದೇಗುಲ ಬಳಿಯ ಬಾವಿ ಸೇರಿ ಅನೇಕ ಜಲಮೂಲಗಳು ಈ ಸಲದ ಮಳೆಗೆ ತುಂಬು ತುಳುಕುತ್ತಿವೆ.
4 / 6
ಸುಮಾರು ವರ್ಷಗಳಿಂದ ಬರಗಲಾದ ಪರಿಣಾಮ ಹೊಂಡ, ಪುಷ್ಕರಣಿ, ಬಾವಿಗಳು ಬರಿದಾಗಿದ್ದವು. ಆದರೆ, ಈವರ್ಷ ಭರ್ತಿ ಮಳೆ ಸುರಿದಿದ್ದು ಗತವೈಭವ ಮರುಸೃಷ್ಠಿ ಆದಂತಾಗಿದೆ. ಕೋಟೆನಾಡಿನ ಇತಿಹಾಸ ಪ್ರಸಿದ್ಧ ಜಲಮೂಲಗಳಿಗೆ ಕೋಟೆಯಷ್ಟೇ ಇತಿಹಾಸವಿದೆ. ಹೀಗಾಗಿ, ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.
5 / 6
ಇಡೀ ನಗರದ ಜನರ ನೀರಿನ ದಾಹ ತೀರಿಸುತ್ತಿದ್ದ ಜಲಮೂಲಗಳ ಸಂರಕ್ಷಣೆ ಸರ್ಕಾರದ ಹೊಣೆಯಾಗಿದೆ. ಕೋಟೆನಾಡು ಚಿತ್ರದುರ್ಗ ನಗರದಲ್ಲಿನ ಜಲಪಾತ್ರೆಗಳು ತುಂಬಿ ತುಳುಕುತ್ತಿದ್ದು ನಗರದ ಅಂದ ಹೆಚ್ಚಿಸಿವೆ.
6 / 6
ನಗರದಲ್ಲಿ ತಣ್ಣನೆಯ ವಾತಾವರಣ ಸೃಷ್ಠಿಸಿವೆ. ಹೀಗಾಗಿ, ಸರ್ಕಾರ, ಜಿಲ್ಲಾಡಳಿತ ಮತ್ತು ನಗರಸಭೆ ಈ ಬಗ್ಗೆ ಗಮನಹರಿಸಿ ಜಲಮೂಲಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಯೋಜನೆ ರೂಪಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.