Kannada News Photo gallery CM Basavaraja Bommai visits landslide villages of Yellapur Kalache Uttara Kannada here is pictures GGD
Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?
Guruganesh Bhat | Updated By: guruganesh bhat
Updated on:
Jul 29, 2021 | 7:37 PM
Basavaraj Bommai: ಇಂದು ಕಳಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿದ್ದಾರೆ. ಕಳಚೆ ಕಣಿವೆಯ ಕೂಗಿಗೆ ಮುಂದಿನ ದಿನಗಳಲ್ಲಿ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
1 / 11
ಜುಲೈ 22ರವರೆಗೆ ಉತ್ತರ ಕನ್ನಡ ಜಿಲ್ಲೆಯ ಜನರು ಶಾಂತಿಯುತವಾಗಿ ಅವರ ಪಾಡಿಗೆ ಅವರು ಜೀವನ ಸಾಗಿಸುತ್ತಿದ್ದರು. ಆದರೆ ಅಂದಿನಿಂದ ಸುರಿದ ಅತ್ಯಂತ ವ್ಯಾಪಕ ಮಳೆ ಅವರ ಜೀವನವನ್ನು ಹೈರಾಣಾಗಿಸಿದೆ.
2 / 11
ಜಿಲ್ಲೆಯ ಯಲ್ಲಾಪುರ ತಾಲೂಕಿನ ನಾನಾ ಊರುಗಳಲ್ಲಿ ಬೃಹತ್ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ.. ಅದರಲ್ಲಿ ಕಾಳಿ ನದಿಯ ತಟದಲ್ಲಿರುವ ಕಳಚೆ ಗ್ರಾಮ ಸಂಪೂರ್ಣ ನಾಶವಾಗಿದೆ. ಅಡಿಕೆ, ತೆಂಗು ಬೆಳೆದು ಬದುಕು ಕಟ್ಟಿಕೊಂಡಿದ್ದ ಈ ಊರಿನ ಜನರು ಇದೀಗ ಪುನರ್ವಸತಿಗಾಗಿ ಮೊರೆ ಇಡುವಂತಾಗಿದೆ.
3 / 11
2021 ಜುಲೈ 22ರವರೆಗೆ ಹೀಗಿದ್ದ ಝರಿ ಈಗ ಬದಲಾದ ಸ್ವರೂಪ..
4 / 11
300 ಮನೆಗಳ ಸಂಪೂರ್ಣ ಗ್ರಾಮವೇ ಈಗ ಮುಂದೇನು ಎಂಬ ಪ್ರಶ್ನೆಯಡಿ ಚಿಂತೆಗೀಡಾಗಿದೆ. ಶಾಸಕ ಶಿವರಾಮ ಹೆಬ್ಬಾರ್, ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳು ನೆರವು ಚಾಚಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳಚೆಗೆ ಭೇಟಿ ನೀಡಿದ್ದಾರೆ.
5 / 11
ಕಳಚೆ ಊರೊಂದೇ ಅಲ್ಲದೇ ಕದ್ರಾಕ್ಕೆ ತೆರಳುವ ಹೆದ್ದಾರಿಯಲ್ಲೂ ಬೃಹತ್ ಪ್ರಮಾಣದ ಕುಸಿತ ಏರ್ಪಟ್ಟಿದೆ. ಸಮೀಪದಲ್ಲೇ ಇರುವ ಕದ್ರಾ ಮತ್ತು ಕೊಡಸಳ್ಳಿ ಆಣೆಕಟ್ಟು, ಕೈಗಾ ಅಣುವಿದ್ಯುತ್ ಸ್ಥಾವರಕ್ಕೂ ಅಪಾಯದ ಮುಸ್ನೂಚನೆ ಇದು ಎಂಬ ಮಾತು ಕೇಳಿಬಂದಿದೆ.
6 / 11
ಚಿಕ್ಕ ಚಿಕ್ಕ ತೊರೆಗಳು ದೊಡ್ಡ ಕಂದಕಗಳಗಾಗಿ ಮಾರ್ಪಟ್ಟಿವೆ. ಒಂದೇ ಸಮನೆ ಸುರಿದ ಮಳೆ ಮತ್ತು ಭೂಮಿಯ ಮೇಲೆ ಬಿದ್ದ ಅಪಾರ ಒತ್ತಡ ಭೂಕುಸಿತಕ್ಕೆ ಕಾರಣ ಎಂದ ಮೇಲ್ನೋಟದ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಈಕುರಿತು ಉನ್ನತ ಮಟ್ಟದ ಅಧ್ಯಯನ ಆಗಬೇಕಿದೆ.
7 / 11
ಕುಸಿದ ಮನೆ, ತೋಟಗಳು ಬದುಕನ್ನೂ ಹೊಸಕಿಹಾಕಿವೆ. ಊರಿಗೆ ಊರೇ ಮತ್ತೊಮ್ಮೆ ಹೊಸದಾಗಿ ಹುಟ್ಟಬೇಕಿರುವ ಅನಿವಾರ್ಯತೆಯಲ್ಲಿದೆ.
8 / 11
ಅಲ್ಲಿ ಉರುಳಿಬಿದ್ದ ತೆಂಗಿನಮರವೇ ಸಂಕವಾಗಿತ್ತು. ಪರಿಸರ, ಕೃಷಿ ಪರಿಣಿತ ಶಿವಾನಂದ ಕಳವೆಯವರು ಕಳಚೆಯ ಭೂಕುಸಿತವಲಯದ ಪರಿಶೀಲನೆ ನಡೆಸಿದರು.
9 / 11
ಚಿಕ್ಕ ಝರಿಯೊಂದು ತನ್ನ ಅಕ್ಕಪಕ್ಕದ ತೋಟವನ್ನು ಕೊಚ್ಚಿಕೊಂಡು ಬೃಹತ್ ಹಳ್ಳವನ್ನೇ ಸೃಷ್ಟಿಸಿದ್ದವು.
10 / 11
ಕಿಲೊಮೀಟರ್ಗಟ್ಟಲೆ ರಸ್ತೆ ಸಂಪೂರ್ಣ ನಾಶವಾಗಿತ್ತು. ರಸ್ತೆಯ ಮೇಲೆ ದೊಡ್ಡದೊಡ್ಡ ಕಲ್ಲುಬಂಡೆಗಳು, ಬೃಹತ್ ಮರಗಳು ಮಣ್ಣಿನ ಪ್ರವಾಹವೇ ಬಂದು ಕುಳಿತಿತ್ತು.
11 / 11
ಇಂದು ಕಳಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿದ್ದಾರೆ. ಕಳಚೆ ಕಣಿವೆಯ ಕೂಗಿಗೆ ಮುಂದಿನ ದಿನಗಳಲ್ಲಿ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.
Published On - 6:03 pm, Thu, 29 July 21