ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಲರ್ ಫುಲ್ ಚಿಟ್ಟೆಗಳ ಲೋಕ: ಪ್ರವಾಸಿಗರ ಕಣ್ಣಿಗೆ ಹಬ್ಬ
ರಾಮು, ಆನೇಕಲ್ | Updated By: ಗಂಗಾಧರ ಬ. ಸಾಬೋಜಿ
Updated on:
Oct 15, 2023 | 8:38 PM
ಅದು ಕಲರ್ ಫುಲ್ ಚಿಟ್ಟೆಗಳ ಬಣ್ಣದ ಲೋಕ. ಅಲ್ಲಿ ಕಾಣದ ಚಿಟ್ಟೆಗಳಿಲ್ಲ, ಮನಸೋಲಿಸದ ಪಾತರಗಿತ್ತಿಗಳಿಲ್ಲ. ಈ ಸುಂದರ ವಾತವರಣದ ನಡುವೆ ಸಾವಿರಾರು ಚಿಟ್ಟೆಗಳು ಸ್ವಚ್ಛಂದವಾಗಿ ಹಾರಾಡುತ್ತಿರುತ್ತದೆ. ಇದೀಗ ಈವೊಂದು ಚಿಟ್ಟೆಯ ಲೋಕ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದ್ದು, ಪಾತರಗಿತ್ತಿಗಳ ಹಾರಾಟ ಪ್ರವಾಸಿಗರ ಕಣ್ಣಿಗೆ ಹಬ್ಬವಾಗಿದೆ.
1 / 6
ಅದು ಕಲರ್ ಫುಲ್ ಚಿಟ್ಟೆಗಳ ಬಣ್ಣದ ಲೋಕ. ಅಲ್ಲಿ ಕಾಣದ ಚಿಟ್ಟೆಗಳಿಲ್ಲ, ಮನಸೋಲಿಸದ ಪಾತರಗಿತ್ತಿಗಳಿಲ್ಲ. ಈ ಸುಂದರ ವಾತವರಣದ ನಡುವೆ ಸಾವಿರಾರು ಚಿಟ್ಟೆಗಳು ಸ್ವಚ್ಛಂದವಾಗಿ ಹಾರಾಡುತ್ತಿರುತ್ತವೆ.
ಇದೀಗ ಈವೊಂದು ಚಿಟ್ಟೆಯ ಲೋಕ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದ್ದು, ಪಾತರಗಿತ್ತಿಗಳ ಹಾರಾಟ ಪ್ರವಾಸಿಗರ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತಿದೆ.
2 / 6
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಚಿಟ್ಟೆ ಪಾರ್ಕ್ ವಿವಿಧ ಬಗೆಯ ಪ್ರಭೇದದ ಪಾತರಗಿತ್ತಿಗಳಿಗೆ ಆಶ್ರಯ ತಾಣವಾಗಿದೆ. ಸೆಪ್ಟೆಂಬರ್ನಿಂದ ಜನವರಿಯವರೆಗೆ ಚಿಟ್ಟೆಗಳ ಸಂತಾನೋತ್ಪತ್ತಿಯ ಕಾಲವಾಗಿದ್ದು,
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ರಾಶಿ ರಾಶಿ ಚಿಟ್ಟೆಗಳು ಸ್ವಚ್ಚಂದವಾಗಿ ಹಾರಾಡುತ್ತಿವೆ. ಸೆಪ್ಟೆಂಬರ್ ತಿಂಗಳಿನಲ್ಲಿ ಇಲ್ಲಿಯವರೆಗೆ ಸಾವಿರಾರು ಚಿಟ್ಟೆಗಳನ್ನು ಸಂರಕ್ಷಣಾ ಗೋಪುರದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಬಿಡಲಾಗಿದೆ.
3 / 6
ಮೊಟ್ಟೆ ಹೊಡೆದು ಮರಿಯಾಗಿ ಬೆಳೆದ ಬಣ್ಣಬಣ್ಣದ ಪತಂಗಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿಟ್ಟೆ ಪಾರ್ಕ್ನ ಸೌಂದರ್ಯವನ್ನ ಮತ್ತಷ್ಟು ರಂಗೇರಿಸಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿಟ್ಟೆಯಾಕಾರದ ಪ್ರವೇಶ ದ್ವಾರದ ಮೂಲಕ ಪ್ರವಾಸಿಗರು ಚಿಟ್ಟೆ ಪಾರ್ಕ್ ಒಳ ಪ್ರವೇಶಿಸುತ್ತಿದ್ದಂತೆ ಪಾತರಗಿತ್ತಿಗಳು ಮುತ್ತಿಕೊಳ್ಳುತ್ತವೆ.
4 / 6
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹತ್ತಾರು ವಿವಿಧ ಪ್ರಭೇದದ ಚಿಟ್ಟೆಗಳಿವೆ. ಚಿಟ್ಟೆಗಳ ಜೀವನವು ನಾಲ್ಕು ಹಂತದಲ್ಲಿ ತನಗೆ ಆಹಾರ ಸಿಗುವ ಗಿಡದಲ್ಲಿ ಮೊಟ್ಟೆ ಇಟ್ಟು ನಂತರ ಲಾರ್ವಾ ಸ್ಥಿತಿಗೆ ತಲುಪುತ್ತವೆ.
ಅವುಗಳು ಎಲೆಗಳನ್ನ ತಿಂದು ಪಿಫಾ ಸ್ಥಿತಿಗೆ ತಲುಪಿ ಬಳಿಕ ರೂಪಾಂತರಿಯಾಗಿ ಬಣ್ಣ ಬಣ್ಣದ ಚಿಟ್ಟೆಗಳಾಗುತ್ತವೆ. ಇದಕ್ಕೆ ತಕ್ಕಂತೆ ಸಸ್ಯ, ಹೂವು ಗಿಡ ಬೆಳೆಸಿ ನಿರ್ವಹಣೆ ಮಾಡಲಾಗುತ್ತಿದೆ.
5 / 6
ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರಿಗೆ ಚಿಟ್ಟೆಗಳು, ಮೊಟ್ಟೆ, ಲಾರ್ವಾ,ಮರಿಗಳ ಸಂಪೂರ್ಣ ಮಾಹಿತಿಯನ್ನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ.
ಚಿಟ್ಟೆ ಪಾರ್ಕ್ ನಲ್ಲಿನ ರಾಶಿ ರಾಶಿ ಚಿಟ್ಟೆಗಳನ್ನ ಕಂಡು ಪ್ರವಾಸಿಗರು ಫುಲ್ ಏಂಜಾಯ್ ಮಾಡುತ್ತಿದ್ದಾರೆ.
6 / 6
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿಟ್ಟೆ ಪಾರ್ಕ್ ನಲ್ಲಿನ ರಾಶಿ ರಾಶಿ ಕಲರ್ ಫುಲ್ ಚಿಟ್ಟೆಗಳಿಂದ ಮತ್ತಷ್ಟು ತನ್ನ ಸೌಂದರ್ಯ ಹೆಚ್ಚಾಗಿದೆ.
ನೀವು ಒಮ್ಮೆ ಭೇಟಿ ಕೊಟ್ಟು ಸುಂದರವಾದ ಪ್ರಕೃತಿ ಸೌಂದರ್ಯದ ಮಧ್ಯೆ ವಿಧವಿಧವಾದ ಚಿಟ್ಟೆಗಳ ಸ್ವಚ್ಚಂದ ಹಾರಾಟದ ಸುಂದರ ದೃಶ್ಯವನ್ನ ಕಣ್ತುಂಬಿಕೊಳ್ಳಬಹುದಾಗಿದೆ.
Published On - 8:35 pm, Sun, 15 October 23