ಸಾವಿರ ಕಿ.ಮೀ ಕ್ರಮಿಸಿದ ಭಾರತ್ ಜೋಡೋ ಪಾದಯಾತ್ರೆ: ಬಳ್ಳಾರಿ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ, ಜನರಿಗೆ ಎದುರಾಯ್ತು ಟ್ರಾಫಿಕ್ ಸಮಸ್ಯೆ
TV9 Web | Updated By: ಆಯೇಷಾ ಬಾನು
Updated on:
Oct 15, 2022 | 11:09 AM
ಒಳ್ಳಾರಿ: ರಾಜ್ಯದಲ್ಲಿ 16ನೇ ದಿನದ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ಪುನರಾರಂಭವಾಗಿದೆ. ಬಳ್ಳಾರಿ, ಹಲಕುಂದಿ ಮಠದಿಂದ ಪಾದಯಾತ್ರೆ ಆರಂಭವಾಗಿದೆ. ರಾಹುಲ್ ಗಾಂಧಿ ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದಂತೆ ರಾಹುಲ್ ಬರುವ ರಸ್ತೆಯ ಮೇಲೆ ಬಣ್ಣ ಬಣ್ಣಗಳ ರಂಗೋಲಿಯಿಂದ ಅಲಂಕಾರ ಮಾಡಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲಾಗಿದೆ. ಇಂದು ಬಳ್ಳಾರಿ ತಲುಪುವ ಮೂಲಕ ಯಾತ್ರೆ 1,000 ಕಿ.ಮೀ. ಕ್ರಮಿಸಿದೆ.
1 / 7
ಒಳ್ಳಾರಿ: ರಾಜ್ಯದಲ್ಲಿ 16ನೇ ದಿನದ ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ ಪುನರಾರಂಭವಾಗಿದೆ. ಬಳ್ಳಾರಿ, ಹಲಕುಂದಿ ಮಠದಿಂದ ಪಾದಯಾತ್ರೆ ಆರಂಭವಾಗಿದೆ. ರಾಹುಲ್ ಗಾಂಧಿ ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದಂತೆ ರಾಹುಲ್ ಬರುವ ರಸ್ತೆಯ ಮೇಲೆ ಬಣ್ಣ ಬಣ್ಣಗಳ ರಂಗೋಲಿಯಿಂದ ಅಲಂಕಾರ ಮಾಡಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲಾಗಿದೆ. ಇಂದು ಬಳ್ಳಾರಿ ತಲುಪುವ ಮೂಲಕ ಯಾತ್ರೆ 1,000 ಕಿ.ಮೀ. ಕ್ರಮಿಸಿದೆ.
2 / 7
ಬಳ್ಳಾರಿಯ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಅಚ್ಚೇ ದಿನ್ ಮೋದಿ ಗಿಫ್ಟ್ ಎಂಬ ವ್ಯಂಗ್ಯ ಪ್ರದರ್ಶನ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ಭಿತ್ತಿಚಿತ್ರ ಪ್ರದರ್ಶನ ಮಾಡಿದೆ.
3 / 7
ಪಾದಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಗಿಯಾಗಿದ್ದಾರೆ. ಬಳ್ಳಾರಿ ನಗರದ ಒಳಗೆ ಪಾದಯಾತ್ರೆ ಸಾಗುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ಪಾದಯಾತ್ರೆಯಲ್ಲಿ ಸೇರಿಕೊಂಡರು. ಪಾದಯಾತ್ರೆ ನಡುವೆ ಅನ್ನ ರಾಮಯ್ಯ ಕ್ಯಾಂಟಿನ್ನಲ್ಲಿ ಜನರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯ ಹೆಸರಿನಲ್ಲಿ ಅಭಿಮಾನಿಗಳು ತೆರೆದ ಕ್ಯಾಂಟಿನ್ ಇದು.
4 / 7
ಬಳ್ಳಾರಿಯಲ್ಲಿ ಕಾಂಗ್ರೆಸ್ನ ‘ಜೋಡೋ’ ಯಾತ್ರೆ ಹಿನ್ನೆಲೆ ಇಂದು ನಗರದ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಟ್ರಾಫಿಕ್ನಿಂದಾಗಿ ಮಕ್ಕಳು ಪರದಾಡಬಾರದೆಂದು ರಜೆ ನೀಡಿ ಬಳ್ಳಾರಿ ಡಿಸಿ ಪವನ್ ಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.
5 / 7
ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆ ಪ್ರಮುಖ ಸರ್ಕಲ್, ರಸ್ತೆಗಳನ್ನ ಪೊಲೀಸರು ಬ್ಲಾಕ್ ಮಾಡಿದ್ದಾರೆ. ನಗರದಲ್ಲಿಂದು ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಬಳ್ಳಾರಿ ನಗರದ ರಾಯಲ್ ಸರ್ಕಲ್, ಮೋತಿ ಸರ್ಕಲ್, ಎಸ್ಪಿ ಸರ್ಕಲ್ನಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
6 / 7
ಭಾರತ್ ಜೋಡೋ ಯಾತ್ರೆಗೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. 351 ಪೊಲೀಸ್ ಅಧಿಕಾರಿಗಳು, 1,704 ಕಾನ್ಸ್ಟೇಬಲ್ಗಳು, 450 ಗೃಹರಕ್ಷಕದಳ ಸಿಬ್ಬಂದಿ, 5 KSRP, 10 DAR ತುಕಡಿ, 3 ASP, 10 DySP, 37 ಸಿಪಿಐ, 103 PSI ನಿಯೋಜನೆ ಮಾಡಲಾಗಿದ್ದು ವಿಜಯನಗರ, ಕೊಪ್ಪಳ ಹಾಗೂ ರಾಯಚೂರು, ಕಲಬುರಗಿ, ಗದಗದಿಂದ ಭದ್ರತೆಗೆ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ.
7 / 7
ಕಮ್ಮಾ ಭವನ ತಲುಪಿದ ನಂತರ ಪಾದಯಾತ್ರೆ ಅಂತ್ಯವಾಗಿದ್ದು ಸದ್ಯ ಕಮ್ಮಾ ಭವನದಲ್ಲಿ ರಾಹುಲ್ ಗಾಂಧಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಧ್ಯಾಹ್ನ 1.30ಕ್ಕೆ ಸಮಾವೇಶದಲ್ಲಿ ರಾಹುಲ್ ಭಾಗವಹಿಸಲಿದ್ದಾರೆ.
Published On - 10:24 am, Sat, 15 October 22