1983 world cup final: 1983 ರ ವಿಶ್ವಕಪ್ ಫೈನಲ್‌ನ ಆ 5 ರೋಚಕ ಕ್ಷಣಗಳನ್ನು ಭಾರತ ಎಂದಿಗೂ ಮರೆಯುವುದಿಲ್ಲ
TV9 Web | Updated By: ಪೃಥ್ವಿಶಂಕರ
Updated on:
Jun 24, 2022 | 2:14 PM
1983 world cup final: ಮೊಹಿಂದರ್ ಅಮರನಾಥ್ 1983 ರ ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜೊತೆಗೆ ಫೈನಲ್‌ನಲ್ಲಿ ಪಂದ್ಯದ ಆಟಗಾರ ಎಂಬ ಗೌರವವನ್ನೂ ಪಡೆದರು. ಈ ಪಂದ್ಯದಲ್ಲಿ ಅಮರನಾಥ್ ಮೂರು ವಿಕೆಟ್ ಪಡೆದರು.
1 / 6
ಇಂದಿನ ಕಾಲದಲ್ಲಿ ಭಾರತವನ್ನು ಕ್ರಿಕೆಟ್‌ನಲ್ಲಿ ಸೂಪರ್ ಪವರ್ ಎಂದು ಕರೆಯಲಾಗುತ್ತದೆ. ಪ್ರಸ್ತುತ ಭಾರತ ಕ್ರಿಕೆಟ್ ತಂಡವು ಯಾವುದೇ ದೇಶಕ್ಕೆ ಹೋಗಿ ಗೆಲ್ಲುವ ತಂಡ ಎಂದು ಪರಿಗಣಿಸಲಾಗಿದೆ. ಆದರೆ ಒಂದು ಕಾಲದಲ್ಲಿ ಹಾಗಿರಲಿಲ್ಲ. ಭಾರತವನ್ನು ಕ್ರಿಕೆಟ್ ಜಗತ್ತಿನಲ್ಲಿ ದುರ್ಬಲ ತಂಡಗಳೆಂದು ಪರಿಗಣಿಸಲಾಗಿತ್ತು. ನಂತರ 25 ಜೂನ್ 1983 ರ ದಿನ ಇಡೀ ಜಗತ್ತೆ ಭಾರತದತ್ತ ತಿರುಗಿ ನೋಡುವಂತ್ತಾಗಿತ್ತು. ಈ ದಿನ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತನ್ನ ಮೊದಲ ವಿಶ್ವಕಪ್ ಗೆದ್ದಿತು. ಅದೂ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ. ಇಲ್ಲಿಂದ ಭಾರತೀಯ ಕ್ರಿಕೆಟ್ ಕಥೆಯೇ ಬದಲಾಯಿತು. ಆ ಫೈನಲ್ ಪಂದ್ಯದ ಐದು ವಿಶೇಷ ವಿಷಯಗಳನ್ನು ನಾವು ನಿಮಗೆ ಹೇಳಲಿದ್ದೇವೆ.
2 / 6
ಈ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟ್ ಮಾಡಿತ್ತು. ಸುನಿಲ್ ಗವಾಸ್ಕರ್ ಕೇವಲ ಎರಡು ರನ್ ಗಳಿಸಿ ಔಟಾದರು. ಆದರೆ ಜೊತೆಗಾರ ಕೃಷ್ಣಾಚಾರಿ ಶ್ರೀಕಾಂತ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 38 ರನ್ ಗಳಿಸಿದರು. ಚುರುಕಾಗಿ ಬ್ಯಾಟಿಂಗ್ ಮಾಡಿದ ಶ್ರೀಕಾಂತ್ 57 ಎಸೆತಗಳನ್ನು ಎದುರಿಸಿ ಏಳು ಬೌಂಡರಿಗಳ ಜತೆಗೆ ಒಂದು ಸಿಕ್ಸರ್ ಬಾರಿಸಿದರು. ಈ ಪಂದ್ಯದಲ್ಲಿ ಶ್ರೀಕಾಂತ್ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಭಾರತ 183 ರನ್ ಗಳಿಸಿತ್ತು.
3 / 6
4 / 6
5 / 6
6 / 6
Published On - 2:14 pm, Fri, 24 June 22