
ಭಾರತೀಯ ಟಿ20 ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಅಧ್ಯಾಯ ಮುಂದುವರೆದಿದೆ. 2024ರಲ್ಲಿ ಶುರುವಾದ ಈ ಹೊಸ ಅಧ್ಯಾಯದಿಂದ ಕೇವಲ 3 ವರ್ಷಗಳಲ್ಲಿ ಆರ್ಸಿಬಿಗೆ ದಕ್ಕಿದ್ದು ಬರೋಬ್ಬರಿ 4 ಟ್ರೋಫಿಗಳು. ಅದರಲ್ಲೂ ಐಪಿಎಲ್ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟ ಅಲಂಕರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಗಿದ್ರೆ ಕಳೆದ ಮೂರು ವರ್ಷಗಳಲ್ಲಿ ಆರ್ಸಿಬಿ ಗೆದ್ದಿರುವ ಟ್ರೋಫಿಗಳಾವುವು ಎಂದು ನೋಡೋಣ.. (PC: IPL)

2024 - ಮೊದಲ WPL ಟ್ರೋಫಿ: ಸ್ಮೃತಿ ಮಂಧಾನ ನೇತೃತ್ವದ RCB ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಫ್ರಾಂಚೈಸಿ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಟ್ರೋಫಿಯೊಂದಿಗೆ ಆರ್ಸಿಬಿ ಹೊಸ ಅಧ್ಯಾಯ ಆರಂಭಿಸಿದ್ದರು. (PC: WPL)

2025 - ಮೊದಲ IPL ಟ್ರೋಫಿ: ಹದಿನೇಳು ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆ ಎಳೆದ ಪುರುಷರ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು. ಈ ಮೂಲಕ ಐಪಿಎಲ್ನಲ್ಲೂ ಆರ್ಸಿಬಿ ಪ್ರಶಸ್ತಿ ಖಾತೆ ತೆರೆಯಿತು. (PC: IPL)

2026 - ಎರಡನೇ WPL ಟ್ರೋಫಿ: ಫೆಬ್ರವರಿ 2026 ರಲ್ಲಿ ನಡೆದ ರೋಮಾಂಚಕ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲೆಯ ರನ್ ಚೇಸ್ ಮಾಡುವ ಮೂಲಕ ಆರ್ಸಿಬಿ ಮಹಿಳಾ ತಂಡ 2ನೇ ಬಾರಿಗೆ ಕಪ್ ಗೆದ್ದುಕೊಂಡಿತು. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ 2 ಟ್ರೋಫಿ ಗೆದ್ದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದರು. (PC: WPL)

2026 - ಎರಡನೇ IPL ಟ್ರೋಫಿ: ಇದೀಗ 2026ರ ಐಪಿಎಲ್ ಸೀಸನ್‌ನಲ್ಲೂ ರಜತ್ ಪಾಟಿದಾರ್ ನೇತೃತ್ವದ ಆರ್ಸಿಬಿ ಪುರುಷರ ತಂಡ ಮತ್ತೊಮ್ಮೆ ಟ್ರೋಫಿ ಮುಡಿಗೇರಿಸಿಕೊಂಡಿದೆ. ಈ ಮೂಲಕ ಐಪಿಎಲ್ನಲ್ಲಿ ಬ್ಯಾಕ್-ಟು-ಬ್ಯಾಕ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ವಿಶೇಷ ದಾಖಲೆ ಬರೆದಿದ್ದಾರೆ. (PC: IPL)