ಸಂಜು ಟು ಯುವರಾಜ್; ಯೋ- ಯೋ ಟೆಸ್ಟ್‌ನಲ್ಲಿ ಫೇಲ್ ಆದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಿವರು
ಕೊಹ್ಲಿ ಟೀಂ ಇಂಡಿಯಾದ ನಾಯಕನಾದ ಬಳಿಕ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾದವು. ಅದರಲ್ಲಿ ಪ್ರಮುಖವಾದದ್ದು, ಪ್ರತಿಯೊಬ್ಬ ಆಟಗಾರನ ಫಿಟ್ನೆಸ್. ಹೀಗಾಗಿ 2017 ರಲ್ಲಿ, ತಂಡದ ಆಡಳಿತ ಮಂಡಳಿಯೂ ಯೋ-ಯೋ ಪರೀಕ್ಷೆಯನ್ನು ಕಡ್ಡಾಯಗೊಳಿಸಿತು. ಅಂದಿನಿಂದ ಈ ಪರೀಕ್ಷೆಯಲ್ಲಿ ಫೇಲ್ ಆದವರನ್ನು ತಂಡದಿಂದ ಕೈಬಿಡಲು ನಿರ್ಧರಿಸಲಾಯಿತು.
1 / 7
ಕೊಹ್ಲಿ ಟೀಂ ಇಂಡಿಯಾದ ನಾಯಕನಾದ ಬಳಿಕ ತಂಡದಲ್ಲಿ ಸಾಕಷ್ಟು ಬದಲಾವಣೆಗಳಾದವು. ಅದರಲ್ಲಿ ಪ್ರಮುಖವಾದದ್ದು, ಪ್ರತಿಯೊಬ್ಬ ಆಟಗಾರನ ಫಿಟ್ನೆಸ್. ಹೀಗಾಗಿ 2017 ರಲ್ಲಿ, ತಂಡದ ಆಡಳಿತ ಮಂಡಳಿಯೂ ಯೋ-ಯೋ ಪರೀಕ್ಷೆಯನ್ನು ಕಡ್ಡಾಯಗೊಳಿಸಿತು. ಅಂದಿನಿಂದ ಈ ಪರೀಕ್ಷೆಯಲ್ಲಿ ಫೇಲ್ ಆದವರನ್ನು ತಂಡದಿಂದ ಕೈಬಿಡಲು ನಿರ್ಧರಿಸಲಾಯಿತು. ಅಲ್ಲದೆ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸಲಾಯಿತು.
2 / 7
ಇತ್ತೀಚೆಗೆ, ಟೀಂ ಇಂಡಿಯಾ ಆಟಗಾರರು 2023 ರ ಏಷ್ಯಾಕಪ್‌ಗಾಗಿ ಶ್ರೀಲಂಕಾಕ್ಕೆ ಹಾರುವ ಮೊದಲು ಆಲೂರಿನಲ್ಲಿ ಯೋ-ಯೋ ಟೆಸ್ಟ್ ತೆಗೆದುಕೊಂಡಿದ್ದರು. ಇದರಲ್ಲಿ ಕೆಲವು ಕ್ರಿಕೆಟಿಗರ ಪರೀಕ್ಷೆಯ ರಿಸಲ್ಟ್ ಎಲ್ಲರನ್ನೂ ಅಚ್ಚರಿಗೊಳಿಸಿತ್ತು. ಸಿಕ್ಕಿರುವ ಮಾಹಿತಿ ಪ್ರಕಾರ ಯೋ ಯೋ ಟೆಸ್ಟ್ ತೆಗೆದುಕೊಂಡವರೆಲ್ಲ ಪಾಸ್ ಆಗಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಕೆಲವೇ ವರ್ಷಗಳ ಹಿಂದೆ ಈ ಟೆಸ್ಟ್‌ನಲ್ಲಿ ಪಾಸ್ ಆಗದೆ ಟೀಂ ಇಂಡಿಯಾದ ಅವಕಾಶ ವಂಚಿತರಾದ ಸಾಕಷ್ಟು ಆಟಗಾರರಿದ್ದಾರೆ. ಅವರಲ್ಲಿ ಈ ನಾಲ್ಕು ಕ್ರಿಕೆಟಿಗರು ಪ್ರಮುಖರಾಗಿದ್ದಾರೆ.
3 / 7
ಸಂಜು ಸ್ಯಾಮ್ಸನ್: 2018 ರಲ್ಲಿ ಭಾರತ ಎ ತಂಡ ಇಂಗ್ಲೆಂಡ್ ಪ್ರವಾಸ ಮಾಡುವ ಮೊದಲು ಯೋ- ಯೋ ಟೆಸ್ಟ್ ಮಾಡಲಾಗಿತ್ತು. ಆ ಪರೀಕ್ಷೆಯಲ್ಲಿ ಸಂಜು ಸ್ಯಾಮ್ಸನ್ ವಿಫಲರಾಗಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು. ಪರೀಕ್ಷೆಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾದ ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಯಿತು.
4 / 7
ಆ ಬಳಿಕ ಒಂದು ತಿಂಗಳ ನಂತರ ನಡೆದ ಯೋ-ಯೋ ಟೆಸ್ಟ್‌ನಲ್ಲಿ ತೇರ್ಗಡೆಯಾದ ಸಂಜುರನ್ನು ಭಾರತ A ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೆ ಟೀಂ ಇಂಡಿಯಾಕ್ಕೆ ಮರಳಲು ಸ್ಯಾಮ್ಸನ್ಗೆ ಬರೋಬ್ಬರಿ ನಾಲ್ಕು ವರ್ಷಗಳು ಬೇಕಾಯಿತು. ಇದಲ್ಲದೆ ಟೀಂ ಇಂಡಿಯಾಕ್ಕೆ ಮರಳಿದ ನಂತರವೂ ಸಂಜುಗೆ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
5 / 7
ಯುವರಾಜ್ ಸಿಂಗ್: 2017 ರಲ್ಲಿ ಶ್ರೀಲಂಕಾ ವಿರುದ್ಧದ ವೈಟ್-ಬಾಲ್ ಸರಣಿಯಿಂದ ಯುವರಾಜ್ ಸಿಂಗ್ ಅವರನ್ನು ಕೈಬಿಡಲಾಗಿತ್ತು. ನಂತರ, ಯೋ-ಯೋ ಟೆಸ್ಟ್‌ನಲ್ಲಿ ಯುವಿ ವಿಫಲರಾದ ಕಾರಣ ಸ್ಟಾರ್ ಆಲ್‌ರೌಂಡರ್ ಅವರನ್ನು ತಂಡದಿಂದ ಕೈಬಿಡಲಾಯಿತು ಎಂದು ಪಿಟಿಐ ವರದಿ ಮಾಡಿತ್ತು. ಆ ವರ್ಷದ ನಂತರ ಯುವರಾಜ್ ಯೋ-ಯೋ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆದರೆ ಅವರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿ ಕರೆಸಿಕೊಳ್ಳಲಿಲ್ಲ.
6 / 7
ಅಂಬಟಿ ರಾಯುಡು: 2018 ರ ಐಪಿಎಲ್ನಲ್ಲಿ ಮಿಂಚಿನ ಪ್ರದರ್ಶನ ನೀಡುವ ಮೂಲಕ ಅಂಬಾಟಿ ರಾಯುಡು ಟೀಮ್ ಇಂಡಿಯಾಕ್ಕೆ ಪುನರಾಗಮನ ಮಾಡಿದರು. ಆದರೆ ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾದ ಕಾರಣ ಅವರನ್ನು ತಂಡದಿಂದ ಕೈಬಿಡಲಾಯಿತು. ರಾಯುಡು ಅವರು ಏಷ್ಯಾಕಪ್‌ಗೆ ತಂಡದಲ್ಲಿ ಸ್ಥಾನ ಪಡೆಯುವ ಮೊದಲು ಟೆಸ್ಟ್‌ನಲ್ಲಿ ಉತ್ತೀರ್ಣರಾಗಿದ್ದರು. ಆದರೆ ಅವರನ್ನು 2019 ರ ವಿಶ್ವಕಪ್‌ಗಾಗಿ ತಂಡದಿಂದ ಆಶ್ಚರ್ಯಕರವಾಗಿ ಕೈಬಿಡಲಾಯಿತು.
7 / 7
ಮೊಹಮ್ಮದ್ ಶಮಿ: ಐಪಿಎಲ್ 2018 ರ ನಂತರ ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾದ ಮೂವರು ಆಟಗಾರರಲ್ಲಿ ಮೊಹಮ್ಮದ್ ಶಮಿ ಒಬ್ಬರು. ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೂ ಮೊದಲು ನಡೆದ ಈ ಪರೀಕ್ಷೆಯಲ್ಲಿ ಶಮಿ ಫೇಲ್ ಆಗಿದ್ದರು. ಹೀಗಾಗಿ ಅವರ ಬದಲಿಗೆ ನವದೀಪ್ ಸೈನಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು.
Published On - 12:51 pm, Thu, 31 August 23