ರನ್ ಮೆಷಿನ್ ವಿರಾಟ್ ಕೊಹ್ಲಿ ಕೂಡ ದಾಖಲೆ ಮುರಿಯಲು ತುದಿಗಾಲಲ್ಲಿ ನಿಂತಿದ್ದಾರೆ. 13,000 ODI ರನ್‌ಗಳನ್ನು ತಲುಪಲು ಕೊಹ್ಲಿಗೆ ಕೇವಲ 102 ರನ್‌ಗಳ ಅಗತ್ಯವಿದೆ, ಈ ಸಾಧನೆ ಮಾಡಿದ ಎರಡನೇ ಭಾರತೀಯರಾಗಲಿದ್ದಾರೆ. ಅಲ್ಲದೆ ಸಚಿನ್ ತೆಂಡೂಲ್ಕರ್ ಅವರ 34,357 ಅಂತರರಾಷ್ಟ್ರೀಯ ರನ್‌ಗಳ ಬೃಹತ್ ದಾಖಲೆಯ ಮೇಲೆ ಕಣ್ಣಿಟ್ಟಿದ್ದು, ಇದನ್ನು ಮುರಿಯಲು 418 ರನ್‌ಗಳು ಬಾಕಿಯಿದೆ.