World Record: ವಿಶ್ವದ ಅತೀ ವೇಗದ ಬೌಲಿಂಗ್ ದಾಖಲೆ ಮೇಲೆ ಐವರು ವೇಗಿಗಳ ಕಣ್ಣು

| Updated By: ಝಾಹಿರ್ ಯೂಸುಫ್

Updated on: Nov 25, 2021 | 9:21 PM

Shoaib Akhtar: ಶೊಯೇಬ್ ಅಖ್ತರ್ ಅವರ ವಿಶ್ವ ದಾಖಲೆಯನ್ನು ಈ ವೇಗಿಗಳು ಮುರಿದರೂ ಅಚ್ಚರಿಪಡಬೇಕಿಲ್ಲ. ಹಾಗಿದ್ರೆ ವಿಶ್ವದ ವೇಗದ ಎಸೆತದ ದಾಖಲೆ ಮುರಿಯಬಲ್ಲ ಟಾಪ್ 5 ವೇಗಿಗಳು ಯಾರೆಲ್ಲಾ ನೋಡೋಣ...

1 / 7
World Record: ವಿಶ್ವದ ಅತೀ ವೇಗದ ಬೌಲಿಂಗ್ ದಾಖಲೆ ಮೇಲೆ ಐವರು ವೇಗಿಗಳ ಕಣ್ಣು

2 / 7
 ಇವರಲ್ಲಿ ಐವರು ವೇಗಿಗಳು ಸ್ಥಿರವಾಗಿ 150 ರ ಅಸುಪಾಸಿನಲ್ಲಿ ಚೆಂಡೆಸುತ್ತಿರುವುದು ವಿಶೇಷ. ಹೀಗಾಗಿ ಮುಂಬರುವ ದಿನಗಳಲ್ಲಿ ಶೊಯೇಬ್ ಅಖ್ತರ್ ಅವರ ವಿಶ್ವ ದಾಖಲೆಯನ್ನು ಈ ವೇಗಿಗಳು ಮುರಿದರೂ ಅಚ್ಚರಿಪಡಬೇಕಿಲ್ಲ. ಹಾಗಿದ್ರೆ ವಿಶ್ವದ ವೇಗದ ಎಸೆತದ ದಾಖಲೆ ಮುರಿಯಬಲ್ಲ ಟಾಪ್ 5 ವೇಗಿಗಳು ಯಾರೆಲ್ಲಾ ನೋಡೋಣ...

3 / 7
 ಜೋಫ್ರಾ ಆರ್ಚರ್: ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಸ್ಥಿರವಾಗಿ 150ರ ಅಸುಪಾಸಿನಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ವೇಗಿ. ಅದರಲ್ಲೂ ಈಗಾಗಲೇ 153.62 ಕಿ.ಮೀ. ವೇಗದಲ್ಲಿ ಚೆಂಡೆಸೆದಿದ್ದಾರೆ. ಹೀಗಾಗಿ ಮುಂದೊಂದು ದಿನ ಆರ್ಚರ್ ಅಖ್ತರ್ ದಾಖಲೆ ಮುರಿಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

4 / 7
ಅನ್ರಿಕ್ ನೋಕಿಯಾ: ದಕ್ಷಿಣ ಆಫ್ರಿಕಾ ವೇಗಿ ಪ್ರಸ್ತುತ ಕ್ರಿಕೆಟ್​ ಅಂಗಳದಲ್ಲಿ ವೇಗದ ಮೂಲಕ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಐಪಿಎಲ್ 2020 ರ ಸೀಸನ್​ನಲ್ಲಿ 156.22 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಅಷ್ಟೇ ಅಲ್ಲದೆ ಅವರು ಇತ್ತೀಚೆಗೆ ಐಸಿಸಿ ಟಿ 20 ವಿಶ್ವಕಪ್​ನಲ್ಲೂ 153 ಕಿಮೀ ವೇಗದಲ್ಲಿ ಚೆಂಡೆಸೆದಿದ್ದರು. ಈ ಸ್ಥಿರತೆ ಕಾಯ್ದುಕೊಂಡರೆ ಅಖ್ತರ್ ದಾಖಲೆಯು ಅನ್ರಿಕ್ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ.

5 / 7
ಮಾರ್ಕ್​ವುಡ್​: ಇಂಗ್ಲೆಂಡ್ ವೇಗಿ ಮಾರ್ಕ್​ವುಡ್​ ಕೂಡ 150-155 ರ ಅಸುಪಾಸಿನಲ್ಲಿ ಚೆಂಡೆಸೆಯುವ ಸಾಮರ್ಥ್ಯ ಹೊಂದಿರುವ ಬೌಲರ್. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 155 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದಾರೆ. 150 ರಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಮಾರ್ಕ್​ವುಡ್ ಕೂಡ ಅಖ್ತರ್ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಹೊಂದಿರುವ ಬೌಲರ್​.

6 / 7
 ಲಾಕಿ ಫರ್ಗುಸನ್: ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗುಸನ್ ಐಪಿಎಲ್ 2021 ರಲ್ಲಿ ಕೆಕೆಆರ್ ಪರ 153.63 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದಾರೆ. ಅಷ್ಟೇ ಅಲ್ಲದೆ 150 ರ ಅಸುಪಾಸಿನಲ್ಲಿ ಬೌಲಿಂಗ್ ಮಾಡುತ್ತಾರೆ. ಹೀಗಾಗಿ ಫರ್ಗುಸನ್ ಕೂಡ ಅತೀ ವೇಗದ ಬೌಲಿಂಗ್​ ವಿಶ್ವ ದಾಖಲೆಯನ್ನು ಮುರಿಯಬಹುದು.

7 / 7
 ಹ್ಯಾರಿಸ್ ರೌಫ್: ಪಾಕಿಸ್ತಾನ್ ತಂಡದ ವೇಗಿ ಹ್ಯಾರಿಸ್ ರೌಫ್ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಅಫ್ಘಾನಿಸ್ತಾನದ ವಿರುದ್ಧ 153 ಕಿಮೀ ವೇಗದಲ್ಲಿ ಚೆಂಡೆಸೆದಿದ್ದರು. ಹೀಗಾಗಿ ಭವಿಷ್ಯದಲ್ಲಿ ಶೋಯೆಬ್ ಅಖ್ತರ್ ಅವರ ವೇಗದ ಎಸೆತದ ದಾಖಲೆಯನ್ನು ರೌಫ್ ಮುರಿಯಬಹುದು.