Aaron Finch: ರೋಹಿತ್ ಶರ್ಮಾರ ವಿಶ್ವ ದಾಖಲೆ ಮುರಿದ ಆರೋನ್ ಫಿಂಚ್

| Updated By: ಝಾಹಿರ್ ಯೂಸುಫ್

Updated on: Oct 10, 2022 | 10:59 AM

Aaron Finch: ಟಿ20 ಕ್ರಿಕೆಟ್​ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 3 ಸಾವಿರ ರನ್​ ಪೂರೈಸಿದ ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ನೋಡೋಣ...

1 / 9
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ 12 ರನ್​ಗಳಿಸಿ ಔಟಾಗಿದ್ದರು. ಈ ಹನ್ನೆರಡು ರನ್​ಗಳೊಂದಿಗೆ ಫಿಂಚ್ ಟಿ20 ಕ್ರಿಕೆಟ್​ನಲ್ಲಿ 3000 ರನ್ ಪೂರೈಸಿದ್ದಾರೆ.

2 / 9
ಅಲ್ಲದೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ವಿಶ್ವದ 6ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ ಟಿ20 ಕ್ರಿಕೆಟ್​ನಲ್ಲಿ ಅತೀ ಕಡಿಮೆ ಎಸೆತಗಳನ್ನು ಎದುರಿಸಿ ಈ ಸಾಧನೆಗೈದ ವಿಶೇಷ ದಾಖಲೆ ಇದೀಗ ಫಿಂಚ್ ಪಾಲಾಗಿದೆ.

3 / 9
ಈ ಹಿಂದೆ ಈ ದಾಖಲೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಹಿಟ್​ಮ್ಯಾನ್ ಟಿ20 ಕ್ರಿಕೆಟ್​ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 3 ಸಾವಿರ ರನ್ ಪೂರೈಸಿದ್ದರು. ಇದೀಗ ಈ ದಾಖಲೆಯನ್ನು ಮುರಿದು ಆರೋನ್ ಫಿಂಚ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಗಿದ್ರೆ ಟಿ20 ಕ್ರಿಕೆಟ್​ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ 3 ಸಾವಿರ ರನ್​ ಪೂರೈಸಿದ ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ನೋಡೋಣ...

4 / 9
1- ಆರೋನ್ ಫಿಂಚ್: ಆಸ್ಟ್ರೇಲಿಯಾ ತಂಡದ ನಾಯಕ ಫಿಂಚ್ ಟಿ20 ಕ್ರಿಕೆಟ್​ನಲ್ಲಿ ಕೇವಲ 2078 ಎಸೆತಗಳಲ್ಲಿ 3 ಸಾವಿರ ರನ್ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

5 / 9
2- ರೋಹಿತ್ ಶರ್ಮಾ: ಹಿಟ್​ಮ್ಯಾನ್ ಟಿ20 ಕ್ರಿಕೆಟ್​ನಲ್ಲಿ 3 ಸಾವಿರ ರನ್ ಪೂರೈಸಲು 2149 ಎಸೆತಗಳನ್ನು ತೆಗೆದುಕೊಂಡಿದ್ದಾರೆ.

6 / 9
3- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಕೊಹ್ಲಿ 2169 ಎಸೆತಗಳ ಮೂಲಕ 3000 ರನ್ ಪೂರೈಸಿದ್ದರು.

7 / 9
4- ಮಾರ್ಟಿನ್ ಗಪ್ಟಿಲ್: ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 2203 ಎಸೆತಗಳಲ್ಲಿ 3 ಸಾವಿರ ರನ್ ಕಲೆಹಾಕಿದ್ದರು.

8 / 9
5- ಪೌಲ್ ಸ್ಟೀರ್ಲಿಂಗ್: ಐರ್ಲೆಂಡ್ ಆಟಗಾರ ಪೌಲ್ ಸ್ಟೀರ್ಲಿಂಗ್ 2226 ಎಸೆತಗಳ ಮೂಲಕ ಟಿ20 ಯಲ್ಲಿ 3 ಸಾವಿರ ರನ್ ಪೂರೈಸಿದ್ದರು.

9 / 9
6- ಬಾಬರ್ ಆಜಂ: ಪಾಕ್ ತಂಡದ ನಾಯಕ ಬಾಬರ್ ಆಜಂ ಟಿ20 ಕ್ರಿಕೆಟ್​ನಲ್ಲಿ 2317 ಎಸೆತಗಳನ್ನು ಎದುರಿಸಿ 3 ಸಾವಿರ ರನ್ ಕಲೆಹಾಕಿದ್ದಾರೆ.