T20 Records: ಟಿ20ಯಲ್ಲಿ ಸಿಕ್ಸ್​ ಸಿಡಿಸದೇ ಅತ್ಯಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?

T20 Records: ಟಿ20 ಯಲ್ಲಿ ಸಿಕ್ಸ್ ಬಾರಿಸದೇ ಕಲೆಹಾಕಲಾದ ಗರಿಷ್ಠ ಸ್ಕೋರ್​ಗಳು ಯಾವುವು, ಅದನ್ನು ಬಾರಿಸಿದ ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ಎಂದು ನೋಡೋಣ...

TV9 Web
| Updated By: ಝಾಹಿರ್ ಯೂಸುಫ್

Updated on:Oct 09, 2022 | 6:11 PM

ಟಿ20 ಕ್ರಿಕೆಟ್​ ಅಂದ್ರೇನೇ ಹೊಡಿಬಡಿ ಆಟ. ಅದರಲ್ಲೂ ಸಿಕ್ಸ್​ಗಳ ಸುರಿಮಳೆಯಾಗುತ್ತಿರುತ್ತವೆ. ಇದಾಗ್ಯೂ ಕೆಲವೊಮ್ಮೆ ಬೌಲರ್​ಗಳು ಸಿಕ್ಸ್​ಗಳನ್ನು ಹೊಡೆಸಿಕೊಳ್ಳದಂತೆ ದಾಳಿ ಸಂಘಟಿಸುತ್ತಾರೆ.

1 / 7
ಇನ್ನು ಕೆಲವೊಮ್ಮೆ ಬ್ಯಾಟ್ಸ್​ಮನ್​ಗಳು ಸಿಕ್ಸ್​ಗಳ ಮೊರೆ ಹೋಗುವುದಿಲ್ಲ. ಬದಲಾಗಿ ಫೋರ್​ಗಳ ಮೂಲಕವೇ ರನ್​ ಗತಿ ಹೆಚ್ಚಿಸುತ್ತಾ ಸಾಗುತ್ತಾರೆ. ಅಂತಹದೊಂದು ಅತ್ಯುತ್ತಮ ಇನಿಂಗ್ಸ್ ಆಡಿದ್ದಾರೆ ಪಾಕ್ ತಂಡದ ನಾಯಕ ಬಾಬರ್ ಆಜಂ.

2 / 7
ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಬಾಬರ್ ಆಜಂ ಅಜೇಯ ಅರ್ಧಶತಕ ಬಾರಿಸಿ ಮಿಂಚಿದ್ದರು. ವಿಶೇಷ ಎಂದರೆ ಈ ಇನಿಂಗ್ಸ್​ನಲ್ಲಿ ಬಾಬರ್ ಬ್ಯಾಟ್​ನಿಂದ ಒಂದೇ ಒಂದು ಸಿಕ್ಸ್ ಮೂಡಿಬಂದಿರಲಿಲ್ಲ. ಇದರೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಸಿಕ್ಸ್ ಬಾರಿಸದೇ ಅತ್ಯಧಿಕ ವೈಯುಕ್ತಿಕ ಮೊತ್ತ ಕಲೆಹಾಕಿದ ಬ್ಯಾಟ್ಸ್​ಮನ್ ಎಂಬ ದಾಖಲೆ ಕೂಡ ಬಾಬರ್ ಪಾಲಾಗಿದೆ. ಹಾಗಿದ್ರೆ ಟಿ20 ಯಲ್ಲಿ ಸಿಕ್ಸ್ ಬಾರಿಸದೇ ಕಲೆಹಾಕಲಾದ ಗರಿಷ್ಠ ಸ್ಕೋರ್​ಗಳು ಯಾವುವು ಎಂದು ನೋಡೋಣ...

3 / 7
1- ಬಾಬರ್ ಆಜಂ: 2022 ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಒಂದು ಸಿಕ್ಸ್ ಬಾರಿಸದೇ ಬಾಬರ್ ಅಜೇಯ 79 ರನ್ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.

4 / 7
2- ಫಾಫ್ ಡುಪ್ಲೆಸಿಸ್: ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ 2015 ರಲ್ಲಿ ಬಾಂಗ್ಲಾದೇಶ್ ವಿರುದ್ದ ಸಿಕ್ಸ್ ಬಾರಿಸದೇ 79 ರನ್​ ಕಲೆಹಾಕಿದ್ದರು.

5 / 7
3- ಮೊಹಮ್ಮದ್ ರಿಜ್ವಾನ್: ಪಾಕ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಜ್ವಾನ್ 2021 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಯಾವುದೇ ಸಿಕ್ಸ್ ಬಾರಿಸದೇ 78 ರನ್ ಕಲೆಹಾಕಿದ್ದರು.

6 / 7
4- ರಿಕಿ ಪಾಂಟಿಂಗ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 2007 ರಲ್ಲಿ ಭಾರತದ ವಿರುದ್ಧ 76 ರನ್ ಬಾರಿಸಿದ್ದರು. ಈ ವೇಳೆ ಒಂದೇ ಒಂದು ಸಿಕ್ಸ್ ಬಾರಿಸಿರಲಿಲ್ಲ ಎಂಬುದು ವಿಶೇಷ.

7 / 7

Published On - 6:09 pm, Sun, 9 October 22

Follow us