T20 Records: ಅತ್ಯಧಿಕ ಟಿ20 ಪಂದ್ಯಗಳನ್ನಾಡಿದ ಭಾರತೀಯ ಆಟಗಾರರು ಯಾರು ಗೊತ್ತೇ?
T20 Cricket Records: ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಭಾರತೀಯ ಆಟಗಾರರು ಯಾರೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
Updated on: Oct 09, 2022 | 5:01 PM

ಟಿ20 ವಿಶ್ವಕಪ್ಗೂ ಮುನ್ನ ಮತ್ತೆ ಚುಟುಕು ಕ್ರಿಕೆಟ್ನ ದಾಖಲೆಗಳು ಮುನ್ನಲೆಗೆ ಬರುತ್ತಿದೆ. ಅದರಲ್ಲೂ 20 ಓವರ್ಗಳ ಕದನದಲ್ಲಿ ಅತ್ಯಧಿಕ ಬಾರಿ ಕಣಕ್ಕಿಳಿದ ದಾಖಲೆ ಯಾರ ಹೆಸರಿನಲ್ಲಿದೆ ಎಂಬ ಚರ್ಚೆಗಳು ಶುರುವಾಗಿದೆ.

ಟೀಮ್ ಇಂಡಿಯಾ ಹಾಗೂ ಐಪಿಎಲ್ನಲ್ಲಿ ಮಾತ್ರ ಕಣಕ್ಕಿಳಿದಿರುವ ಭಾರತ ಟಿ20 ತಂಡದ ನಾಯಕ ರೋಹಿತ್ ಶರ್ಮಾ ಅತ್ಯಧಿಕ ಟಿ20 ಪಂದ್ಯವಾಡಿದ ವಿಶೇಷ ದಾಖಲೆಯೊಂದನ್ನು ಹೊಂದಿದ್ದಾರೆ. ಹಾಗಿದ್ರೆ ಅತೀ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಭಾರತೀಯ ಆಟಗಾರರು ಯಾರೆಲ್ಲಾ ನೋಡೋಣ...

1- ರೋಹಿತ್ ಶರ್ಮಾ: ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಬರೋಬ್ಬರಿ 401 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಮೂಲಕ ಅತ್ಯಧಿಕ ಟಿ20 ಪಂದ್ಯವಾಡಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ ಹಿಟ್ಮ್ಯಾನ್ ಹೊರತುಪಡಿಸಿ ಭಾರತದ ಯಾವುದೇ ಆಟಗಾರ 400 ಟಿ20 ಪಂದ್ಯಗಳನ್ನಾಡಿಲ್ಲ.

2- ದಿನೇಶ್ ಕಾರ್ತಿಕ್: ಅಭಿಮಾನಿಗಳ ಪಾಲಿನ ಡಿಕೆ ಅಲಿಯಾಸ್ ದಿನೇಶ್ ಕಾರ್ತಿಕ್ 368 ಟಿ20 ಪಂದ್ಯಗಳನ್ನಾಡುವ ಮೂಲಕ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

3- ಎಂಎಸ್ ಧೋನಿ: ಟೀಮ್ ಇಂಡಿಯಾದ ಯಶಸ್ವಿ ನಾಯಕ ಧೋನಿ ಒಟ್ಟು 361 ಟಿ20 ಪಂದ್ಯಗಳನ್ನಾಡಿದ್ದಾರೆ.

4- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಆರ್ಸಿಬಿ ಹಾಗೂ ಭಾರತದ ಪರ ಕಣಕ್ಕಿಳಿಯುವ ಮೂಲಕ ಒಟ್ಟು 354 ಟಿ20 ಪಂದ್ಯಗಳನ್ನಾಡಿದ್ದಾರೆ.

5- ಸುರೇಶ್ ರೈನಾ: ಟೀಮ್ ಇಂಡಿಯಾ ಮಾಜಿ ಎಡಗೈ ದಾಂಡಿಗ ಸುರೇಶ್ ರೈನಾ ಒಟ್ಟು 336 ಟಿ20 ಪಂದ್ಯಗಳನ್ನಾಡುವ ಮೂಲಕ ಈ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದಾರೆ.
