Updated on: Oct 09, 2022 | 11:54 AM
ನ್ಯೂಜಿಲೆಂಡ್, ಬಾಂಗ್ಲಾದೇಶ್ ಹಾಗೂ ಪಾಕಿಸ್ತಾನ್ ನಡುವಣ ತ್ರಿಕೋನಾ ಸರಣಿಯಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಜಂ ಭರ್ಜರಿ ಫಾರ್ಮ್ ಮುಂದುವರೆಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ನಡೆದ 2ನೇ ಪಂದ್ಯದಲ್ಲಿ 53 ಎಸೆತಗಳಲ್ಲಿ 79 ರನ್ ಬಾರಿಸುವ ಮೂಲಕ ಬಾಬರ್ ಆಜಂ ಪಾಕ್ ತಂಡಕ್ಕೆ 6 ವಿಕೆಟ್ಗಳ ಜಯ ತಂದುಕೊಟ್ಟರು. ವಿಶೇಷ ಎಂದರೆ ಈ ಅಜೇಯ ಅರ್ಧಶತಕದೊಂದಿಗೆ ಟಿ20ಯಲ್ಲಿ ವಿಶೇಷ ದಾಖಲೆಯನ್ನು ಬಾಬರ್ ಬರೆದಿದ್ದಾರೆ.
ಈ ಹಿಂದೆ ಡೇವಿಡ್ ವಾರ್ನರ್ ಅರ್ಧಶತಕದೊಂದಿಗೆ 9 ಬಾರಿ ಟಿ20 ಕ್ರಿಕೆಟ್ನಲ್ಲಿ ಅಜೇಯರಾಗಿ ಉಳಿದಿದ್ದರು. ಇದೀಗ ಬಾಬರ್ 10ನೇ ಬಾರಿ ಅಜೇಯರಾಗಿ ಅರ್ಧಶತಕ ಬಾರಿಸುವ ಮೂಲಕ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆದರೆ ಈ ಪಟ್ಟಿಯಲ್ಲಿ ಈಗಲೂ ವಿರಾಟ್ ಕೊಹ್ಲಿಯೇ ನಂಬರ್ ಸ್ಥಾನದಲ್ಲಿರುವುದು ವಿಶೇಷ. ಹಾಗಿದ್ರೆ ಟಿ20 ಕ್ರಿಕೆಟ್ನಲ್ಲಿ ಯಾವ ಬ್ಯಾಟ್ಸ್ಮನ್ ಎಷ್ಟು ಬಾರಿ ಅಜೇಯರಾಗಿ ಉಳಿದಿದ್ದಾರೆ ಎಂದು ನೋಡೋಣ...
1- ವಿರಾಟ್ ಕೊಹ್ಲಿ (ಭಾರತ) - 19 ಬಾರಿ
2- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್) - 11 ಬಾರಿ
3- ಬಾಬರ್ ಆಜಂ (ಪಾಕಿಸ್ತಾನ್) - 10 ಬಾರಿ
4- ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 9 ಬಾರಿ
5- ಜೋಸ್ ಬಟ್ಲರ್ (ಇಂಗ್ಲೆಂಡ್) - 8 ಬಾರಿ