Updated on:Oct 08, 2022 | 10:22 PM
2022 ರ ಟಿ 20 ವಿಶ್ವಕಪ್ ಆರಂಭಕ್ಕೆ ದಿನಗಳು ಹತ್ತಿರವಾದಂತೆ ಆಟಗಾರರ ಗಾಯದ ಸರಣಿಯು ಮುಂದುವರಿಯುತ್ತದೆ. ಟೀಂ ಇಂಡಿಯಾ ಈಗಾಗಲೇ ತನ್ನ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ಅವರನ್ನು ಕಳೆದುಕೊಂಡಿದೆ. ಇದೀಗ ಐರ್ಲೆಂಡ್ ಕೂಡ ದೊಡ್ಡ ಹಿನ್ನಡೆ ಅನುಭವಿಸಿದ್ದು, ತಂಡದ ವೇಗದ ಬೌಲರ್ ಕ್ರೇಗ್ ಯಂಗ್ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.
ಐರ್ಲೆಂಡ್ ಕ್ರಿಕೆಟ್ ಅಕ್ಟೋಬರ್ 8 ಶನಿವಾರದಂದು ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದು, ಗಾಯದ ಕಾರಣದಿಂದಾಗಿ ಕ್ರೇಗ್ ಯಂಗ್ ವಿಶ್ವಕಪ್‌ನಿಂದ ಹೊರಗುಳಿಯುವ ಬಗ್ಗೆ ಮಾಹಿತಿ ನೀಡಿದೆ.
ಐರ್ಲೆಂಡ್- ಕ್ರೇಗ್ ಯಂಗ್
ಭಾರತ ವಿರುದ್ಧದ ಎರಡು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ ಮತ್ತು ಅಕ್ಷರ್ ಪಟೇಲ್ ಅವರನ್ನು ಯಂಗ್ ಮೊದಲ ಎಸೆತದಲ್ಲೇ ಪೆವಿಲಿಯನ್ ಕಳುಹಿಸಿದ್ದರು.
ಐರ್ಲೆಂಡ್ ತಂಡ: ಆಂಡ್ರ್ಯೂ ಬಲ್ಬರ್ನಿ (ಕ್ಯಾಪ್ಟನ್), ಪಾಲ್ ಸ್ಟಿರ್ಲಿಂಗ್, ಮಾರ್ಕ್ ಅಡೈರ್, ಕರ್ಟಿಸ್ ಕೆಂಪ್‌ಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಫಿಯಾನ್ ಹ್ಯಾಂಡ್, ಗ್ರಹಾಂ ಹ್ಯೂಮ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಸಿಮಿ ಸಿಂಗ್, ಹ್ಯಾರಿ ಟ್ಯಾಕ್ಟರ್, ಲೋರ್ಕನ್ ಟಕರ್.
Published On - 10:22 pm, Sat, 8 October 22