Asia Cup 2022: 1000 ರನ್ ಪೂರ್ಣಗೊಳಿಸಿದ ಕಿರಿಯ ಆಟಗಾರ್ತಿ! ಏಷ್ಯಾಕಪ್​ನಲ್ಲಿ ವಿಶ್ವ ದಾಖಲೆ ಬರೆದ ಶಫಾಲಿ

Shafali Verma: ಏಷ್ಯಾಕಪ್-2022ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಫಾಲಿ ಅರ್ಧಶತಕ ದಾಖಲಿಸಿದ್ದು, ಈ ಇನ್ನಿಂಗ್ಸ್‌ನೊಂದಿಗೆ ಶಫಾಲಿ ತನ್ನ ಹೆಸರಿನಲ್ಲಿ ದಾಖಲೆ ಬರೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1000 ರನ್ ಪೂರೈಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

TV9 Web
| Updated By: ಪೃಥ್ವಿಶಂಕರ

Updated on:Oct 08, 2022 | 4:23 PM

ಬಹಳ ದಿನಗಳಿಂದ ಕಳಪೆ ಫಾರ್ಮ್​ ಜೊತೆಗೆ ಬಳಲುತ್ತಿದ್ದ  ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೊನೆಗೂ ಫಾರ್ಮ್​ಗೆ ಮರಳಿದ್ದಾರೆ. ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಶಫಾಲಿ ಮಹಿಳಾ ಏಷ್ಯಾಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಅದ್ಭುತ ದಾಖಲೆ ಬರೆದಿದ್ದಾರೆ.

1 / 6
ಏಷ್ಯಾಕಪ್-2022ರಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಫಾಲಿ ಅರ್ಧಶತಕ ದಾಖಲಿಸಿದ್ದು, ಈ ಇನ್ನಿಂಗ್ಸ್‌ನೊಂದಿಗೆ ಶಫಾಲಿ ತನ್ನ ಹೆಸರಿನಲ್ಲಿ ದಾಖಲೆ ಬರೆದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1000 ರನ್ ಪೂರೈಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2 / 6
ಸ್ಮೃತಿ ಮಂಧಾನ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಶಫಾಲಿ ತಂಡಕ್ಕೆ ಬಲಿಷ್ಠ ಆರಂಭ ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 96 ರನ್‌ಗಳ ಜೊತೆಯಾಟವಾಡಿದರು. ಮಂಧಾನ 12ನೇ ಓವರ್‌ನ ಕೊನೆಯ ಎಸೆತದಲ್ಲಿ 47 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. 38 ಎಸೆತಗಳನ್ನು ಎದುರಿಸಿದ ಅವರು ಆರು ಬೌಂಡರಿಗಳನ್ನು ಬಾರಿಸಿದರು.

3 / 6
ಮಂಧಾನ ನಿರ್ಗಮನದ ನಂತರ, ಆದಾಗ್ಯೂ, ಶಫಾಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗಲಿಲ್ಲ ಮತ್ತು ಒಟ್ಟು ಸ್ಕೋರ್ 114 ರಲ್ಲಿ ವಿಕೆಟ್ ಒಪ್ಪಿಸಿದರು. 44 ಎಸೆತಗಳನ್ನು ಎದುರಿಸಿದ ಶಫಾಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ ಸಹಿತ 55 ರನ್ ಚಚ್ಚಿದರು.

4 / 6
ಕಳೆದ 10 ಪಂದ್ಯಗಳಲ್ಲಿ ಶಫಾಲಿ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಿರಲಿಲ್ಲ. 40ರ ಗಡಿ ದಾಟುವುದೂ ಅವರಿಗೆ ಕಷ್ಟವಾಗುತ್ತಿತ್ತು. ಆದರೆ ಏಷ್ಯಾಕಪ್‌ನ ಕಳೆದ ಪಂದ್ಯದಲ್ಲಿ 46 ರನ್‌ ಗಳಿಸಿದ್ದರೂ, ಮಲೇಷ್ಯಾ ವಿರುದ್ಧದ ಈ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಅವಕಾಶ ಕಳೆದುಕೊಂಡಿದ್ದರು. ಇದಕ್ಕೂ ಮೊದಲು, ಅವರು ಎರಡು ಅಂಕಿಗಳನ್ನು ತಲುಪಲು ಸಹ ಸಾಧ್ಯವಾಗಿರಲಿಲ್ಲ.

5 / 6
ಬಾಂಗ್ಲಾದೇಶ ವಿರುದ್ಧ ಸಿಲ್ಹೆಟ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಶಫಾಲಿ ಮತ್ತು ಮಂಧಾನ ಹೊರತಾಗಿ ಮತ್ತೊಮ್ಮೆ ಜೆಮಿಮಾ ರಾಡ್ರಿಗಸ್ ಭಾರತದ ಪರ ಬ್ಯಾಟಿಂಗ್ ಮಾಡಿದರು. ಅವರು ಔಟಾಗದೆ 35 ರನ್‌ಗಳ ಇನಿಂಗ್ಸ್‌ ಆಡಿದರು. ರೋಡ್ರಿಗಸ್ 24 ಎಸೆತಗಳನ್ನು ಎದುರಿಸಿ ನಾಲ್ಕು ಬೌಂಡರಿಗಳನ್ನು ಬಾರಿಸಿದರು.

6 / 6

Published On - 4:23 pm, Sat, 8 October 22

Follow us