T20 Records: ಟಿ20ಯಲ್ಲಿ ಸಿಕ್ಸ್ ಸಿಡಿಸದೇ ಅತ್ಯಧಿಕ ರನ್ ಬಾರಿಸಿದ್ದು ಯಾರು ಗೊತ್ತಾ?
T20 Records: ಟಿ20 ಯಲ್ಲಿ ಸಿಕ್ಸ್ ಬಾರಿಸದೇ ಕಲೆಹಾಕಲಾದ ಗರಿಷ್ಠ ಸ್ಕೋರ್ಗಳು ಯಾವುವು, ಅದನ್ನು ಬಾರಿಸಿದ ಬ್ಯಾಟ್ಸ್ಮನ್ಗಳು ಯಾರೆಲ್ಲಾ ಎಂದು ನೋಡೋಣ...
Updated on:Oct 09, 2022 | 6:11 PM

ಟಿ20 ಕ್ರಿಕೆಟ್ ಅಂದ್ರೇನೇ ಹೊಡಿಬಡಿ ಆಟ. ಅದರಲ್ಲೂ ಸಿಕ್ಸ್ಗಳ ಸುರಿಮಳೆಯಾಗುತ್ತಿರುತ್ತವೆ. ಇದಾಗ್ಯೂ ಕೆಲವೊಮ್ಮೆ ಬೌಲರ್ಗಳು ಸಿಕ್ಸ್ಗಳನ್ನು ಹೊಡೆಸಿಕೊಳ್ಳದಂತೆ ದಾಳಿ ಸಂಘಟಿಸುತ್ತಾರೆ.

ಇನ್ನು ಕೆಲವೊಮ್ಮೆ ಬ್ಯಾಟ್ಸ್ಮನ್ಗಳು ಸಿಕ್ಸ್ಗಳ ಮೊರೆ ಹೋಗುವುದಿಲ್ಲ. ಬದಲಾಗಿ ಫೋರ್ಗಳ ಮೂಲಕವೇ ರನ್ ಗತಿ ಹೆಚ್ಚಿಸುತ್ತಾ ಸಾಗುತ್ತಾರೆ. ಅಂತಹದೊಂದು ಅತ್ಯುತ್ತಮ ಇನಿಂಗ್ಸ್ ಆಡಿದ್ದಾರೆ ಪಾಕ್ ತಂಡದ ನಾಯಕ ಬಾಬರ್ ಆಜಂ.

ಶುಕ್ರವಾರ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಬಾಬರ್ ಆಜಂ ಅಜೇಯ ಅರ್ಧಶತಕ ಬಾರಿಸಿ ಮಿಂಚಿದ್ದರು. ವಿಶೇಷ ಎಂದರೆ ಈ ಇನಿಂಗ್ಸ್ನಲ್ಲಿ ಬಾಬರ್ ಬ್ಯಾಟ್ನಿಂದ ಒಂದೇ ಒಂದು ಸಿಕ್ಸ್ ಮೂಡಿಬಂದಿರಲಿಲ್ಲ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಸಿಕ್ಸ್ ಬಾರಿಸದೇ ಅತ್ಯಧಿಕ ವೈಯುಕ್ತಿಕ ಮೊತ್ತ ಕಲೆಹಾಕಿದ ಬ್ಯಾಟ್ಸ್ಮನ್ ಎಂಬ ದಾಖಲೆ ಕೂಡ ಬಾಬರ್ ಪಾಲಾಗಿದೆ. ಹಾಗಿದ್ರೆ ಟಿ20 ಯಲ್ಲಿ ಸಿಕ್ಸ್ ಬಾರಿಸದೇ ಕಲೆಹಾಕಲಾದ ಗರಿಷ್ಠ ಸ್ಕೋರ್ಗಳು ಯಾವುವು ಎಂದು ನೋಡೋಣ...

1- ಬಾಬರ್ ಆಜಂ: 2022 ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಒಂದು ಸಿಕ್ಸ್ ಬಾರಿಸದೇ ಬಾಬರ್ ಅಜೇಯ 79 ರನ್ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ.

2- ಫಾಫ್ ಡುಪ್ಲೆಸಿಸ್: ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ 2015 ರಲ್ಲಿ ಬಾಂಗ್ಲಾದೇಶ್ ವಿರುದ್ದ ಸಿಕ್ಸ್ ಬಾರಿಸದೇ 79 ರನ್ ಕಲೆಹಾಕಿದ್ದರು.

3- ಮೊಹಮ್ಮದ್ ರಿಜ್ವಾನ್: ಪಾಕ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಜ್ವಾನ್ 2021 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಯಾವುದೇ ಸಿಕ್ಸ್ ಬಾರಿಸದೇ 78 ರನ್ ಕಲೆಹಾಕಿದ್ದರು.

4- ರಿಕಿ ಪಾಂಟಿಂಗ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ 2007 ರಲ್ಲಿ ಭಾರತದ ವಿರುದ್ಧ 76 ರನ್ ಬಾರಿಸಿದ್ದರು. ಈ ವೇಳೆ ಒಂದೇ ಒಂದು ಸಿಕ್ಸ್ ಬಾರಿಸಿರಲಿಲ್ಲ ಎಂಬುದು ವಿಶೇಷ.
Published On - 6:09 pm, Sun, 9 October 22

TV9 Kannada
Read More



