Afghanistan squad: ಅಫ್ಘಾನಿಸ್ತಾನ್ ತಂಡ ಪ್ರಕಟ: ನವೀನ್ ಉಲ್ ಹಕ್ ಔಟ್

| Updated By: ಝಾಹಿರ್ ಯೂಸುಫ್

Updated on: May 15, 2023 | 7:23 PM

Afghanistan squad for ODI: ಅಫ್ಘಾನಿಸ್ತಾನ ಏಕದಿನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ (ಉಪನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್‌ಕೀಪರ್), ಇಬ್ರಾಹಿಂ ಝದ್ರಾನ್, ರಿಯಾಝ್ ಹಸನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆಟ್‌ಕೀಪರ್).

1 / 6
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಅಫ್ಘಾನಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿರುವ ನವೀನ್ ಉಲ್ ಹಕ್​ಗೆ ಸ್ಥಾನ ನೀಡಲಾಗಿಲ್ಲ ಎಂಬುದು ವಿಶೇಷ.

2 / 6
ಅಫ್ಘಾನಿಸ್ತಾನ್ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದ ನವೀನ್ ಉಲ್ ಹಕ್ ಈ ಬಾರಿಯ ಐಪಿಎಲ್​ಗೆ ಆಯ್ಕೆಯಾಗಿದ್ದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಯುವ ವೇಗಿ ವಿರಾಟ್ ಕೊಹ್ಲಿ ಜೊತೆಗಿನ ವಾಕ್ಸಮರದಿಂದ ಭಾರೀ ಸುದ್ದಿಯಾಗಿದ್ದರು.

3 / 6
ಇದೀಗ ಜೂನ್ 2 ರಿಂದ ಶುರುವಾಗಲಿರುವ ಏಕದಿನ ಸರಣಿಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ನವೀನ್ ಉಲ್ ಹಕ್ ಅವರನ್ನು ಪರಿಗಣಿಸಲಾಗಿಲ್ಲ. ಅಲ್ಲದೆ ನವೀನ್ ಬದಲಿಗೆ ಅನ್‌ಕ್ಯಾಪ್ಡ್ ಯುವ ವೇಗಿ ಅಬ್ದುಲ್ ರಹಮಾನ್ ಅವರನ್ನು ಆಯ್ಕೆ ಮಾಡಲಾಗಿದೆ.

4 / 6
ಇನ್ನು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಇತರೆ ಅಫ್ಘಾನ್​ ಆಟಗಾರರಾದ ರಶೀದ್ ಖಾನ್ (ಗುಜರಾತ್ ಟೈಟಾನ್ಸ್​), ರಹಮಾನುಲ್ಲಾ ಗುರ್ಬಾಝ್ (ಕೆಕೆಆರ್), ಫಝಲ್ಹಕ್ ಫಾರೂಕಿ (ಎಸ್​ಆರ್​ಹೆಚ್​) ಹಾಗೂ ನೂರ್ ಅಹ್ಮದ್ (ಗುಜರಾತ್ ಟೈಟಾನ್ಸ್) ಏಕದಿನ ಸರಣಿಗಾಗಿ ಆಯ್ಕೆಯಾಗಿದ್ದಾರೆ.

5 / 6
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಈ ಸರಣಿಯು ಜೂನ್ 2, 4 ಮತ್ತು 7 ರಂದು ನಡೆಯಲಿದ್ದು, ಇದಾದ ಬಳಿಕ ಅಫ್ಘಾನ್ ತಂಡ ಭಾರತದ ವಿರುದ್ಧ ಏಕದಿನ ಸರಣಿ ಆಡುವ ಸಾಧ್ಯತೆಯಿದೆ.

6 / 6
ಅಫ್ಘಾನಿಸ್ತಾನ ಏಕದಿನ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ (ಉಪನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್‌ಕೀಪರ್), ಇಬ್ರಾಹಿಂ ಝದ್ರಾನ್, ರಿಯಾಝ್ ಹಸನ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆಟ್‌ಕೀಪರ್), ಅಝ್ಮತುಲ್ಲಾ ಉಮರ್​ಝೈ, ರಶೀದ್ ಖಾನ್, ಮುಜೀಬ್​ ಉರ್ ರೆಹಮಾನ್, ನೂರ್ ಅಹ್ಮದ್, ಅಬ್ದುಲ್ ರಹಮಾನ್, ಫಝಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್.| ಮೀಸಲು ಆಟಗಾರರು: ಗುಲ್ಬದಿನ್ ನೈಬ್, ಶಾಹಿದುಲ್ಲಾ ಕಮಾಲ್, ಯಾಮಿನ್ ಅಹ್ಮದ್​ಝೈ​, ಝಿಯಾ ಉರ್ ರೆಹಮಾನ್ ಅಕ್ಬರ್.