
ಭಾರತದ ಅನುಭವಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಮತ್ತು ಮಾಜಿ ನಾಯಕ ಅಜಿಂಕ್ಯ ರಹಾನೆ ಇಂದು (ಜೂನ್ 6, 2022) 34 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಹಾರಾಷ್ಟ್ರದ ಅಶ್ವಿ-ಕಡಿ ಗ್ರಾಮದಲ್ಲಿ ಜನಿಸಿದ ರಹಾನೆ ಮುಂಬೈ ಪರ ಸ್ಥಳೀಯ ಕ್ರಿಕೆಟ್ ಆಡುತ್ತಿದ್ದರು. ಅವರು ಮುಂಬೈನ ಡೊಂಬಿವಲಿಯಲ್ಲಿ ತಮ್ಮ ಕ್ರಿಕೆಟ್ ಜೀವನವನ್ನು ಪ್ರಾರಂಭಿಸಿ ನಂತರ ಟೀಮ್ ಇಂಡಿಯಾದ ಪ್ರಮುಖ ಸದಸ್ಯರಾದರು. ಕಳೆದ ವರ್ಷ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದಾಗ ರಹಾನೆ ಭಾರತ ತಂಡದ ನಾಯಕರಾಗಿದ್ದರು.

ಪ್ರವೀಣ್ ಆಮ್ರೆ ಅಜಿಂಕ್ಯ ರಹಾನೆ ಕೋಚ್ ಆಗಿದ್ದು, ಆಮ್ರೆ ಸ್ವತಃ ತಾಂತ್ರಿಕವಾಗಿ ಪರಿಪೂರ್ಣ ಬ್ಯಾಟ್ಸ್‌ಮನ್ ಆಗಿದ್ದರು. ಅಜಿಂಕ್ಯ ಅವರ ಮಾರ್ಗದರ್ಶನದಲ್ಲಿ ಕ್ರಿಕೆಟ್ ಕಲಿತಿದ್ದಾರೆ.







Published On - 3:58 pm, Mon, 6 June 22