Akash Deep: ಟೆಸ್ಟ್ ಕ್ಯಾಪ್ ಸಿಗುತ್ತಿದ್ದಂತೆ ತಾಯಿಯ ಬಳಿ ಓಡಿ ಹೋದ ಆಕಾಶ್ ದೀಪ್: ಫೋಟೋ ನೋಡಿ

|

Updated on: Feb 23, 2024 | 12:53 PM

Akash Deep Mother: ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂಲಕ ಆಕಾಶ್ ದೀಪ್ ಅಂತರಾಷ್ಟ್ರೀಯ ಟೆಸ್ಟ್‌ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ಆಕಾಶ್ ಅವರಿಗೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ಕ್ಯಾಪ್ ನೀಡುತ್ತಿದ್ದಂತೆ ಅವರು ಭಾವುಕರಾದರು.

1 / 5
ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಪಂದ್ಯದ ಮೂಲಕ ಭಾರತದ ಆಕಾಶ್ ದೀಪ್ ಅಂತರಾಷ್ಟ್ರೀಯ ಟೆಸ್ಟ್‌ ಕ್ರಿಕೆಟಿಗೆ ಪದಾರ್ಪಣೆ ಮಾಡಿದರು. ಟಾಸ್‌ ಪ್ರಕ್ರಿಯೆಗು ಮುನ್ನ ಆಕಾಶ್ ಅವರಿಗೆ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ಕ್ಯಾಪ್ ಅನ್ನು ವಿತರಿಸಿದರು.

2 / 5
ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಸ್ಥಾನಕ್ಕೆ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಲಾಯಿತು. ಬುಮ್ರಾ ಈ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಆಕಾಶ್ ದೀಪ್ ಭಾರತದ 313ನೇ ಟೆಸ್ಟ್ ಕ್ರಿಕೆಟಿಗರಾಗಿದ್ದಾರೆ. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ನಾಲ್ಕನೇ ಆಟಗಾರನಾಗಿದ್ದಾರೆ.

3 / 5
ತನಗೆ ಟೆಸ್ಟ್ ಕ್ಯಾಪ್ ಸಿಗುತ್ತಿದ್ದಂತೆ ಆಕಾಶ್ ದೀಪ್ ತನ್ನ ತಾಯಿಯ ಬಳಿ ಓಡಿ ಆಶೀರ್ವಾದವನ್ನು ಪಡೆದುಕೊಂಡರು. ಆಕಾಶ್ ತನ್ನ ತಾಯಿಯ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಸರಣಿಯಲ್ಲಿ ರಜತ್ ಪಾಟಿದಾರ್, ಸರ್ಫರಾಜ್ ಖಾನ್ ಮತ್ತು ಧುವ್ ಜುರೆಲ್ ಬಳಿಕ ಟೆಸ್ಟ್ ಕ್ಯಾಪ್ ಪಡೆದ ನಾಲ್ಕನೇ ಭಾರತೀಯ ಕ್ರಿಕೆಟಿಗ ಆಕಾಶ್ ಆಗಿದ್ದಾರೆ.

4 / 5
ರಾಹುಲ್ ದ್ರಾವಿಡ್ ಅವರಿಂದ ಕ್ಯಾಪ್ ಪಡೆದ ನಂತರ, ಆಕಾಶ್ ದೀಪ್ ನಾಯಕ ರೋಹಿತ್ ಶರ್ಮಾ ಬಳಿಗೆ ಹೋದರು. ನಂತರ ಇತರ ಭಾರತೀಯ ಕ್ರಿಕೆಟಿಗರು ಅಭಿನಂದಿಸಿದರು. ಬಳಿಕ ಆಕಾಶ್ ದೀಪ್ ಕ್ಯಾಪ್ ತೆಗೆದುಕೊಂಡು ನೇರವಾಗಿ ತಮ್ಮ ಕುಟುಂಬದ ಬಳಿ ತೆರಳಿದ್ದಾರೆ. ಈ ವೇಳೆ ಅವರ ತಾಯಿ ಭಾವುಕರಾದರು.

5 / 5
ಸದ್ಯ ಆಕಾಶ್ ದೀಪ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಆಂಗ್ಲ ಬ್ಯಾಟರ್​ಗಳ ಹುಟ್ಟಡಗಿಸಿ 3 ವಿಕೆಟ್ ಕಿತ್ತಿದ್ದಾರೆ. ಆರಂಭಿಕ ಆಟಗಾರ ಬೆನ್ ಡಕೆಟ್, ಒಲಿ ಪೋಪ್ ರಂತಹ ಸ್ಟಾರ್ ಅನುಭವಿ ಬ್ಯಾಟರ್​ಗಳನ್ನು ಪೆವಿಲಿಯನ್​ಗೆ ಅಟ್ಟಿದ್ದಾರೆ.