
ದೇಶೀಯ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ಮತ್ಯಾರೂ ಅಲ್ಲ, ವಿದರ್ಭ ತಂಡದ ಯುವ ದಾಂಡಿಗ ಅಮನ್ ಮೊಖಾಡೆ (Aman Mokhade). ಅದು ಕೂಡ ಕೇವಲ 16 ಇನಿಂಗ್ಸ್ಗಳ ಮೂಲಕ ಎಂಬುದು ವಿಶೇಷ.

ವಿಜಯ ಹಝಾರೆ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಅಮನ್ ಮೊಖಾಡೆ 138 ರನ್ಗಳ ಭರ್ಜರಿ ಶತಕ ಸಿಡಿಸಿದ್ದರು. ಈ ಶತಕದೊಂದಿಗೆ ಲಿಸ್ಟ್ ಎ ಕ್ರಿಕೆಟ್ನಲ್ಲಿ 1000 ರನ್ಗಳನ್ನು ಪೂರೈಸಿದ್ದಾರೆ. ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.

ಅಂದರೆ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 1000 ರನ್ ಪೂರೈಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಅಮನ್ ಮೊಖಾಡೆ ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಗ್ರೇಮ್ ಪೊಲ್ಲಾಕ್ ಬರೆದಿದ್ದ ವರ್ಲ್ಡ್ ರೆಕಾರ್ಡ್ ಅನ್ನು ಅಮನ್ ಸರಿಗಟ್ಟಿದ್ದಾರೆ.

ಸೌತ್ ಆಫ್ರಿಕಾದ ಮಾಜಿ ಆಟಗಾರ ಗ್ರೇಮ್ ಪೊಲ್ಲಾಕ್ ಕೇವಲ 16 ಇನಿಂಗ್ಸ್ಗಳ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ 1000 ರನ್ ಕಲೆಹಾಕಿದ್ದರು. ಈ ಮೂಲಕ 60ರ ದಶಕದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನು ಅಮನ್ ಸರಿಗಟ್ಟಿದ್ದಾರೆ.

ವಿದರ್ಭ ಪರ ಈವರೆಗೆ 16 ಏಕದಿನ ಇನಿಂಗ್ಸ್ ಆಡಿರುವ ಅಮನ್ ಮೊಖಾಡೆ 5 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳೊಂದಿಗೆ ಒಟ್ಟು 1013 ರನ್ ಕಲೆಹಾಕಿದ್ದಾರೆ. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 1000 ರನ್ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಗ್ರೇಮ್ ಪೊಲ್ಲಾಕ್ ನಂತರ ಕೇವಲ 16 ಇನಿಂಗ್ಸ್ನಲ್ಲಿ 1000 ರನ್ ಕಲೆಹಾಕಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.