147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ
TV9 Web | Updated By: ಝಾಹಿರ್ ಯೂಸುಫ್
Updated on:
Jan 04, 2024 | 8:29 AM
India vs South Africa 2nd Test: ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದಲ್ಲಿ ಪ್ರಥಮ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಮೊಹಮ್ಮದ್ ಸಿರಾಜ್ (6 ವಿಕೆಟ್ಸ್) ದಾಳಿಗೆ ತತ್ತರಿಸಿತು. ಪರಿಣಾಮ ಸೌತ್ ಆಫ್ರಿಕಾ ತಂಡವು ಕೇವಲ 55 ರನ್ಗಳಿಗೆ ಆಲೌಟ್ ಆಗಿದೆ.
1 / 6
ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆದರೆ ಬ್ಯಾಟ್ಸ್ಮನ್ಗಳು ಮುಗ್ಗರಿಸುವ ಮೂಲಕ ಅತ್ಯಂತ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
2 / 6
ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದಲ್ಲಿ ಪ್ರಥಮ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಮೊಹಮ್ಮದ್ ಸಿರಾಜ್ (6 ವಿಕೆಟ್ಸ್) ದಾಳಿಗೆ ತತ್ತರಿಸಿತು. ಪರಿಣಾಮ ಸೌತ್ ಆಫ್ರಿಕಾ ತಂಡವು ಕೇವಲ 55 ರನ್ಗಳಿಗೆ ಆಲೌಟ್ ಆಗಿದೆ.
3 / 6
ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಕೆಎಲ್ ರಾಹುಲ್ ಔಟಾಗುತ್ತಿದ್ದಂತೆ ಟೀಮ್ ಇಂಡಿಯಾ ದಿಢೀರ್ ಕುಸಿತಕ್ಕೊಳಗಾಗಿದೆ. ಪರಿಣಾಮ 11 ಎಸೆತಗಳಲ್ಲಿ ಯಾವುದೇ ರನ್ ಕಲೆಹಾಕದೆ 6 ವಿಕೆಟ್ ಕಳೆದುಕೊಂಡು 153 ರನ್ಗಳಿಗೆ ಆಲೌಟ್ ಆಯಿತು.
4 / 6
ಅಚ್ಚರಿ ಎಂದರೆ ಕೊನೆಯ ನಾಲ್ವರು ಬ್ಯಾಟರ್ಗಳು ಖಾತೆ ತೆರೆಯದೇ ಔಟಾದರೆ, ಒಬ್ಬರು ಶೂನ್ಯದೊಂದಿಗೆ ಅಜೇಯರಾಗಿ ಉಳಿದರು. ಅಂದರೆ ಕೊನೆಯ ಐವರು ಬ್ಯಾಟರ್ಗಳಿಂದ ಯಾವುದೇ ರನ್ ಮೂಡಿ ಬಂದಿರಲಿಲ್ಲ. ಇದಕ್ಕೂ ಮುನ್ನ ಇಬ್ಬರು ದಾಂಡಿಗರು ಶೂನ್ಯಕ್ಕೆ ಔಟಾಗಿದ್ದರು.
5 / 6
ಅಂದರೆ ಟೀಮ್ ಇಂಡಿಯಾ ಇನಿಂಗ್ಸ್ನಲ್ಲಿ 7 ಬ್ಯಾಟರ್ಗಳು ಶೂನ್ಯದೊಂದಿಗೆ ಕಾಣಿಸಿಕೊಂಡಿದ್ದರು. ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಹಾಗೂ ಮುಕೇಶ್ ಕುಮಾರ್ ಖಾತೆ ತೆರೆಯದೇ ಪೆವಿಲಿಯನ್ಗೆ ಹಿಂತಿರುಗಿದ್ದರು.
6 / 6
ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೂಡಿಬಂದ ಅತ್ಯಂತ ಕಳಪೆ ದಾಖಲೆಗಳಲ್ಲಿ ಒಂದು. ಅಂದರೆ 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾವುದೇ ತಂಡದ 7 ಬ್ಯಾಟರ್ಗಳು ಸೊನ್ನೆಯೊಂದಿಗೆ ಪೆವಿಲಿಯನ್ಗೆ ಮರಳಿರಲಿಲ್ಲ. ಇದೀಗ 2522 ಟೆಸ್ಟ್ ಪಂದ್ಯಗಳ ಬಳಿಕ ಟೀಮ್ ಇಂಡಿಯಾದ 7 ಬ್ಯಾಟರ್ಗಳು ಸೊನ್ನೆ ಸುತ್ತುವ ಮೂಲಕ ಅತ್ಯಂತ ಕಳಪೆ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.