Anrich Nortje: 18 ಡಾಟ್ ಬಾಲ್, 4 ವಿಕೆಟ್: ವಿಶ್ವ ದಾಖಲೆ ಬರೆದ ಅನ್ರಿಕ್ ನೋಕಿಯಾ

|

Updated on: Jun 04, 2024 | 10:25 AM

T20 World Cup 2024: ಟಿ20 ವಿಶ್ವಕಪ್​ನ 4ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ನ್ಯೂಯಾರ್ಕ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಕೇವಲ 77 ರನ್​ಗಳಿಗೆ ಆಲೌಟ್ ಆಗಿತ್ತು. ಈ ಗುರಿಯನ್ನು 16.4 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಸೌತ್ ಆಫ್ರಿಕಾ ತಂಡವು 6 ವಿಕೆಟ್​ಗಳ ಗೆಲುವು ದಾಖಲಿಸಿದೆ.

1 / 6
T20 World Cup 2024: ಈ ಬಾರಿಯ ಐಪಿಎಲ್​ನಲ್ಲಿ ಪ್ರತಿ ಓವರ್​ನಲ್ಲಿ 13.36 ರನ್ ನೀಡಿದ್ದ ಸೌತ್ ಆಫ್ರಿಕಾ ವೇಗಿ ಅನ್ರಿಕ್ ನೋಕಿಯಾ (Anrich Nortje) ಇದೀಗ ಭರ್ಜರಿ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಅದು ಕೂಡ ವಿಶ್ವ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ.

2 / 6
ನ್ಯೂಯಾರ್ಕ್​ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ 3ನೇ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಅನ್ರಿಕ್ ನೋಕಿಯಾ 4 ಓವರ್​​ಗಳಲ್ಲಿ ಕೇವಲ 7 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

3 / 6
ಈ ನಾಲ್ಕು ವಿಕೆಟ್​ಗಳೊಂದಿಗೆ ನೋಕಿಯಾ ಟಿ20 ವಿಶ್ವಕಪ್​ನ ಹಲವು ದಾಖಲೆಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 7 ರನ್​ಗಳಿಗೆ 4 ವಿಕೆಟ್ ಕಬಳಿಸುವ ಮೂಲಕ ಟಿ20 ವಿಶ್ವಕಪ್​ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಸೌತ್ ಆಫ್ರಿಕಾ ಬೌಲರ್ ಎನಿಸಿಕೊಂಡರು. ವಿಶೇಷ ಎಂದರೆ ಇದಕ್ಕೂ ಮುನ್ನ ಈ ದಾಖಲೆ ನೋಕಿಯಾ ಅವರ ಹೆಸರಿನಲ್ಲಿಯೇ ಇತ್ತು. 2021 ರಲ್ಲಿ 10 ರನ್ ನೀಡಿ 4 ವಿಕೆಟ್ ಕಬಳಿಸಿ ಈ ದಾಖಲೆ ಬರೆದಿದ್ದರು.

4 / 6
ಇನ್ನು ಈ 4 ವಿಕೆಟ್​ಗಳೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಮೂರನೇ ಬಾರಿಗೆ 4 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮೊರ್ನೆ ಮೊರ್ಕೆಲ್ ಮತ್ತು ಮುಸ್ತಾಫಿಜುರ್ ರೆಹಮಾನ್ ಮತ್ತು ಉಮರ್ ಗುಲ್ ಮಾತ್ರ 3 ಬಾರಿ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ 4ನೇ ಬಾರಿಗೆ 4 ವಿಕೆಟ್ ಕಬಳಿಸಿ ಅನ್ರಿಕ್ ನೋಕಿಯಾ ಹೊಸ ದಾಖಲೆ ಬರೆದಿದ್ದಾರೆ.

5 / 6
ಟಿ20 ವಿಶ್ವಕಪ್‌ನಲ್ಲಿ 4 ಓವರ್‌ಗಳಲ್ಲಿ ಅತೀ ಕಡಿಮೆ ರನ್ ನೀಡಿದ ಬೌಲರ್ ಎಂಬ ಹೆಗ್ಗಳಿಕೆಗೂ ಅನ್ರಿಕ್ ನೋಕಿಯಾ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾದ ಅಜಂತಾ ಮೆಂಡಿಸ್, ವನಿಂದು ಹಸರಂಗ ಮತ್ತು ಬಾಂಗ್ಲಾದೇಶದ ಮಹಮ್ಮದುಲ್ಲಾ 4 ಓವರ್‌ಗಳಲ್ಲಿ 8 ರನ್ ನೀಡಿ ಈ ದಾಖಲೆ ನಿರ್ಮಿಸಿದ್ದರು.

6 / 6
ಇದೀಗ 4 ಓವರ್​ಗಳಲ್ಲಿ 18 ಡಾಟ್ ಬಾಲ್​ಗಳನ್ನು ಎಸೆಯುವ ಮೂಲಕ ಅನ್ರಿಕ್ ನೋಕಿಯಾ 7 ರನ್ ಮಾತ್ರ ಬಿಟ್ಟು ಕೊಟ್ಟಿದ್ದಾರೆ. ಅಲ್ಲದೆ 4 ವಿಕೆಟ್​ಗಳನ್ನು ಕಬಳಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.