ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಆಟಗಾರ್ತಿ ಜೊತೆ ಅರ್ಜುನ್ ತೆಂಡೂಲ್ಕರ್ ಡೇಟಿಂಗ್..!

| Updated By: ಝಾಹಿರ್ ಯೂಸುಫ್

Updated on: Jun 28, 2022 | 3:43 PM

Arjun Tendulkar-Danielle Wyatt: ಅರ್ಜುನ್ ತೆಂಡೂಲ್ಕರ್, ಡೇನಿಯಲ್ ವ್ಯಾಟ್ ಜೊತೆ ಲಂಡನ್​ನಲ್ಲಿದ್ದು, ಇದೇ ವೇಳೆ ರೆಸ್ಟೊರೆಂಟ್​ವೊಂದರಲ್ಲಿ ಕ್ಲಿಕ್ಕಿಸಲಾದ ಫೋಟೋವನ್ನು ಇಂಗ್ಲೆಂಡ್ ಆಟಗಾರ್ತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

1 / 5
 ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳನ್ನು ಆಡುವ ಉದ್ದೇಶದಿಂದ ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿದೆ. ಮತ್ತೊಂದೆಡೆ ಸಚಿನ್ ತೆಂಡಲ್ಕೂರ್ ಅವರ ಪುತ್ರ ಅರ್ಜುನ್ ಕೂಡ ಇಂಗ್ಲೆಂಡ್ ವಿಮಾನ ಹತ್ತಿದ್ದಾರೆ. ಆದರೆ ಅದು ಟೀಮ್ ಇಂಡಿಯಾ ಪರ ಆಡಲು ಅಲ್ಲ ಎಂಬುದಷ್ಟೇ ವ್ಯತ್ಯಾಸ. ಏಕೆಂದರೆ ಅರ್ಜುನ್ ತೆಂಡೂಲ್ಕರ್ ಅವರ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ವೈರಲ್ ಆಗಲು ಕಾರಣ ಜೊತೆಗಿರುವ ಮತ್ತೋರ್ವ ಆಟಗಾರ್ತಿ ಎಂಬುದು ವಿಶೇಷ.

2 / 5
ಹೌದು, ಅರ್ಜುನ್ ತೆಂಡೂಲ್ಕರ್ ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ ಅವರೊಂದಿಗೆ ಸುತ್ತಾಡುತ್ತಿದ್ದಾರೆ. ಹೀಗೆ ಜೂನಿಯರ್ ತೆಂಡೂಲ್ಕರ್ ಜೊತೆ ರೆಸ್ಟೊರೆಂಟ್​ನಲ್ಲಿರುವ ಫೋಟೋವೊಂದನ್ನು ವ್ಯಾಟ್​​ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿದ್ದರು. ಇದರ ಬೆನ್ನಲ್ಲೇ ಅರ್ಜುನ್ ತೆಂಡೂಲ್ಕರ್ ಅವರು ಇಂಗ್ಲೆಂಡ್ ಆಟಗಾರ್ತಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿದೆ.

3 / 5
 ಅರ್ಜುನ್ ತೆಂಡೂಲ್ಕರ್, ಡೇನಿಯಲ್ ವ್ಯಾಟ್ ಜೊತೆ ಲಂಡನ್​ನಲ್ಲಿದ್ದು, ಇದೇ ವೇಳೆ ರೆಸ್ಟೊರೆಂಟ್​ವೊಂದರಲ್ಲಿ ಕ್ಲಿಕ್ಕಿಸಲಾದ ಫೋಟೋವನ್ನು ಇಂಗ್ಲೆಂಡ್ ಆಟಗಾರ್ತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಕೂಡ ಅರ್ಜುನ್ ತೆಂಡೂಲ್ಕರ್ ವ್ಯಾಟ್ ಜೊತೆ ಕಾಣಿಸಿಕೊಂಡಿದ್ದರು.

4 / 5
ಇದೀಗ ಮತ್ತೊಮ್ಮೆ ಇಂಗ್ಲೆಂಡ್ ಆಟಗಾರ್ತಿಯೊಂದಿಗೆ ಕಾಣಿಸಿಕೊಂಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೀಗಾಗಿ ವ್ಯಾಟ್ ಹಾಗೂ ಅರ್ಜುನ್ ತೆಂಡೂಲ್ಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದೆ.

5 / 5
ವಿಶೇಷ ಎಂದರೆ ಇದೇ ಡೇನಿಯಲ್ ವ್ಯಾಟ್ ಈ ಹಿಂದೊಮ್ಮೆ ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿದ್ದರು. ಅಲ್ಲದೆ ಕೊಹ್ಲಿಯನ್ನು ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆ ವೇಳೆ ಇಂಗ್ಲೆಂಡ್ ಆಟಗಾರ್ತಿಯ ಹೆಸರು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅರ್ಜುನ್ ತೆಂಡೂಲ್ಕರ್ ಜೊತೆ ಡೇನಿಯಲ್ ವ್ಯಾಟ್ ಕಾಣಿಸಿಕೊಂಡಿದ್ದಾರೆ.

Published On - 3:30 pm, Tue, 28 June 22