ಎರಡೇ ಎರಡು ವರ್ಷಗಳಲ್ಲಿ ಎಲ್ಲರನ್ನು ಹಿಂದಿಕ್ಕಿದ ಅರ್ಷದೀಪ್ ಸಿಂಗ್

|

Updated on: Nov 14, 2024 | 10:53 AM

Arshdeep Singh: ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದ ಅರ್ಷದೀಪ್ ಸಿಂಗ್ 37 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಈ ಮೂರು ವಿಕೆಟ್​ಗಳೊಂದಿಗೆ ಟೀಮ್ ಇಂಡಿಯಾ ವೇಗಿ ವಿಶೇಷ ದಾಖಲೆ ಬರೆದಿದ್ದಾರೆ. ಆ ದಾಖಲೆಯ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

1 / 6
ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿ  2 ವರ್ಷಗಳಾಗಿವೆ. ಈ ಎರಡು ವರ್ಷಗಳಲ್ಲಿ 92 ವಿಕೆಟ್​ ಉರುಳಿಸುವ ಮೂಲಕ, ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಅದು ಕೂಡ ಭುವನೇಶ್ವರ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾರಂತಹ ಖ್ಯಾತನಾಮರನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

2 / 6
2022 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಅರ್ಷದೀಪ್ ಸಿಂಗ್ ಈವರೆಗೆ 59 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1222 ಎಸೆತಗಳನ್ನು ಎಸೆದಿರುವ ಅವರು ಒಟ್ಟು 92 ವಿಕೆಟ್ ಕಬಳಿಸುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನ ಭಾರತದ ಅತ್ಯಂತ ಯಶಸ್ವಿ ವೇಗಿ ಎನಿಸಿಕೊಂಡಿದ್ದಾರೆ.

3 / 6
ಇದಕ್ಕೂ ಮುನ್ನ ಈ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಅಗ್ರಸ್ಥಾನದಲ್ಲಿದ್ದರು. ಟೀಮ್ ಇಂಡಿಯಾ ಪರ 87 ಟಿ20 ಪಂದ್ಯಗಳನ್ನಾಡಿರುವ ಭುವಿ 1791	ಎಸೆತಗಳಲ್ಲಿ ಒಟ್ಟು 90 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

4 / 6
ಇನ್ನು ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಈವರೆಗೆ 70 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1509 ಎಸೆತಗಳನ್ನು ಎಸೆದಿರುವ ಬುಮ್ರಾ ಒಟ್ಟು 89 ವಿಕೆಟ್ ಕಬಳಿಸಿದ್ದಾರೆ.

5 / 6
ಇದೀಗ ಭುವನೇಶ್ವರ್ ಕುಮಾರ್ ಹಾಗೂ ಜಸ್​ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿರುವ ಅರ್ಷದೀಪ್ ಸಿಂಗ್, 92 ವಿಕೆಟ್​ಗಳೊಂದಿಗೆ ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ವೇಗಿ​ ಎನಿಸಿಕೊಂಡಿದ್ದಾರೆ.

6 / 6
ಇನ್ನು ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿದೆ. ಟೀಮ್ ಇಂಡಿಯಾ ಪರ 79 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಚಹಲ್ ಒಟ್ಟು 96 ವಿಕೆಟ್ ಕಬಳಿಸಿದ್ದಾರೆ. ಇದೀಗ ಚಹಲ್ ಅವರನ್ನು ಹಿಂದಿಕ್ಕಲು ಅರ್ಷದೀಪ್ ಸಿಂಗ್​ಗೆ ಕೇವಲ 5 ವಿಕೆಟ್​ಗಳ ಅವಶ್ಯಕತೆಯಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಯುವ ಎಡಗೈ ವೇಗಿಯಿಂದ ಭರ್ಜರಿ ದಾಖಲೆ ನಿರೀಕ್ಷಿಸಬಹುದು.