- Kannada News Photo gallery Cricket photos Virat Kohli's Bat Brings Bad Luck For Team India's Rinku Singh
ವಿರಾಟ್ ಕೊಹ್ಲಿಯ ಬ್ಯಾಟ್ ರಿಂಕು ಸಿಂಗ್ ಪಾಲಿಗೆ ಅಪಶಕುನ: ಹೀಗೊಂದು ವಿತಂಡ ವಾದ..!
Rinku Singh: ಟೀಮ್ ಇಂಡಿಯಾದ ಸ್ಪೋಟಕ ದಾಂಡಿಗ ರಿಂಕು ಸಿಂಗ್ ಕಳಪೆ ಫಾರ್ಮ್ನಲ್ಲಿದ್ದಾರೆ. ಈ ಕಳಪೆ ಫಾರ್ಮ್ಗೆ ಐಪಿಎಲ್ ವೇಳೆ ವಿರಾಟ್ ಕೊಹ್ಲಿ ನೀಡಿದ ಬ್ಯಾಟ್ ಕಾರಣ ಎಂಬ ವಿತಂಡ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ.
Updated on:Nov 14, 2024 | 1:25 PM

ಮುಟ್ಟಿದೆಲ್ಲಾ ಸಿಕ್ಸ್, ತಟ್ಟಿದೆಲ್ಲಾ ಫೋರ್... ಹೀಗೆ ಒಂದೇ ಒಂದು ಐಪಿಎಲ್ ಸೀಸನ್ ಮೂಲಕ ಅಬ್ಬರಿಸಿ ಬೊಬ್ಬರಿದು ರಿಂಕು ಸಿಂಗ್ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಭಾರತ ಟಿ20 ತಂಡಕ್ಕೆ ಎಂಟ್ರಿಯಾದ ಬಳಿಕ ರಿಂಕು ಸಿಂಗ್ ಹಿಂತಿರುಗಿ ನೋಡಿಲ್ಲ. ಆದರೆ ಇದೀಗ ಅದೇ ರಿಂಕು ಟೀಮ್ ಇಂಡಿಯಾದಿಂದ ಹೊರಬೀಳುವ ಭೀತಿಯಲ್ಲಿದ್ದಾರೆ.

ಏಕೆಂದರೆ ಟೀಮ್ ಇಂಡಿಯಾ ಪರ ಕಳೆದ 7 ಇನಿಂಗ್ಸ್ಗಳಲ್ಲಿ ರಿಂಕು ಸಿಂಗ್ ಕಲೆಹಾಕಿರುವುದು ಕೇವಲ 91 ರನ್ಗಳು ಮಾತ್ರ. ಅಂದರೆ 15.16 ಸರಾಸರಿಯಲ್ಲಿ ಮಾತ್ರ ರನ್ಗಳಿಸಿದ್ದಾರೆ. ಅದರಲ್ಲೂ ಪ್ರಸ್ತುತ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 3 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 28 ರನ್ಗಳು ಮಾತ್ರ. ಹೀಗಾಗಿ ಇದೀಗ ರಿಂಕು ಸಿಂಗ್ಗೆ ಭಾರತ ತಂಡದಿಂದ ಹೊರಬೀಳುವ ಆತಂಕ ಎದುರಾಗಿದೆ.

ಕುತೂಹಲಕಾರಿ ವಿಷಯ ಎಂದರೆ ಇಂತಹದೊಂದು ಕಳಪೆ ಫಾರ್ಮ್ ಶುರುವಾಗಿದ್ದು ಈ ಬಾರಿಯ ಐಪಿಎಲ್ ಬಳಿಕ. ಐಪಿಎಲ್ 2024 ರಲ್ಲಿ ರಿಂಕು, ವಿರಾಟ್ ಕೊಹ್ಲಿಯಿಂದ ಬ್ಯಾಟ್ ಪಡೆದಿದ್ದರು. ಇದಾದ ಬಳಿಕ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ ಎಂಬುದು ಅಚ್ಚರಿ. ಹೀಗಾಗಿಯೇ ಇದೀಗ ರಿಂಕು ಸಿಂಗ್ ಪಾಲಿಗೆ ಕಿಂಗ್ ಕೊಹ್ಲಿಯ ಬ್ಯಾಟ್ ಅಪಶಕುನ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೆ ಸಾಕ್ಷಿಯಾಗಿ ಅಂಕಿ ಅಂಶಗಳನ್ನು ಸಹ ಮುಂದಿಟ್ಟಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನ ಆರಂಭದಲ್ಲಿ ರಿಂಕು ಸಿಂಗ್ 46 ರ ಸರಾಸರಿಯಲ್ಲಿ ಮತ್ತು 165 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. ಆದರೀಗ ಅವರ ಸ್ಟ್ರೈಕ್ ರೇಟ್ 128.16 ಕ್ಕೆ ಬಂದು ನಿಂತಿದೆ. ಅಲ್ಲದೆ ಕಳೆದ 7 ಇನಿಂಗ್ಸ್ಗಳಲ್ಲಿ ಅವರ ರನ್ ಸರಾಸರಿ ಕೇವಲ 15.16 ಮಾತ್ರ.

ಅಲ್ಲದೆ ವಿರಾಟ್ ಕೊಹ್ಲಿಯ ಬ್ಯಾಟ್ ಪಡೆದ ಬಳಿಕ ರಿಂಕು ಸಿಂಗ್ ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 60 ರ ಸರಾಸರಿಯಲ್ಲಿ 60 ರನ್ ಮಾತ್ರ ಕಲೆಹಾಕಿದ್ದರು. ಇನ್ನು ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ 2 ಇನ್ನಿಂಗ್ಸ್‌ಗಳಲ್ಲಿ ಕಲೆಹಾಕಿದ್ದು 61 ರನ್ಗಳು ಮಾತ್ರ. ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 28 ರನ್ ಮಾತ್ರ ಗಳಿಸಿದ್ದಾರೆ.

ಒಟ್ಟಾರೆ ಹೇಳುವುದಾದರೆ ರಿಂಕಿ ಸಿಂಗ್ ಕಳಪೆ ಫಾರ್ಮ್ನಿಂದ ಒದ್ದಾಡುತ್ತಿರುವುದಂತು ಸತ್ಯ. ಇದಕ್ಕೆ ವಿರಾಟ್ ಕೊಹ್ಲಿ ನೀಡಿದ ಬ್ಯಾಟ್ ಕಾರಣ ಎನ್ನುವುದು ಮೂಢನಂಬಿಕೆ. ಇಂತಹದೊಂದು ಅಪಶಕುನದ ಕಥೆ ಕಟ್ಟಿದವವರಿಗೆ ರಿಂಕು ಸಿಂಗ್ ಮುಂದಿನ ಪಂದ್ಯದಲ್ಲಿ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.
Published On - 1:25 pm, Thu, 14 November 24
