ಕೇವಲ 1264 ಎಸೆತಗಳಲ್ಲಿ ಎಲ್ಲರನ್ನೂ ಹಿಂದಿಕ್ಕಿದ ಅರ್ಷದೀಪ್ ಸಿಂಗ್
Arshdeep Singh Record: ಭಾರತದ ಪರ 10 ವರ್ಷಗಳ ಆಡಿ ಭುವನೇಶ್ವರ್ ಕುಮಾರ್ ನಿರ್ಮಿಸಿದ, 7 ವರ್ಷಗಳಲ್ಲಿ ಯುಜ್ವೇಂದ್ರ ಚಹಲ್ ಬರೆದ ದಾಖಲೆಯನ್ನು ಟೀಮ್ ಇಂಡಿಯಾದ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕೇವಲ 2 ವರ್ಷಗಳಲ್ಲೇ ಮುರಿದಿದ್ದಾರೆ. ಅದು ಸಹ ಕೇವಲ 1264 ಎಸೆತಗಳನ್ನು ಎಸೆಯುವ ಮೂಲಕ ಎಂಬುದೇ ವಿಶೇಷ.
1 / 6
ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಅರ್ಷದೀಪ್ ಸಿಂಗ್ ಪಾಲಾಗಿದೆ. ಅದು ಕೂಡ ಕೇವಲ 1264 ಎಸೆತಗಳಲ್ಲಿ ಎಂಬುದೇ ಅಚ್ಚರಿ. 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅರ್ಷದೀಪ್ ಕೇವಲ 2 ವರ್ಷಗಳಲ್ಲೇ ಭಾರತದ ನಂಬರ್ ಬೌಲರ್ ಎನಿಸಿಕೊಂಡಿದ್ದಾರೆ.
2 / 6
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಅರ್ಷದೀಪ್ ಸಿಂಗ್ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 2 ವಿಕೆಟ್ ಕಬಳಿಸಿದರು. ಈ ಎರಡು ವಿಕೆಟ್ಗಳೊಂದಿಗೆ ಅರ್ಷದೀಪ್ ಸಿಂಗ್ ಭಾರತದ ಪರ ಹೊಸ ದಾಖಲೆ ಬರೆದರು.
3 / 6
ಟೀಮ್ ಇಂಡಿಯಾ ಪರ 61 ಟಿ20 ಪಂದ್ಯಗಳನ್ನಾಡಿರುವ ಅರ್ಷದೀಪ್ ಸಿಂಗ್ ಇದುವರೆಗೆ 210.4 ಓವರ್ಗಳನ್ನು ಎಸೆದಿದ್ದಾರೆ. ಅಂದರೆ 1264 ಎಸೆತಗಳ ಮೂಲಕ ಬರೋಬ್ಬರಿ 97 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅತೀ ಕಡಿಮೆ ಎಸೆತಗಳಲ್ಲಿ 95 ಕ್ಕಿಂತ ಅಧಿಕ ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
4 / 6
ಇದಕ್ಕೂ ಮುನ್ನ ಭಾರತದ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಯುಜ್ವೇಂದ್ರ ಚಹಲ್ ಹೆಸರಿನಲ್ಲಿತ್ತು. ಚಹಲ್ 96 ವಿಕೆಟ್ ಕಬಳಿಸಲು ಬರೋಬ್ಬರಿ 1764 ಎಸೆತಗಳನ್ನು ತೆಗೆದುಕೊಂಡಿದ್ದರು. ಅಂದರೆ 294 ಓವರ್ಗಳ ಮೂಲಕ 96 ವಿಕೆಟ್ ಪಡೆದಿದ್ದರು.
5 / 6
ಇನ್ನು ಹಾರ್ದಿಕ್ ಪಾಂಡ್ಯ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಪಾಂಡ್ಯ 91 ವಿಕೆಟ್ ಕಬಳಿಸಲು ಎಸೆದಿರುವುದು ಬರೋಬ್ಬರಿ 1763 ಎಸೆತಗಳನ್ನು. ಅಂದರೆ ಅರ್ಷದೀಪ್ಗಿಂತ 500 ಹೆಚ್ಚುವರಿ ಎಸೆತಗಳನ್ನು ಈಗಾಗಲೇ ಎಸೆದಿದ್ದಾರೆ.
6 / 6
ಹಾಗೆಯೇ ಟೀಮ್ ಇಂಡಿಯಾ ಸ್ವಿಂಗ್ ಮಾಸ್ಟರ್ ಎನಿಸಿಕೊಂಡಿರುವ ಭುವನೇಶ್ವರ್ ಕುಮಾರ್ 90 ವಿಕೆಟ್ಗಳನ್ನು ಕಬಳಿಸಲು ಬರೋಬ್ಬರಿ 1791 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಇದೀಗ ಇವರೆಲ್ಲರನ್ನೂ ಹಿಂದಿಕ್ಕಿ ಅರ್ಷದೀಪ್ ಸಿಂಗ್ ಕೇವಲ 2 ವರ್ಷಗಳಲ್ಲಿ, 1264 ಎಸೆತಗಳ ಮೂಲಕ ಅಗ್ರಸ್ಥಾನಕ್ಕೇರಿವುದು ವಿಶೇಷ.
Published On - 8:31 am, Thu, 23 January 25