Mitchell Starc: ಟಾಪ್-5 ಗೆ ಎಂಟ್ರಿ ಕೊಟ್ಟ ಮಿಚೆಲ್ ಸ್ಟಾರ್ಕ್​

| Updated By: ಝಾಹಿರ್ ಯೂಸುಫ್

Updated on: Jul 02, 2023 | 3:59 PM

Ashes 2023: ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್ ಕಬಳಿಸಿದ್ದ ಸ್ಟಾರ್ಕ್​, ದ್ವಿತೀಯ ಇನಿಂಗ್ಸ್​ನಲ್ಲಿ 2 ವಿಕೆಟ್ ಉರುಳಿಸಿದರು.

1 / 8
Ashes 2023: ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 5 ವಿಕೆಟ್ ಪಡೆಯುವ ಮೂಲಕ ಮಿಚೆಲ್ ಸ್ಟಾರ್ಕ್ (Mitchell Starc)​ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

2 / 8
ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್ ಕಬಳಿಸಿದ್ದ ಸ್ಟಾರ್ಕ್​, ದ್ವಿತೀಯ ಇನಿಂಗ್ಸ್​ನಲ್ಲಿ 2 ವಿಕೆಟ್ ಉರುಳಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಟಾಪ್-5 ಬೌಲರ್​ಗಳ ಪಟ್ಟಿಗೆ ಮಿಚೆಲ್ ಸ್ಟಾರ್ಕ್ ಸೇರ್ಪಡೆಯಾದರು.

3 / 8
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಲೆಜೆಂಡ್ ಸ್ಪಿನ್ನರ್ ಶೇನ್ ವಾರ್ನ್​ ಇದ್ದು, ಸ್ಪಿನ್ ಮಾಂತ್ರಿಕ 273 ಇನಿಂಗ್ಸ್​ಗಳಲ್ಲಿ ಒಟ್ಟು 708 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ.

4 / 8
ಇನ್ನು ದ್ವಿತೀಯ ಸ್ಥಾನದಲ್ಲಿರುವ ಗ್ಲೆನ್ ಮೆಕ್​ಗ್ರಾಥ್ 243 ಇನಿಂಗ್ಸ್​ಗಳಿಂದ 563 ವಿಕೆಟ್​ಗಳನ್ನು ಕಬಳಿಸಿದ್ದಾರೆ.

5 / 8
ಹಾಗೆಯೇ 228	ಇನಿಂಗ್ಸ್​ ಮೂಲಕ 496 ವಿಕೆಟ್​ಗಳನ್ನು ಉರುಳಿಸಿರುವ ನಾಥನ್ ಲಿಯಾನ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

6 / 8
132 ಇನಿಂಗ್ಸ್​ಗಳಿಂದ 355 ವಿಕೆಟ್ ಕಬಳಿಸಿರುವ ಡೆನ್ನಿಸ್ ಲಿಲ್ಲಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

7 / 8
ಇದೀಗ 151 ಇನಿಂಗ್ಸ್​ಗಳ ಮೂಲಕ 315 ವಿಕೆಟ್ ಕಬಳಿಸಿ ಮಿಚೆಲ್ ಸ್ಟಾರ್ಕ್​ ಈ ಪಟ್ಟಿಯಲ್ಲಿ ಐದನೇ ಸ್ಥಾನ ಅಲಂಕರಿಸಿದ್ದಾರೆ.

8 / 8
ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ಪರ ಅತ್ಯಧಿಕ ವಿಕೆಟ್​ ಪಡೆದ ಟಾಪ್-5 ಬೌಲರ್​ಗಳ ಪಟ್ಟಿಯಲ್ಲಿ ಮಿಚೆಲ್ ಸ್ಟಾರ್ಕ್​ ಕಾಣಿಸಿಕೊಂಡಿದ್ದಾರೆ.