Asia Cup: ಏಷ್ಯಾಕಪ್ಗೆ ತಂಡದಲ್ಲಿ ಸ್ಥಾನ ಪಡೆದ ಆರ್ಸಿಬಿ ಆಟಗಾರ; ಕಾಮೆಂಟರಿಗೆ ಸೂಕ್ತ ಎಂದ ಜಡೇಜಾ..!
Dinesh Karthik: ನಾನು ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ನೋಡಲು ಬಯಸುವುದಿಲ್ಲ. ಬದಲಿಗೆ ಅವರು ನನ್ನ ಪಕ್ಕದ ಕಾಮೆಂಟರಿ ಸೀಟಿನಲ್ಲಿ ಕುಳಿತು ಕಾಮೆಂಟರಿ ಮಾಡುವುದೇ ಸೂಕ್ತ ಎಂದು ಅಜೇಯ್ ಜಡೇಜಾ ಹೇಳಿದ್ದಾರೆ.
ಏಷ್ಯಾಕಪ್ಗಾಗಿ ಟೀಂ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ ಕೂಡ ಸ್ಥಾನ ಪಡೆದಿದ್ದಾರೆ. ಐಪಿಎಲ್ 2022 ರಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ನೊಂದಿಗೆ ಟೀಂ ಇಂಡಿಯಾಕ್ಕೆ ಮರಳಿರುವ ಈ ಆಟಗಾರ, ಫಿನಿಶರ್ ಆಗಿ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ, ಈ ನಡುವೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ದಿನೇಶ್ ಕಾರ್ತಿಕ್ ಬಗ್ಗೆ ದೊಡ್ಡ ಮಾತು ಹೇಳಿದ್ದಾರೆ. ದಿನೇಶ್ ಕಾರ್ತಿಕ್ ಏಷ್ಯಾಕ್ನ ಆಡುವ ಇಲೆವೆನ್ನಲ್ಲಿ ಸ್ಥಾನ ಪಡೆಯುವುದಿಲ್ಲ. ಹೀಗಾಗಿ ಅವರು ನನ್ನೊಂದಿಗೆ ಮತ್ತೊಮ್ಮೆ ಕಾಮೆಂಟರಿ ಮಾಡುವುದೇ ಸರಿ ಎಂದು ಅಜಯ್ ಜಡೇಜಾ ಹೇಳಿಕೊಂಡಿದ್ದಾರೆ.
ಅಜಯ್ ಜಡೇಜಾ, ನೀವು ಆಕ್ರಮಣಕಾರಿ ಕ್ರಿಕೆಟ್ ಆಡಲು ಬಯಸಿದರೆ ನಿಮ್ಮ ಆಲೋಚನೆಯೂ ವಿಭಿನ್ನವಾಗಿರಬೇಕು. ಆದರೆ ನಾನು ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ನೋಡಲು ಬಯಸುವುದಿಲ್ಲ. ಬದಲಿಗೆ ಅವರು ನನ್ನ ಪಕ್ಕದ ಕಾಮೆಂಟರಿ ಸೀಟಿನಲ್ಲಿ ಕುಳಿತು ಕಾಮೆಂಟರಿ ಮಾಡುವುದೇ ಸೂಕ್ತ. ಏಕೆಂದರೆ ದಿನೇಶ್ ಉತ್ತಮ ಕಾಮೆಂಟೇಟರ್ ಎಂದು ಹೇಳಿಕೊಂಡಿದ್ದಾರೆ.