- Kannada News Photo gallery Cricket photos Picking Dinesh Karthik only as a finisher doesn’t seem quite right to me Says Vivek Razdan
Dinesh Karthik: ಕಾರ್ತಿಕ್ರನ್ನು ಫಿನಿಶರ್ ಆಗಿ ಮಾತ್ರ ಆಯ್ಕೆ ಮಾಡುವುದು ಸರಿ ಕಾಣುತ್ತಿಲ್ಲ: ಮಾಜಿ ಕ್ರಿಕೆಟಿಗ
ಕಾರ್ತಿಕ್ ಅವರ ಫಿನಿಶರ್ ಜವಾಬ್ದಾರಿ ಬಗ್ಗೆ ಟೀಮ್ ಇಂಡಿಯಾ ಮಾಜಿ ವೇಗಿ ವಿವೇಕ್ ರಜ್ದನ್ ಮಾತನಾಡಿದ್ದು, ಕಾರ್ತಿಕ್ ಅವರನ್ನು ಭಾರತ ತಂಡ ಕೇವಲ ಫಿನಿಶರ್ ಆಗಿ ಆಯ್ಕೆ ಮಾಡುತ್ತಿದ್ದರೆ ನನಗೆ ಅದು ಸರಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.
Updated on:Aug 09, 2022 | 10:52 AM

ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸದ್ಯ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿರುವ ವಿಕೆಟ್ ಕೀಪರ್- ಬ್ಯಾಟರ್ ದಿನೇಶ್ ಕಾರ್ತಿಕ್ ಉತ್ತಮ ಲಯದಲ್ಲಿದ್ದಾರೆ. ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಪರ ಭರ್ಜರಿ ಆಟ ವಾಡುತ್ತಿರುವ ಕಾರ್ತಿಕ್ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ. ಮುಖ್ಯವಾಗಿ ಫಿನಿಶರ್ ಜವಾಬ್ದಾರಿಯನ್ನು ನಿಭಾಹಿಸುತ್ತಿದ್ದಾರೆ.

ಇದೀಗ ಕಾರ್ತಿಕ್ ಅವರ ಫಿನಿಶರ್ ಜವಾಬ್ದಾರಿ ಬಗ್ಗೆ ಟೀಮ್ ಇಂಡಿಯಾ ಮಾಜಿ ವೇಗಿ ವಿವೇಕ್ ರಜ್ದನ್ ಮಾತನಾಡಿದ್ದು, ಕಾರ್ತಿಕ್ ಅವರನ್ನು ಭಾರತ ತಂಡ ಕೇವಲ ಫಿನಿಶರ್ ಆಗಿ ಆಯ್ಕೆ ಮಾಡುತ್ತಿದ್ದರೆ ನನಗೆ ಅದು ಸರಿ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

ದಿನೇಶ್ ಕಾರ್ತಿಕ್ ಅವರನ್ನು ಫಿನಿಶರ್ ಆಗಿ ಮಾತ್ರ ಆಯ್ಕೆ ಮಾಡುವುದು ನನಗೆ ಸರಿಯಾಗಿ ಕಾಣುತ್ತಿಲ್ಲ. ನೀವು ಕಾರ್ತಿಕ್ ಗೆ ಸ್ಥಾನವನ್ನು ನಿರ್ಬಂಧಿಸುತ್ತಿದ್ದೀರಿ. ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ದೀಪಕ್ ಹೂಡಾ ಮತ್ತು ಹಾರ್ದಿಕ್ ಪಾಂಡ್ಯ ಪೈಕಿ ಯಾರು ಫಿನಿಶರ್ ಮಾಡುವ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ನೀವು ಹೇಳಿ? ಎಂದು ವಿವೇಕ್ ರಜ್ದಾನ್ ಪ್ರಶ್ನಿಸಿದ್ದಾರೆ.

ಆದರೆ, ಕಾರ್ತಿಕ್ ತಾನು ಈ ಜವಾಬ್ದಾರಿಯನ್ನು ಇಷ್ಟ ಪಡುತ್ತಿದ್ದೇನೆ ಎಂದು ಹೇಳಿದ್ದಾರೆ. “ನನಗೆ ನೀಡಿರುವ ಫಿನಿಶರ್ ಜವಾಬ್ದಾರಿಯನ್ನು ನಾನು ತುಂಬಾ ಆನಂದಿಸುತ್ತಿದ್ದೇನೆ. ಇದೊಂದು ಆಸಕ್ತದಾಯಕವಾದ ಪಾತ್ರ. ಇದರಲ್ಲಿ ನೀವು ಸ್ಥಿರವಾಗಿರಲು ಸಾಧ್ಯವಿಲ್ಲ, ಆದರೆ ಕೆಲ ಪಂದ್ಯಗಳಲ್ಲಿ ತಂಡಕ್ಕೆ ಪ್ರಭಾವ ಬೀರಬಹುದು'' ಎಂದು ಹೇಳಿದ್ದಾರೆ.

ತಂಡದ ನಾಯಕನ ಮತ್ತು ಕೋಚ್ ನ ಬೆಂಬಲ ನನಗಿದೆ. ಪಂದ್ಯದಲ್ಲಿ ವಿಕೆಟ್ ಅನ್ನು ತಿಳಿಯುವುದು ಮುಖ್ಯ. ಕೊನೆಯ 3-4 ಓವರ್ ಬ್ಯಾಟ್ ಮಾಡಲು ಬರುವ ಬ್ಯಾಟರ್ ಚೆಂಡಿನ ಆಕಾರ, ವಿಕೆಟ್, ಚೆಂಡು ಯಾವರೀತಿ ವರ್ತಿಸುತ್ತದೆ ಎಂದು ಅರಿತುಕೊಳ್ಳಬೇಕು. ಸತತವಾಗಿ ಅಭ್ಯಾಸ ಮಾಡುವುದರಿಂದ ಈ ವಿಚಾರ ತಿಳಿಯುತ್ತದೆ -ಕಾರ್ತಿಕ್

ದಿನೇಶ್ ಕಾರ್ತಿಕ್ ಸದ್ಯ ಟೀಮ್ ಇಂಡಿಯಾ ಟಿ20 ತಂಡದ ಪ್ರಮುಖ ಸದಸ್ಯನಾಗಿದ್ದಾರೆ. ಇದೇ ತಿಂಗಳು ನಡೆಯಲಿರುವ ಏಷ್ಯಾಕಪ್ ಗೂ ಕಾರ್ತಿಕ್ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಟಿ20 ವಿಶ್ವಕಪ್ ಗೂ ಆಯ್ಕೆಯಾಗುವ ನಿರೀಕ್ಷೆಯಿದೆ.
Published On - 10:52 am, Tue, 9 August 22
























