Asia Cup 2023: 2 ದೇಶಗಳಲ್ಲಿ ನಡೆಯಲಿದೆ ಏಷ್ಯಾಕಪ್
TV9 Web | Updated By: ಝಾಹಿರ್ ಯೂಸುಫ್
Updated on:
Feb 16, 2023 | 10:59 PM
Asia Cup 2023: ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜಿಸಿದರೆ ಭಾರತ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ ಭಾರತ ಪಾಕ್ನಲ್ಲಿ ಆಡದಿದ್ದರೆ, ಪಾಕಿಸ್ತಾನ್ 2023 ರ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ತಿಳಿಸಿತ್ತು.
1 / 5
ಇನ್ನು ಈ ಬಾರಿ ಕೂಡ ಭಾರತ-ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿದ್ದು, ಇದೀಗ ಅದೇ ಗ್ರೂಪ್ಗೆ ನೇಪಾಳ ತಂಡ ಕೂಡ ಎಂಟ್ರಿ ಕೊಟ್ಟಿದೆ. ಅಂದರೆ ಇದೇ ಮೊದಲ ಬಾರಿಗೆ ನೇಪಾಳ ತಂಡಕ್ಕೆ ಏಷ್ಯಾದ ಬಲಿಷ್ಠ ಎರಡು ದೇಶಗಳ ವಿರುದ್ಧ ಆಡುವ ಅವಕಾಶ ದೊರೆಯುತ್ತಿದೆ. ಅದರಂತೆ ಏಷ್ಯಾಕಪ್ ಆಡುವ 6 ತಂಡಗಳು ಈ ಕೆಳಗಿನಂತಿವೆ.
2 / 5
ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯಗಳಿಗೆ ಉಳಿದ ತಂಡಗಳು ಶ್ರೀಲಂಕಾಗೆ ಆಗಮಿಸಲಿದೆ. ಹಾಗೆಯೇ ಭಾರತ ತಂಡ ಫೈನಲ್ ಪ್ರವೇಶಿಸಿದರೆ, ಅಂತಿಮ ಹಣಾಹಣಿ ಕೂಡ ಲಂಕಾದಲ್ಲೇ ನಡೆಯಲಿದೆ. ಇನ್ನುಳಿದ ಪಂದ್ಯಗಳು ಪಾಕಿಸ್ತಾನದಲ್ಲೇ ಜರುಗಲಿದೆ.
3 / 5
ಅದರಂತೆ ಇದೀಗ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ 2023 ನಡೆಯುವುದು ಖಚಿತವಾಗಿದೆ. ಇನ್ನು ಟೂರ್ನಿ ಆಯೋಜನೆಗೆ ಸೆಪ್ಟೆಂಬರ್ 1 ರಿಂದ 17 ರವರೆಗೆ ದಿನಾಂಕವನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.
4 / 5
ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿದ್ದು, ಇದಾಗ್ಯೂ ಪಾಕ್ನಲ್ಲಿ ಟೂರ್ನಿ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಪಿಸಿಬಿ ಮುಂದಾಗಿದೆ.
5 / 5