ಭಾರತ- ನೇಪಾಳ ಪಂದ್ಯದಲ್ಲಿ ವಿಶಿಷ್ಟ ದಾಖಲೆ ಬರೆಯಲ್ಲಿದ್ದಾರೆ ಕನ್ನಡಿಗ ಜಾವಗಲ್ ಶ್ರೀನಾಥ್
Javagal Srinath: 2003 ರಲ್ಲಿ ವೃತ್ತಿಜೀವನದಿಂದ ನಿವೃತ್ತರಾದ ಕನ್ನಡಿಗ ಜಾವಗಲ್ ಶ್ರೀನಾಥ್ ಆ ಬಳಿಕ ಐಸಿಸಿ ಮ್ಯಾಚ್ ರೆಫರಿಯಾದರು. ಅಲ್ಲಿಂದ ಇಲ್ಲಿಯವರೆಗೆ 250 ಏಕದಿನ ಪಂದ್ಯಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಶ್ರೀನಾಥ್ ಈ ಮೈಲಿಗಲ್ಲನ್ನು ತಲುಪಿದ ನಾಲ್ಕನೇ ಮ್ಯಾಚ್ ರೆಫರಿ ಎನಿಸಿಕೊಂಡಿದ್ದಾರೆ.
1 / 8
ಸೋಮವಾರ ಪಲ್ಲೆಕೆಲೆಯಲ್ಲಿ ನಡೆಯಲಿರುವ ಭಾರತ ಮತ್ತು ನೇಪಾಳ ಏಷ್ಯಾಕಪ್ ಪಂದ್ಯದಲ್ಲಿ ಭಾರತದ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರು ಮ್ಯಾಚ್ ರೆಫರಿ ಆಗಿ ತಮ್ಮ 250 ನೇ ಏಕದಿನ ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ.
2 / 8
2003 ರಲ್ಲಿ ವೃತ್ತಿಜೀವನದಿಂದ ನಿವೃತ್ತರಾದ ಕನ್ನಡಿಗ ಜಾವಗಲ್ ಶ್ರೀನಾಥ್ ಆ ಬಳಿಕ ಐಸಿಸಿ ಮ್ಯಾಚ್ ರೆಫರಿಯಾದರು. ಅಲ್ಲಿಂದ ಇಲ್ಲಿಯವರೆಗೆ 250 ಏಕದಿನ ಪಂದ್ಯಗಳಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿರುವ ಶ್ರೀನಾಥ್ ಈ ಮೈಲಿಗಲ್ಲನ್ನು ತಲುಪಿದ ನಾಲ್ಕನೇ ಮ್ಯಾಚ್ ರೆಫರಿ ಎನಿಸಿಕೊಂಡಿದ್ದಾರೆ.
3 / 8
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಶ್ರೀನಾಥ್, 2006 ರಲ್ಲಿ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಮ್ಯಾಚ್ ರೆಫರಿಯಾಗಿ ನನ್ನ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯದಿಂದ ನಾನು ಅಂತಹ ಮೈಲಿಗಲ್ಲನ್ನು ಸಾಧಿಸಿರುವುದು ಅಪಾರ ಸಂತೋಷವನ್ನುಂಟು ಮಾಡಿದೆ. ಏಕೆಂದರೆ ಈ 17 ವರ್ಷಗಳಲ್ಲಿ ನಾನು ಮೈದಾನದಲ್ಲಿ ಆಡಿದ್ದಕ್ಕಿಂತ, ಹೆಚ್ಚು ಪಂದ್ಯಗಳಲ್ಲಿ ಮ್ಯಾಚ್ ರೆಫರಿ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದಿದ್ದಾರೆ.
4 / 8
ಕರ್ನಾಟಕದ ಈ ಬಲಗೈ ಆಟಗಾರ 67 ಟೆಸ್ಟ್ ಮತ್ತು 229 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 236 ವಿಕೆಟ್‌ಗಳನ್ನು ಮತ್ತು 50 ಓವರ್‌ಗಳ ಸ್ವರೂಪದಲ್ಲಿ 315 ವಿಕೆಟ್‌ಗಳನ್ನು ಪಡೆದಿದ್ದಾರೆ.
5 / 8
ಐಸಿಸಿ ಮ್ಯಾಚ್ ರೆಫರಿಯಾಗಿ ಶ್ರೀನಾಥ್ ಅವರ ಸಾಧನೆಯನ್ನು ನೋಡುವುದಾದರೆ.. 2006 ರಲ್ಲಿ ಎಮಿರೇಟ್ಸ್ ICC ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ಸದಸ್ಯರಾಗಿ ಆಯ್ಕೆ.
6 / 8
2006 ರಲ್ಲಿ ಏಕದಿನ ಪಂದ್ಯಕ್ಕೆ ಮೊದಲ ಬಾರಿಗೆ ಮ್ಯಾಚ್ ರೆಫರಿ ಆಗಿ ಕೆಲಸ ಮಾಡಿದರು. ಆ ಬಳಿಕ 2007 ರಲ್ಲಿ ವಿಶ್ವಕಪ್‌ನಲ್ಲಿ ರೆಫರಿಯಾಗಿ ಸೇವೆ.
7 / 8
2009 ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೆಫರಿಯಾಗಿದ್ದರು. ಇದರ ಜೊತೆಗೆ 2012, 2014, 2016 ಮತ್ತು 2021 ರಲ್ಲಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ರೆಫರಿಯಾಗಿದ್ದರು.
8 / 8
ಇದುವರೆಗೆ ಶ್ರೀನಾಥ್ 65 ಟೆಸ್ಟ್, 118 ಪುರುಷರ ಟಿ20 ಪಂದ್ಯಗಳು ಮತ್ತು 16 ಮಹಿಳೆಯರ ಟಿ20 ಪಂದ್ಯಗಳಲ್ಲಿ ರೆಫರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.