Asia Cup 2023 Schedule: ಏಷ್ಯಾಕಪ್​ನಲ್ಲಿ ಭಾರತ ಯಾವ ದಿನದಂದು ಯಾರನ್ನು ಎದುರಿಸಲಿದೆ? ಇಲ್ಲಿದೆ ವಿವರ

|

Updated on: Jul 20, 2023 | 7:38 AM

Asia Cup 2023 Schedule: ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, 13 ಪಂದ್ಯಗಳ ಪಂದ್ಯಾವಳಿಯ 4 ಪಂದ್ಯಗಳು ಆತಿಥೇಯ ಪಾಕಿಸ್ತಾನದಲ್ಲಿ ನಡೆದರೆ, ಫೈನಲ್ ಸೇರಿದಂತೆ ಇನ್ನುಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲ್ಲಿವೆ.

1 / 7
ಸಾಕಷ್ಟು ಅಡೆತಡೆಗಳು ಮತ್ತು ದೀರ್ಘ ಕಾಯುವಿಕೆಯ ನಂತರ, ಈ ಬಾರಿಯ ಏಷ್ಯಾಕಪ್​ನ ವೇಳಾಪಟ್ಟಿಯನ್ನು ಅಂತಿಮವಾಗಿ ಬಿಡುಗಡೆ ಮಾಡಲಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

2 / 7
ಈ ಕ್ರೀಡಾಕೂಟದಲ್ಲಿ ಸೆಪ್ಟೆಂಬರ್ 2 ರಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ನಿರೀಕ್ಷೆಯಂತೆ ಈ ಪಂದ್ಯ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಆತಿಥೇಯ ಪಾಕಿಸ್ತಾನದ ಮುಲ್ತಾನ್‌ನಲ್ಲಿ ಆಗಸ್ಟ್ 30 ರಂದು ಟೂರ್ನಿ ಆರಂಭವಾಗಲಿದೆ. ಅದೇ ಸಮಯದಲ್ಲಿ, ಪಂದ್ಯಾವಳಿಯ ಫೈನಲ್ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ.

3 / 7
ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದ್ದು, 13 ಪಂದ್ಯಗಳ ಪಂದ್ಯಾವಳಿಯ 4 ಪಂದ್ಯಗಳು ಆತಿಥೇಯ ಪಾಕಿಸ್ತಾನದಲ್ಲಿ ನಡೆದರೆ, ಫೈನಲ್ ಸೇರಿದಂತೆ ಇನ್ನುಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲ್ಲಿವೆ. ಇನ್ನು ಟೀಂ ಇಂಡಿಯಾದ ಮಟ್ಟಿಗೆ ಹೇಳುವುದಾದರೆ, ಈ ಕ್ರೀಡಾಕೂಟದಲ್ಲಿ ಭಾರತ ಲೀಗ್ ಹಂತದಲ್ಲಿ 2 ಪಂದ್ಯಗಳನ್ನು ಆಡಲಿದೆ.

4 / 7
ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದ್ದು, ಈ ಪಂದ್ಯವು ಶನಿವಾರ, ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಕ್ಯಾಂಡಿ ನಗರದಲ್ಲಿ ನಡೆಯಲಿದೆ.

5 / 7
ಬಳಿಕ ಇದೇ ನಗರದಲ್ಲಿ, ಸೆಪ್ಟೆಂಬರ್ 4 ರಂದು, ಭಾರತ ತಂಡವು ತನ್ನ ಗುಂಪಿನ ಎರಡನೇ ತಂಡವಾದ ನೇಪಾಳವನ್ನು ಎದುರಿಸಲಿದೆ.

6 / 7
ಮತ್ತೊಂದೆಡೆ ಸೂಪರ್-4ರ ಘಟಕ್ಕೆ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಅರ್ಹತೆ ಪಡೆದರೆ, ಸೆಪ್ಟೆಂಬರ್ 10 ರಂದು ಎರಡೂ ತಂಡಗಳು ಮತ್ತೆ ಪೈಪೋಟಿ ನಡೆಸಲಿವೆ.

7 / 7
ಉಭಯ ತಂಡಗಳು ಫೈನಲ್‌ಗೆ ತಲುಪಿದರೆ, ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ಪ್ರಶಸ್ತಿಗಾಗಿ ಮೂರನೇ ಬಾರಿಗೆ ಮುಖಾಮುಖಿಯಾಗಲಿದೆ.