Updated on: May 03, 2023 | 8:31 PM
Asia Cup 2023: ಏಷ್ಯಾಕಪ್ನ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಯುಎಇ ತಂಡವನ್ನು ಸೋಲಿಸಿ ಇದೇ ಮೊದಲ ಬಾರಿಗೆ ನೇಪಾಳ ತಂಡವು ಏಷ್ಯಾಕಪ್ಗೆ ಅರ್ಹತೆ ಪಡೆದುಕೊಂಡಿದೆ. ಇದರೊಂದಿಗೆ ಈ ಬಾರಿ ಏಷ್ಯಾಕಪ್ ಆಡುವ 6 ತಂಡಗಳು ಫೈನಲ್ ಆದಂತಾಗಿದೆ.
ಅದರಂತೆ ಈ ಬಾರಿಯ ಏಷ್ಯಾಕಪ್ನಲ್ಲಿ ಯುಎಇ ಬದಲು ನೇಪಾಳ ತಂಡವು ಕಣಕ್ಕಿಳಿಯಲಿದೆ. ಇನ್ನು ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಪಾಕಿಸ್ತಾನ್ ಹೊಂದಿದೆ. ಆದರೆ ಪಾಕ್ನಲ್ಲಿ ಏಷ್ಯಾಕಪ್ ನಡೆದರೆ ಭಾರತ ತಂಡವು ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಈ ಬಾರಿಯ ಏಷ್ಯಾಕಪ್ ಆಯೋಜನೆಯ ಹಕ್ಕು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಂದಿದ್ದು, ಇದಾಗ್ಯೂ ಪಾಕ್ನಲ್ಲಿ ಟೂರ್ನಿ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಪಿಸಿಬಿ ಮುಂದಾಗಿದೆ.
ಅದರಂತೆ ಇದೀಗ ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಏಷ್ಯಾಕಪ್ 2023 ನಡೆಯುವುದು ಖಚಿತವಾಗಿದೆ. ಇನ್ನು ಟೂರ್ನಿ ಆಯೋಜನೆಗೆ ಸೆಪ್ಟೆಂಬರ್ 1 ರಿಂದ 17 ರವರೆಗೆ ದಿನಾಂಕವನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲೇ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.
ಇನ್ನು ಈ ಬಾರಿ ಕೂಡ ಭಾರತ-ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿದ್ದು, ಇದೀಗ ಅದೇ ಗ್ರೂಪ್ಗೆ ನೇಪಾಳ ತಂಡ ಕೂಡ ಎಂಟ್ರಿ ಕೊಟ್ಟಿದೆ. ಅಂದರೆ ಇದೇ ಮೊದಲ ಬಾರಿಗೆ ನೇಪಾಳ ತಂಡಕ್ಕೆ ಏಷ್ಯಾದ ಬಲಿಷ್ಠ ಎರಡು ದೇಶಗಳ ವಿರುದ್ಧ ಆಡುವ ಅವಕಾಶ ದೊರೆಯುತ್ತಿದೆ. ಅದರಂತೆ ಏಷ್ಯಾಕಪ್ ಆಡುವ 6 ತಂಡಗಳು ಈ ಕೆಳಗಿನಂತಿವೆ.
ಭಾರತ (ಗ್ರೂಪ್-A)
ಪಾಕಿಸ್ತಾನ್ (ಗ್ರೂಪ್-A)
ನೇಪಾಳ (ಗ್ರೂಪ್-A)
ಶ್ರೀಲಂಕಾ (ಗ್ರೂಪ್-B)
ಅಫ್ಘಾನಿಸ್ತಾನ್ (ಗ್ರೂಪ್-B)
ಬಾಂಗ್ಲಾದೇಶ್ (ಗ್ರೂಪ್-B)