Asia Cup 2023: ಭಾರತ-ಪಾಕಿಸ್ತಾನ ಪಂದ್ಯ ಮಳೆಯಿಂದ ರದ್ದಾದರೆ ಏನು ಗತಿ?: ಮೀಸಲು ದಿನ ಇದೆಯೇ?
India vs Pakistan Asia Cup Match Weather Report: ಏಷ್ಯಾಕಪ್ 2023 ರಲ್ಲಿ ಸೆಪ್ಟೆಂಬರ್ 2 ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಹಾಗೊಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೆ ಏನಾಗಲಿದೆ?, ಪಂದ್ಯಕ್ಕೆ ಮೀಸಲು ದಿನ ಇದೆಯೇ?. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
1 / 8
ಇಡೀ ಕ್ರಿಕೆಟ್ ಜಗತ್ತು ಏಷ್ಯಾಕಪ್ 2023 ರ ಶನಿವಾರದ ಪಂದ್ಯಕ್ಕೆ ಕಾದುಕುಳಿತಿದೆ. ಶ್ರೀಲಂಕಾದ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 2 ರಂದು ಸಾಂಪ್ರದಾಯಿಕ ಎದುರಾಳಿಗರಾದ ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಮುಖಾಮುಖಿ ಆಗಲಿದೆ.
2 / 8
ಆದರೆ, ಈ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ. AccuWeather.com ಪ್ರಕಾರ, ಪಲ್ಲೆಕೆಲೆಯಲ್ಲಿ 94 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆ ಇದೆ ಮತ್ತು 27 ಪ್ರತಿಶತದಷ್ಟು ಗುಡುಗು ಸಹಿತ ಮಳೆಯಾಗಲಿದೆಯಂತೆ. ಪಂದ್ಯದ ವೇಳೆ ಶೇ.97 ರಷ್ಟು ಮೋಡ ಕವಿದ ವಾತಾವರಣ ಇರಲಿದೆ ಎಂದು ವರದಿ ಆಗಿದೆ.
3 / 8
ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯವಾಗಿ ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಲಂಕಾ ಕ್ರಿಕೆಟ್ ಮಂಡಳಿಯು ಈ ತಿಂಗಳುಗಳಲ್ಲಿ ಯಾವುದೇ ಪಂದ್ಯವನ್ನು ನಿಗದಿಪಡಿಸುವುದಿಲ್ಲ. ಆದರೆ, ಪಾಕಿಸ್ತಾನಕ್ಕೆ ತೆರಳಲು ಭಾರತ ಸರ್ಕಾರದ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಶ್ರೀಲಂಕಾಕ್ಕೆ ತನ್ನ ನಾಡಿನಲ್ಲಿ ಏಷ್ಯಾಕಪ್ ಪಂದ್ಯಗಳನ್ನು ಆಯೋಜಿಸುವುದು ಅನಿವಾರ್ಯವಾಗಿದ್ದವು.
4 / 8
ಸೆಪ್ಟೆಂಬರ್ 2 ರಂದು ನಡೆಯುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಾತ್ರವಲ್ಲದೆ, ಸೆಪ್ಟೆಂಬರ್ 4 ರಂದು ನಡೆಯುವ ಭಾರತ ಮತ್ತು ನೇಪಾಳ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಬಹುದೆಂಬ ಭೀತಿ ಎದುರಾಗಿದೆ. ಸೆ. 4 ರಂದು ಶೇ. 76 ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
5 / 8
ಹಾಗಾದರೆ ಭಾರತ-ಪಾಕಿಸ್ತಾನ ಕದನಕ್ಕೆ ಮಳೆ ಅಡ್ಡಿಸಿ ಪಂದ್ಯ ರದ್ದಾದರೆ ಏನಾಗಲಿದೆ?: ಮಳೆಯಿಂದ, ಪಂದ್ಯ ಆರಂಭಕ್ಕೆ ಮಳೆ ಅಡ್ಡಿಪಡಿಸಿ ಕೆಲ ಸಮಯದ ಬಳಿಕ ನಿಂತು ಇನ್ನೂ ಸಮಯವಿದ್ದರೆ ಎರಡೂ ತಂಡಗಳು ಕನಿಷ್ಠ 20 ಓವರ್‌ಗಳ ಪಂದ್ಯವನ್ನು ಆಡಬೇಕು ಎಂಬ ನಿಯಮವಿದೆ.
6 / 8
ಒಂದುವೇಳೆ ಎರಡನೇ ಬ್ಯಾಟಿಂಗ್ ಮಾಡುವಾಗ ಮಳೆ ಅಡ್ಡಿಪಡಿಸಿದರೆ ಅಥವಾ ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಮಳೆ ಬಂದರೆ ಮೊದಲು ಬ್ಯಾಟ್ ಮಾಡುವ ತಂಡದ ಸ್ಕೋರ್ ಅನ್ನು ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಬೌಲ್ ಮಾಡಬೇಕಾದ ಓವರ್‌ಗಳ ಸಂಖ್ಯೆಯ ಶೇಕಡಾವಾರು ಅಂಶದಿಂದ ಗುಣಿಸಲಾಗುತ್ತದೆ.
7 / 8
ಮಳೆಯಿಂದಾಗಿ ಪಂದ್ಯ ರದ್ದಾಗಿದ್ದರೆ ಯಾವುದೇ ಮೀಸಲು ದಿನವನ್ನು ನಿಗದಿ ಮಾಡಿಲ್ಲ. ಬದಲಾಗಿ ಭಾರತ-ಪಾಕಿಸ್ತಾನ ತಂಡಕ್ಕೆ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಹೀಗಾದಲ್ಲಿ ಆಗಸ್ಟ್ 30 ರಂದು ಮುಲ್ತಾನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನೇಪಾಳವನ್ನು ಸೋಲಿಸಿದ ಪಾಕಿಸ್ತಾನ ಸೂಪರ್ 4 ಹಂತಕ್ಕೆ ಅರ್ಹತೆ ಪಡೆಯುತ್ತದೆ. ಇತ್ತ ಭಾರತದ ಸೆಪ್ಟೆಂಬರ್ 4 ರಂದು ಪಲ್ಲೆಕೆಲೆಯಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಿ ನೇಪಾಳವನ್ನು ಸೋಲಿಸಬೇಕಾಗುತ್ತದೆ.
8 / 8
ಟೀಮ್ ಇಂಡಿಯಾ ಪಲ್ಲೆಕೆಲೆಯಲ್ಲಿ ಈವರೆಗೆ ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ ಆಡಿದೆ. ವಿಶೇಷ ಎಂದರೆ ಈ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಒಂದು ಪಂದ್ಯ ಗೆದ್ದರೆ, ಉಳಿದ ಎರಡು ಪಂದ್ಯಗಳನ್ನು ಟಾರ್ಗೆಟ್ ಬೆನ್ನಟ್ಟಿ ಗೆಲುವು ಸಾಧಿಸಿದೆ. ಹೀಗಾಗಿ ಈ ಮೈದಾನ ಭಾರತಕ್ಕೆ ಫೇವರಿಟ್ ಎನ್ನಬಹುದು.