Asia Cup: 1984 ರಿಂದ ಆರಂಭವಾದ ಏಷ್ಯಾಕಪ್ನಲ್ಲಿ ಭಾರತ ಎಷ್ಟು ಬಾರಿ ಚಾಂಪಿಯನ್ ಆಗಿದೆ ಗೊತ್ತಾ?
Asia Cup: 1984 ರಿಂದ ಆರಂಭವಾದ ಏಷ್ಯಾಕಪ್ನಲ್ಲಿ ಇದುವರೆಗೆ 15 ಆವೃತ್ತಿಗಳು ಪೂರ್ಣಗೊಂಡಿವೆ. ಈ 15 ಆವೃತ್ತಿಗಳಲ್ಲಿ 7 ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.
1 / 8
1984 ರಿಂದ ಆರಂಭವಾದ ಏಷ್ಯಾಕಪ್ನಲ್ಲಿ ಇದುವರೆಗೆ 15 ಆವೃತ್ತಿಗಳು ಪೂರ್ಣಗೊಂಡಿವೆ. ಈ 15 ಆವೃತ್ತಿಗಳಲ್ಲಿ 7 ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಭಾರತ ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. ಇನ್ನುಳಿದಂತೆ ಶ್ರೀಲಂಕಾ 6 ಬಾರಿ, ಪಾಕಿಸ್ತಾನ 2 ಬಾರಿ ಈ ಟ್ರೋಫಿಯನ್ನು ಎತ್ತಿ ಹಿಡಿದಿವೆ. ಹಾಗಿದ್ದರೆ ಭಾರತ ಯಾವ ಯಾವ ವರ್ಷ ಯಾವ ತಂಡವನ್ನು ಮಣಿಸಿ ಚಾಂಪಿಯನ್ ಆಗಿದೆ ಎಂಬುದನ್ನು ನೋಡುವುದಾದರೆ..
2 / 8
1984- ಯುಎಇಯಲ್ಲಿ ನಡೆದ ಈ ಪಂದ್ಯದಲ್ಲಿ ಲಂಕಾ ತಂಡವನ್ನು ಭಾರತ ಮಣಿಸಿ ಮೊದಲ ಬಾರಿಗೆ ಏಷ್ಯಾಕಪ್ ಎತ್ತಿ ಹಿಡಿದಿತ್ತು.
3 / 8
1988- ಬಾಂಗ್ಲಾದೇಶದಲ್ಲಿ ನಡೆದ ಮೂರನೇ ಆವೃತ್ತಿಯಲ್ಲಿ ಮತ್ತೊಮ್ಮೆ ಲಂಕಾ ತಂಡವನ್ನು ಮಣಿಸಿ ಭಾರತ ಏಷ್ಯಾಕಪ್ ಎತ್ತಿ ಹಿಡಿದಿತ್ತು.
4 / 8
1990-91 ಸತತ ಎರಡನೇ ಬಾರಿಗೆ ಲಂಕಾ ತಂಡವನ್ನು ಮಣಿಸುವಲ್ಲಿ ಭಾರತ ಯಶಸ್ವಿಯಾಗಿತ್ತು.
5 / 8
1995- ಮತ್ತೆ ಲಂಕಾ ತಂಡವನ್ನು ಮಣಿಸಿ ಭಾರತ ಏಷ್ಯಾಕಪ್ ಹ್ಯಾಟ್ರಿಕ್ ಬಾರಿಸಿತ್ತು.
6 / 8
2010- ಬರೋಬ್ಬರಿ 15 ವರ್ಷಗಳ ಕಾಲ ಏಷ್ಯಾಕಪ್ ಬರ ಎದುರಿಸಿದ್ದ ಭಾರತ ಐದನೇ ಬಾರಿಗೆ ಏಷ್ಯಾಕಪ್ ಎತ್ತಿ ಹಿಡಿದಿತ್ತು.
7 / 8
2016- 2016 ರಲ್ಲಿ ಬಾಂಗ್ಲಾ ತಂಡವನ್ನು 8 ವಿಕೆಟ್ಗಳಿಂದ ಮಣಿಸುವಲ್ಲಿ ಭಾರತ ಯಶಸ್ವಿಯಾಗಿತ್ತು.
8 / 8
2018- ಯುಎಇಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಮಣಿಸಿ ಭಾರತ ಏಳನೇ ಬಾರಿಗೆ ಏಷ್ಯಾಕಪ್ ಗೆದ್ದಿತ್ತು.