ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಮೊದಲ ಎದುರಾಳಿ 314 ರನ್ ಸಿಡಿಸಿ ಇತಿಹಾಸ ಬರೆದ ನೇಪಾಳ ತಂಡ

|

Updated on: Oct 02, 2023 | 11:30 AM

India vs Nepal Asian Games 2023: ಭಾರತ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಇದೀಗ ಯಾವ ತಂಡವನ್ನು ಎದುರಿಸಲಿದೆ ಎಂದು ಪ್ರಕಟಿಸಲಾಗಿದೆ. ಏಷ್ಯನ್ ಗೇಮ್ಸ್ 2023 ರ ಕ್ರಿಕೆಟ್ ಈವೆಂಟ್‌ನ ಗುಂಪು ಪಂದ್ಯಗಳಲ್ಲಿ ಅನೇಕ ವಿಶ್ವ ದಾಖಲೆಗಳನ್ನು ಮಾಡಿದ ಬಲಿಷ್ಠ ನೇಪಾಳ ತಂಡವನ್ನು ಭಾರತ ತಂಡ ಎದುರಿಸಲಿದೆ.

1 / 7
ಏಷ್ಯನ್ ಗೇಮ್ಸ್ 2023 ಕ್ರಿಕೆಟ್ ವಿಭಾಗದಲ್ಲಿ ಮಹಿಳಾ ತಂಡವು ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಇದೀಗ ಭಾರತ ಪುರುಷರ ಕ್ರಿಕೆಟ್ ತಂಡ ಚಿನ್ನದ ಪದಕ ಗೆಲ್ಲುವ ಸರದಿ. ರುತುರಾಜ್ ಗಾಯಕ್ವಾಡ್ ನಾಯಕತ್ವದ ಟೀಮ್ ಇಂಡಿಯಾ ಮಂಗಳವಾರ ಅಕ್ಟೋಬರ್ 3 ರಿಂದ ಏಷ್ಯನ್ ಗೇಮ್ಸ್​ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಏಷ್ಯನ್ ಗೇಮ್ಸ್​ನಲ್ಲಿ ಕ್ರಿಕೆಟ್ ಪಂದ್ಯ ಟಿ20 ಮಾದರಿಯಲ್ಲಿ ನಡೆಯುತ್ತಿದೆ.

2 / 7
ಭಾರತ ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಇದೀಗ ಯಾವ ತಂಡವನ್ನು ಎದುರಿಸಲಿದೆ ಎಂದು ಪ್ರಕಟಿಸಲಾಗಿದೆ. ಏಷ್ಯನ್ ಗೇಮ್ಸ್ 2023 ರ ಕ್ರಿಕೆಟ್ ಈವೆಂಟ್‌ನ ಗುಂಪು ಪಂದ್ಯಗಳಲ್ಲಿ ಅನೇಕ ವಿಶ್ವ ದಾಖಲೆಗಳನ್ನು ಮಾಡಿದ ಬಲಿಷ್ಠ ತಂಡವನ್ನು ಭಾರತ ತಂಡ ಎದುರಿಸಲಿದೆ.

3 / 7
ಗುಂಪು ಹಂತದಲ್ಲಿ ಮಂಗೋಲಿಯಾ ವಿರುದ್ಧದ ಬರೋಬ್ಬರಿ 314 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ನೇಪಾಳ ತಂಡವನ್ನು ಭಾರತ ಕ್ವಾರ್ಟರ್-ಫೈನಲ್‌ನ ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ನೇಪಾಳ ತಂಡ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐದು ವಿಶ್ವ ದಾಖಲೆಗಳನ್ನು ಮಾಡಿತ್ತು.

4 / 7
ನೇಪಾಳ ತಂಡದ ಪರವಾಗಿ ಅತಿ ವೇಗದ ಶತಕ, ವೇಗದ ಅರ್ಧಶತಕ, ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಸ್ಕೋರ್, ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಸಂಖ್ಯೆಯ ಸಿಕ್ಸರ್‌ಗಳು ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ರನ್‌ಗಳ ವಿಷಯದಲ್ಲಿ ಅತಿ ದೊಡ್ಡ ಗೆಲುವಿನ ದಾಖಲೆ ಹೀಗೆ ನೇಪಾಳ ತಂಡ ಇತಿಹಾಸ ಸೃಷ್ಟಿಸಿತ್ತು. ಇದೀಗ ರುತುರಾಜ್ ಪಡೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಕ್ಟೋಬರ್ 3 ಮಂಗಳವಾರದಂದು ನೇಪಾಳವನ್ನು ಎದುರಿಸಲಿದೆ.

5 / 7
ಇನ್ನು ಪಾಕಿಸ್ತಾನ ಕೂಡ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಪಾಕಿಸ್ತಾನವು ಹಾಂಕಾಂಗ್ ತಂಡವನ್ನು ಎದುರಿಸಲಿದೆ. ಅದೇ ಸಮಯದಲ್ಲಿ, ಅಕ್ಟೋಬರ್ 4 ರಂದು ಶ್ರೀಲಂಕಾ-ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಇದಲ್ಲದೇ ನಾಲ್ಕನೇ ಹಾಗೂ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯ ಬಾಂಗ್ಲಾದೇಶ ಮತ್ತು ಮಲೇಷ್ಯಾ ನಡುವೆ ನಡೆಯಲಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದ ತಂಡಗಳು ಸೆಮಿಫೈನಲ್‌ಗೆ ತೇರ್ಗಡೆಯಾಗುತ್ತದೆ. ಸೋತ ತಂಡಗಳು ಪಂದ್ಯಾವಳಿಯಿಂದ ಹೊರಗುಳಿಯುತ್ತವೆ.

6 / 7
ಭಾರತ ಹಾಗೂ ನೇಪಾಳ ತಂಡಗಳ ನಡುವಣ ಏಷ್ಯನ್ ಗೇಮ್ಸ್ ಕ್ವಾರ್ಟರ್ ಫೈನಲ್‌ ಪಂದ್ಯ ಅಕ್ಟೋಬರ್ 3 ರಂದು ಬೆಳಗ್ಗೆ 6:30 ಕ್ಕೆ ಪ್ರಾರಂಭವಾಗಲಿದೆ. ನೇರ ಪ್ರಸಾರವನ್ನು ಸೋನಿ ಸ್ಪೋರ್ಟ್ಸ್ 5 HD/SD ಮತ್ತು ಸೋನಿ ಟೆನ್ 3 HD/SD ನಲ್ಲಿ ವೀಕ್ಷಿಸಬಹುದು.

7 / 7
ಏಷ್ಯನ್ ಗೇಮ್ಸ್ 2023 ಕ್ವಾರ್ಟರ್ ಫೈನಲ್ ವೇಳಾಪಟ್ಟಿ: 3 ಅಕ್ಟೋಬರ್ - ಭಾರತ vs ನೇಪಾಳ, 3 ಅಕ್ಟೋಬರ್ - ಪಾಕಿಸ್ತಾನ vs ಹಾಂಗ್ ಕಾಂಗ್, 4 ಅಕ್ಟೋಬರ್ - ಶ್ರೀಲಂಕಾ vs ಅಫ್ಘಾನಿಸ್ತಾನ, 4 ಅಕ್ಟೋಬರ್ - ಬಾಂಗ್ಲಾದೇಶ vs ಮಲೇಷ್ಯಾ.