AUS vs PAK: ಚೊಚ್ಚಲ ಟೆಸ್ಟ್ ಸರಣಿಯಲ್ಲಿ ವಿಶ್ವದಾಖಲೆ ಬರೆದ ಪಾಕ್ ಕ್ರಿಕೆಟಿಗ..!

| Updated By: ಪೃಥ್ವಿಶಂಕರ

Updated on: Jan 03, 2024 | 3:09 PM

AUS vs PAK: 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅಮೀರ್ ಜಮಾಲ್ ಅವರ 88 ರನ್​ಗಳ ಅಮೋಘ ಬ್ಯಾಟಿಂಗ್‌ನಿಂದ ತಂಡವು 313 ರನ್​ಗಳ ಗೌರವಾನ್ವಿತ ಸ್ಕೋರ್ ತಲುಪುವಲ್ಲಿ ಯಶಸ್ವಿಯಾಗಿದೆ. ದಿನದಾಟದಂತ್ಯಕ್ಕೆ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 6 ರನ್ ಕಲೆಹಾಕಿದೆ.

1 / 6
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯದ ಮೊದಲ ದಿನವೇ ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನ ತಂಡ ದಿನದಾಟದ ಅಂತ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

2 / 6
ಅದರಲ್ಲೂ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಅಮೀರ್ ಜಮಾಲ್ ಅವರ 88 ರನ್​ಗಳ ಅಮೋಘ ಬ್ಯಾಟಿಂಗ್‌ನಿಂದ ತಂಡವು 313 ರನ್​ಗಳ ಗೌರವಾನ್ವಿತ ಸ್ಕೋರ್ ತಲುಪುವಲ್ಲಿ ಯಶಸ್ವಿಯಾಗಿದೆ. ದಿನದಾಟದಂತ್ಯಕ್ಕೆ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 6 ರನ್ ಕಲೆಹಾಕಿದೆ.

3 / 6
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕ್ ತಂಡಕ್ಕೆಉತ್ತಮ ಆರಂಭ ಸಿಗಲಿಲ್ಲ. ತಂಡ 100 ರನ್​ಗಳೊಳಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಆ ಬಳಿಕ ಜೊತೆಯಾದ ರಿಜ್ವಾನ್ ಹಾಗೂ ಸಲ್ಮಾನ್ ತಲಾ ಅರ್ಧಶತಕ ಸಿಡಿಸಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು.

4 / 6
ಈ ಇಬ್ಬರ ವಿಕೆಟ್ ಪತನದ ಬಳಿಕ 9ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದ ಅಮೀರ್ ಜಮಾಲ್ 88 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆದರೆ, ಅಮೀರ್ ಜಮಾಲ್ 13 ರನ್ ಗಳಿಸಿ ಆಡುತ್ತಿದ್ದಾಗ ನಾಥನ್ ಲಿಯಾನ್ ಎಸೆತದಲ್ಲಿ ಸುಲಭವಾಗಿ ಕ್ಯಾಚಿ ನೀಡಿದರು. ಆದರೆ ಆ ಕ್ಯಾಚ್ ಅನ್ನು ಲಿಯಾನ್ ಕೈಚೆಲ್ಲಿದರು.

5 / 6
ಆ ನಂತರ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದ ಅಮೀರ್, ತಮ್ಮ ಚೊಚ್ಚಲ ಸರಣಿಯಲ್ಲಿ 50 ಕ್ಕೂ ಹೆಚ್ಚು ರನ್ ಗಳಿಸಿದ ಮತ್ತು ಐದು ವಿಕೆಟ್‌ಗಳನ್ನು ಪಡೆದ ಪಾಕಿಸ್ತಾನದ ಮೊದಲ ಆಟಗಾರ ಎನಿಸಿಕೊಂಡರು. ಜಮಾಲ್ 97 ಎಸೆತಗಳನ್ನು ಎದುರಿಸಿ 82 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಅವರ ಬ್ಯಾಟ್‌ನಿಂದ 9 ಬೌಂಡರಿ ಮತ್ತು 4 ಸಿಕ್ಸರ್‌ಗಳು ಬಂದವು.

6 / 6
ಆಸ್ಟ್ರೇಲಿಯಾ ನೆಲದಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಟೆಸ್ಟ್‌ಗಳಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಮೀರ್​ ಈಗ ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ಇವರಿಗೂ ಮೊದಲು 2001ರಲ್ಲಿ ಆಡಮ್ ಪರೋರ್ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ 110 ರನ್ ಗಳಿಸಿದ್ದರು. ಹಾಗೆಯೇ ಜಾನ್ ಬ್ರೇಸ್‌ವೆಲ್ 1985 ರಲ್ಲಿ ಸಿಡ್ನಿಯಲ್ಲಿ 83 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು.