AUS vs PAK: ಪಾಕಿಸ್ತಾನ ಪರ ವಿಶಿಷ್ಠ ದಾಖಲೆ ಬರೆದ ಬಾಬರ್ ಆಝಂ..!
AUS vs PAK Babar Azam: ಎರಡೂ ಇನ್ನಿಂಗ್ಸ್ಗಳಲ್ಲೂ ಬಾಬರ್ ವಿಫಲರಾದರೂ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಅಲ್ಪ ರನ್‌ಗಳ ಇನ್ನಿಂಗ್ಸ್ ಮೂಲಕ ಬಾಬರ್, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 13000 ರನ್ ಗಳಿಸಿದ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1 / 8
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ಪರ್ತ್‌ನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ 360 ರನ್‌ಗಳ ಸೋಲನುಭವಿಸಿದೆ.
2 / 8
ಇನ್ನು ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ತಂಡದ ಮಾಜಿ ನಾಯಕ ಬಾಬರ್ ಆಝಂ ವಿಶೇಷವಾದ ಪ್ರದರ್ಶನವನ್ನೇನು ನೀಡಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ 21 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದ ಬಾಬರ್, 2ನೇ ಇನ್ನಿಂಗ್ಸ್ನಲ್ಲಿ 14 ರನ್ಗಳಿಗೆ ಸುಸ್ತಾದರು.
3 / 8
ಎರಡೂ ಇನ್ನಿಂಗ್ಸ್ಗಳಲ್ಲೂ ಬಾಬರ್ ವಿಫಲರಾದರೂ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಅಲ್ಪ ರನ್‌ಗಳ ಇನ್ನಿಂಗ್ಸ್ ಮೂಲಕ ಬಾಬರ್, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 13000 ರನ್ ಗಳಿಸಿದ ಪಾಕಿಸ್ತಾನದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
4 / 8
29ರ ಹರೆಯದ ಬಾಬರ್ ಆಝಂಗೂ ಮೊದಲು ಈ ವಿಶೇಷ ದಾಖಲೆ ಪಾಕಿಸ್ತಾನದ ಮಾಜಿ ದಿಗ್ಗಜ ನಾಯಕ ಜಾವೇದ್ ಮಿಯಾಂದಾದ್ ಹೆಸರಿನಲ್ಲಿತ್ತು. ಮಿಯಾಂದಾದ್ 304 ಇನ್ನಿಂಗ್ಸ್‌ಗಳಲ್ಲಿ 13000 ರನ್‌ಗಳ ಮ್ಯಾಜಿಕ್ ಫಿಗರ್ ಅನ್ನು ಮುಟ್ಟಿದ್ದರು.
5 / 8
ಆದರೆ ಬಾಬರ್ ಕೇವಲ 301 ಇನ್ನಿಂಗ್ಸ್‌ಗಳಲ್ಲಿ ಈ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ನಂತರ ಮಾಜಿ ಕ್ರಿಕೆಟಿಗ ಮೊಹಮ್ಮದ್ ಯೂಸುಫ್ ಹೆಸರು ಮೂರನೇ ಸ್ಥಾನದಲ್ಲಿದೆ. ಯೂಸುಫ್ 322 ಇನ್ನಿಂಗ್ಸ್‌ಗಳಲ್ಲಿ ಈ ವಿಶೇಷ ಸಾಧನೆ ಮಾಡಿದ್ದರು.
6 / 8
ಇಂಜಮಾಮ್ ಉಲ್ ಹಕ್ ಹೆಸರು ನಾಲ್ಕನೇ ಸ್ಥಾನದಲ್ಲಿದ್ದರೆ, ಯೂನಿಸ್ ಖಾನ್ ಹೆಸರು ಐದನೇ ಸ್ಥಾನದಲ್ಲಿದೆ. ಈ ಇಬ್ಬರೂ ಮಾಜಿ ನಾಯಕರು ಕ್ರಮವಾಗಿ 352 ಮತ್ತು 372 ಇನ್ನಿಂಗ್ಸ್‌ಗಳಲ್ಲಿ ಪಾಕಿಸ್ತಾನದ ಪರ 13000 ರನ್ ಗಳಿಸಿದ್ದಾರೆ.
7 / 8
ಬಾಬರ್ ಆಝಂ ಇದುವರೆಗೆ ಪಾಕಿಸ್ತಾನ ಪರ ಒಟ್ಟು 271 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏತನ್ಮಧ್ಯೆ, ಅವರ ಬ್ಯಾಟ್‌ನಿಂದ 307 ಇನ್ನಿಂಗ್ಸ್‌ಗಳಲ್ಲಿ 13007 ರನ್ ಸಿಡಿದಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಬರ್ 31 ಶತಕ ಮತ್ತು 88 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
8 / 8
ಬಾಬರ್ ಟೆಸ್ಟ್ ಮಾದರಿಯ 89 ಇನ್ನಿಂಗ್ಸ್‌ಗಳಲ್ಲಿ 47.41 ಸರಾಸರಿಯಲ್ಲಿ 3793 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು ಏಕದಿನದ 114 ಇನ್ನಿಂಗ್ಸ್‌ಗಳಲ್ಲಿ 56.72 ಸರಾಸರಿಯಲ್ಲಿ 5729 ರನ್ ಮತ್ತು 98 ಟಿ20 ಇನ್ನಿಂಗ್ಸ್‌ಗಳಲ್ಲಿ 41.49 ಸರಾಸರಿಯಲ್ಲಿ 3485 ರನ್ ಸಿಡಿಸಿದ್ದಾರೆ.