AUS vs PAK: ಪಾಕ್ ತಂಡಕ್ಕೆ ಇಂಜುರಿ ಆಘಾತ; ಮೊದಲ ಟೆಸ್ಟ್‌ನಿಂದ ಹೊರಬಿದ್ದ ಸ್ಟಾರ್ ಪ್ಲೇಯರ್..!
AUS vs PAK: ಸರಣಿಯ ಮೊದಲ ಪಂದ್ಯ ಆರಂಭವಾಗುವುದಕ್ಕೂ ಮುನ್ನ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದ ತಂಡದ ಸ್ಟಾರ್ ಸ್ಪಿನ್ನರ್ ಅಬ್ರಾರ್ ಅಹ್ಮದ್, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ.
1 / 8
ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಆತಿಥೇಯರ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಬಾಬರ್ ಬಳಿಕ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡಿರುವ ಶಾನ್ ಮಸೂದ್ಗೆ ಈ ಸರಣಿ ಅತ್ಯಂತ ಮಹತ್ವದಾಗಿದೆ.
2 / 8
ಆದರೆ ಈ ಸರಣಿಯ ಮೊದಲ ಪಂದ್ಯ ಆರಂಭವಾಗುವುದಕ್ಕೂ ಮುನ್ನ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು, ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದ ತಂಡದ ಸ್ಟಾರ್ ಸ್ಪಿನ್ನರ್ ಅಬ್ರಾರ್ ಅಹ್ಮದ್, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಅಲ್ಲದೆ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿಯೂ ಅವರು ಆಡುವುದು ಅನುಮಾನ ಎನ್ನಲಾಗುತ್ತಿದೆ.
3 / 8
ಗಾಯದ ಹೊರತಾಗಿಯೂ ಅಬ್ರಾರ್ ಅಹ್ಮದ್ ತಂಡದಲ್ಲಿಯೇ ಇರುತ್ತಾರೆ ಮತ್ತು ಪರ್ತ್‌ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಅಬ್ರಾರ್ ಕೊನೆಯ ಎರಡು ಟೆಸ್ಟ್‌ಗಳಲ್ಲಿ ಆಡುವುದಿಲ್ಲ ಎಂಬುದರ ಬಗ್ಗೆ ಪಿಸಿಬಿಯಿಂದ ಯಾವುದೇ ಅಧಿಕೃತ ಹೇಳಕೆ ಹೊರಬಿದ್ದಿಲ್ಲ.
4 / 8
ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಇಂಜುರಿಗೊಳಗಾಗಿರುವ ಅಬ್ರಾರ್ ಬದಲು ತಂಡದ ಸ್ಪಿನ್ ವಿಭಾಗವನ್ನು ಬಲಪಡಿಸುವ ಸಲುವಾಗಿ ಮತ್ತೊಬ್ಬ ಸ್ಪಿನ್ನರ್ ಸಾಜಿದ್ ಖಾನ್ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿದೆ ಎಂದು ವರದಿಯಾಗಿದೆ.
5 / 8
ಅಭ್ಯಾಸ ಪಂದ್ಯದ ಮೂರನೇ ದಿನ ಅಬ್ರಾರ್ ಅಹ್ಮದ್ ಅವರಿಗೆ ಮೊಣಕಾಲು ನೋವು ಕಾಣಿಸಿಕೊಂಡಿತು. ನಂತರ ಅವರು ಮೈದಾನದಿಂದ ನಿರ್ಗಮಿಸಿದ್ದರು. ಸ್ಕ್ಯಾನಿಂಗ್ಗೆ ಒಳಾಗದ ಬಳಿಕ ಅವರಿಗಾಗಿರುವ ಗಾಯದ ಬಗ್ಗೆ ಮಾಹತಿ ಹೊರಬಿದ್ದಿತ್ತು. ಹೀಗಾಗಿ ಅವರನ್ನು ಮೊದಲ ಟೆಸ್ಟ್‌ನಿಂದ ಹೊರಗಿಡಲಾಗಿದೆ.
6 / 8
ಅಬ್ರಾರ್ ತವರು ನೆಲದಲ್ಲಿ ಪಾಕಿಸ್ತಾನ ಪರ ಉತ್ತಮ ಪ್ರದರ್ಶನ ನೀಡಿದ್ದರು. ಪಾಕಿಸ್ತಾನ ಪರ 6 ಟೆಸ್ಟ್ ಪಂದ್ಯಗಳಲ್ಲಿ 38 ವಿಕೆಟ್ ಪಡೆದಿದ್ದರು. ಇದೀಗ ಅಬ್ರಾರ್ ಮೊದಲ ಟೆಸ್ಟ್‌ನಿಂದ ಹೊರಬಿದ್ದಿರುವುದರಿಂದ ತಂಡದ ಸ್ಪಿನ್ ದಾಳಿಯನ್ನು ಮುನ್ನಡೆಸುವ ಜವಾಬ್ದಾರಿ ನೋಮನ್ ಅಲಿ ಅವರ ಮೇಲಿದೆ.
7 / 8
ಇನ್ನು ಅಬ್ರಾರ್ ಬದಲಿಯಾಗಿ ಬಂದಿರುವ ಸಾಜಿದ್ ಖಾನ್ ಅವರು 2021 ರಲ್ಲಿ ಪಾಕಿಸ್ತಾನ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಅವರ ಪಾಕಿಸ್ತಾನ ಪರ 7 ಟೆಸ್ಟ್ ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಕ್ವೈಡ್-ಎ-ಅಜಮ್ ಟ್ರೋಫಿಯಲ್ಲಿಯೂ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಹ್ವಾನಿಸಲಾಗಿದೆ.
8 / 8
ಇನ್ನು ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಟೆಸ್ಟ್ ಸರಣಿಯನ್ನು ಪಾಕಿಸ್ತಾನ ಗೆದ್ದಿಲ್ಲ. ಆದರೆ ಈ ಬಾರಿ ಪಾಕಿಸ್ತಾನದ ವೇಗದ ಬೌಲಿಂಗ್ ದಾಳಿ ಬಲಿಷ್ಠವಾಗಿದೆ. ಪಾಕಿಸ್ತಾನದಲ್ಲಿ ಶಾಹೀನ್ ಶಾ ಆಫ್ರಿದಿ, ಫಹೀಮ್ ಅಶ್ರಫ್ ಮತ್ತು ಖುರ್ರಂ ಶಹಜಾದ್ ಅವರಂತಹ ಬೌಲರ್‌ಗಳು ಇದ್ದಾರೆ. ಹೀಗಾಗಿ ಈ ಬಾರಿಯಾದರೂ ಟೆಸ್ಟ್ ಸರಣಿಯ ಬರ ನೀಗುತ್ತಾ ಎಂಬುದನ್ನು ಕಾದುನೋಡಬೇಕಿದೆ.