Cameron Green: ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಗ್ರೀನ್ ಮಿಂಚಿಂಗ್

| Updated By: ಝಾಹಿರ್ ಯೂಸುಫ್

Updated on: Dec 26, 2022 | 9:24 PM

IPL 2023 Mumbai Indians: ಮುಂಬೈ ಇಂಡಿಯನ್ಸ್ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕ್ಯಾಮರೋನ್ ಗ್ರೀನ್, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್.

1 / 6
ಚೊಚ್ಚಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅವಕಾಶ ಪಡೆದ ಬೆನ್ನಲ್ಲೇ ಆಸ್ಟ್ರೇಲಿಯಾ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಡಿಸೆಂಬರ್ 23 ರಂದು ನಡೆದ ಐಪಿಎಲ್ ಹರಾಜಿನಲ್ಲಿ ಆಸೀಸ್​​ನ ಯುವ ಆಟಗಾರನನ್ನು ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯು ಖರೀದಿಸಿತ್ತು.

2 / 6
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸ್ಪೋಟಕ ಯುವ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಅವರ ಖರೀದಿಗೆ ಭಾರೀ ಪೈಪೋಟಿ ಏರ್ಪಟಿತ್ತು. ಇದಾಗ್ಯೂ 17.50 ಕೋಟಿ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆಸೀಸ್ ಆಟಗಾರನನ್ನು ತಮ್ಮದಾಗಿಸಿಕೊಂಡರು.

3 / 6
ಇತ್ತ ಐಪಿಎಲ್​ನಲ್ಲಿ ಭಾರೀ ಮೊತ್ತಕ್ಕೆ ಹರಾಜಾಗುತ್ತಿದ್ದಂತೆ ಅತ್ತ ಟೆಸ್ಟ್ ಕ್ರಿಕೆಟ್​ನಲ್ಲಿ ಗ್ರೀನ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೇವಲ 27 ರನ್​ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

4 / 6
ಮಿಚೆಲ್ ಸ್ಟಾರ್ಕ್​ ಹಾಗೂ ಪ್ಯಾಟ್ ಕಮಿನ್ಸ್​​ನಂತಹ ಪ್ರಮುಖ ವೇಗಿಗಳ ನಡುವೆ 10.4 ಓವರ್​ ಎಸೆದ ಕ್ಯಾಮರೋನ್ ಗ್ರೀನ್ 3 ಮೇಡನ್ ಮಾಡಿದರು. ಅಲ್ಲದೆ ಕೇವಲ 27 ರನ್​ ನೀಡಿ 5 ವಿಕೆಟ್ ಉರುಳಿಸಿ ಸೌತ್ ಆಫ್ರಿಕಾ ತಂಡವನ್ನು ಕೇವಲ 189 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

5 / 6
ಇತ್ತ ಕ್ಯಾಮರೋನ್ ಗ್ರೀನ್​ ಅವರ ಈ ಭರ್ಜರಿ ಪ್ರದರ್ಶನ ಮುಂಬೈ ಇಂಡಿಯನ್ಸ್​ ತಂಡ ನಿರೀಕ್ಷೆಯನ್ನು ಹೆಚ್ಚಿಸಿದೆ. ಏಕೆಂದರೆ ಮುಂಬೈ ಫ್ರಾಂಚೈಸಿಯು ತಮ್ಮ ಸಾರ್ವಕಾಲಿಕ ಶ್ರೇಷ್ಠ ಆಲ್​ರೌಂಡರ್ ಕೀರನ್ ಪೊಲಾರ್ಡ್​ ಬದಲಿಗೆ ಈ ಬಾರಿ ಗ್ರೀನ್ ಅವರನ್ನು ಖರೀದಿಸಿದೆ. ಇದೀಗ ಬಲಿಷ್ಠ ಸೌತ್ ಆಫ್ರಿಕಾ ವಿರುದ್ಧವೇ ಬೌಲಿಂಗ್​ನಲ್ಲಿ ಮಿಂಚುವ ಮೂಲಕ ಗ್ರೀನ್ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸೂಚನೆ ನೀಡಿದ್ದಾರೆ.

6 / 6
ಮುಂಬೈ ಇಂಡಿಯನ್ಸ್ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕ್ಯಾಮರೋನ್ ಗ್ರೀನ್, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಡೆವಾಲ್ಡ್ ಬ್ರೆವಿಸ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಅರ್ಜುನ್ ತೆಂಡೂಲ್ಕರ್,  ರಾಘವ್ ಗೋಯಲ್, ನೆಹಾಲ್ ವಾಧೇರಾ, ಶಮ್ಸ್ ಮುಲಾನಿ, ವಿಷ್ಣು ವಿನೋದ್, ದುವಾನ್ ಜಾನ್ಸೆನ್, ಪಿಯೂಷ್ ಚಾವ್ಲಾ, ಜ್ಯೆ ರಿಚರ್ಡ್ಸನ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಲ್.

Published On - 9:24 pm, Mon, 26 December 22