AUS vs WI: ಟಿ20 ಸರಣಿ ಆರಂಭಕ್ಕೂ ಮುನ್ನ ಕೊರೊನಾ ಸೋಂಕಿಗೆ ತುತ್ತಾದ ಆಸೀಸ್ ನಾಯಕ..!
Mitchell Marsh: ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಫೆಬ್ರವರಿ 9 ರಿಂದ ಅಂದರೆ ನಾಳೆಯಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ನಡುವೆ ಆಸೀಸ್ ಪಾಳಯಕ್ಕೆ ಆಘಾತವೊಂದು ಎದುರಾಗಿದ್ದು, ತಂಡದ ನಾಯಕ ಮಿಚೆಲ್ ಮಾರ್ಷ್ಗೆ ಕೊರೊನಾ ಸೋಂಕು ತಗುಲಿದೆ.
1 / 8
ಪ್ರಸ್ತುತ ಆಸ್ಟ್ರೇಲಿಯಾ ಪ್ರವಾದಲ್ಲಿರುವ ವೆಸ್ಟ್ ಇಂಡೀಸ್ ತಂಡ ಆತಿಥೇಯರ ವಿರುದ್ಧ ಮೂರು ಮಾದರಿಯ ಸರಣಿಯನ್ನು ಆಡುತ್ತಿದೆ. ಉಭಯ ತಂಡಗಳ ನಡುವೆ ಈಗಾಗಲೇ ಟೆಸ್ಟ್ ಹಾಗೂ ಏಕದಿನ ಸರಣಿ ಮುಕ್ತಾಯಗೊಂಡಿದ್ದು, ಟಿ20 ಸರಣಿ ಮಾತ್ರ ಬಾಕಿ ಉಳಿದಿದೆ.
2 / 8
ಎರಡು ತಂಡಗಳ ನಡುವೆ ನಡೆದ 2 ಪಂದ್ಯಗಳ ಟೆಸ್ಟ್ ಸರಣಿ 1-1 ರಿಂದ ಸಮಬಲದೊಂದಿಗೆ ಅಂತ್ಯಗೊಂಡಿತ್ತು. ಆ ಬಳಿಕ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಏಕಪಕ್ಷೀಯ ಗೆಲುವು ಸಾಧಿಸಿ, ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.
3 / 8
ಇದೀಗ ಈ ಎರಡು ತಂಡಗಳ ನಡುವೆ ಫೆಬ್ರವರಿ 9 ರಿಂದ ಅಂದರೆ ನಾಳೆಯಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಹೋಬರ್ಟ್‌ನಲ್ಲಿ ನಡೆಯಲ್ಲಿದ್ದು, ಮಧ್ಯಾಹ್ನ 1.30 ಕ್ಕೆ ಪಂದ್ಯಗಳು ಆರಂಭವಾಗಲಿವೆ. ಆದರೆ ಈ ನಡುವೆ ಆಸೀಸ್ ಪಾಳಯಕ್ಕೆ ಆಘಾತವೊಂದು ಎದುರಾಗಿದೆ.
4 / 8
ಆಸ್ಟ್ರೇಲಿಯಾ ಟಿ20 ತಂಡದ ನಾಯಕ ಮಿಚೆಲ್ ಮಾರ್ಷ್ಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಅವರು ಟಿ20 ಸರಣಿಯಲ್ಲಿ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ವಾಸ್ತವವಾಗಿ ಈ ಹಿಂದೆಯೂ ಆಸೀಸ್ ಆಟಗಾರ ಕ್ಯಾಮರೂನ್ ಗ್ರೀನ್ಗೆ ಸೋಂಕು ತಗುಲಿತ್ತು. ಅದಾಗ್ಯೂ ಅವರು ಟೆಸ್ಟ್ ಸರಣಿಯನ್ನು ಆಡಿದ್ದರು.
5 / 8
ಹೀಗಾಗಿ ಮಾರ್ಷ್ ಕೊರೊನಾ ಪಾಸಿಟಿವ್ ಆಗಿದ್ದರೂ, ಟಿ20 ಸರಣಿಯಲ್ಲಿ ಆಡುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾದ ಪ್ರೋಟೋಕಾಲ್ ಪ್ರಕಾರ, ಕೊರೊನಾ ತಗುಲಿರುವ ಮಿಚೆಲ್ ಮಾರ್ಷ್ ಕೆಲವು ನಿಯಮ, ನಿಬಂಧನೆಗಳು ಅನುಸರಿಸಬೇಕಾಗುತ್ತದೆ.
6 / 8
ಉದಾಹರಣೆಗೆ ಮಿಚೆಲ್ ಮಾರ್ಷ್ ತಂಡದ ಆಟಗಾರರೊಂದಿಗೆ ಡ್ರೆಸಿಂಗ್ ಕೋಣೆಯನ್ನು ಹಂಚಿಕೊಳ್ಳುವಂತಿಲ್ಲ. ಅವರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಲ್ಲದೆ ಇತರ ಆಟಗಾರರಿಂದ ಮೈದಾನದಲ್ಲಿ ಮಾರ್ಷ್ ಅಂತರ ಕಾಪಾಡಿಕೊಳ್ಳಬೇಕು. ಹಾಗೆಯೇ ಮೈದಾನದಲ್ಲಿ ತಂಡದ ಸಂಭ್ರಮಾಚರಣೆಯ ವೇಳೆ ಇತರ ಆಟಗಾರರ ಹತ್ತಿರ ಬರುವಂತಿಲ್ಲ.
7 / 8
ಟೆಸ್ಟ್ ಪಂದ್ಯದ ವೇಳೆ ಕೊರೊನಾ ಸೋಂಕಿಗೆ ತುತ್ತಾಗಿದ್ದ ಕ್ಯಾಮರೂನ್ ಗ್ರೀನ್ಗೂ ಇದೇ ಸೂಚನೆಗಳನ್ನು ನೀಡಲಾಗಿತ್ತು. ಅದರಂತೆ ಗ್ರೀನ್ ಪಂದ್ಯದ ನಡುವೆ ವಿಕೆಟ್ಗಳು ಬಿದ್ದಾಗ ಆಟಗಾರರೊಂದಿಗೆ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರಲಿಲ್ಲ. ಉಳಿದ ಆಟಗಾರರಿಂದ ಅಂತರ ಕಾಪಾಡಿಕೊಂಡಿದ್ದರು. ಇದೀಗ ಮಾರ್ಷ್ ಕೂಡ ಆ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
8 / 8
ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಫೆಬ್ರವರಿ 9 ರಂದು ಹೋಬರ್ಟ್‌ನಲ್ಲಿ ನಡೆಯಲಿದ್ದು, ನಂತರ ಅಡಿಲೇಡ್‌ನಲ್ಲಿ ಫೆಬ್ರವರಿ 11 ಮತ್ತು ಪರ್ತ್‌ನಲ್ಲಿ ಫೆಬ್ರವರಿ 13 ರಂದು ಎರಡು ಪಂದ್ಯಗಳು ನಡೆಯಲಿವೆ. ಇದಕ್ಕೂ ಮೊದಲು ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿ 1-1 ಡ್ರಾದಲ್ಲಿ ಅಂತ್ಯಗೊಂಡಿದ್ದರೆ, ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.