AUS vs WI: ವಾರ್ನರ್ ಸಿಡಿಲಬ್ಬರದ ಬ್ಯಾಟಿಂಗ್ಗೆ ರೋಹಿತ್ ಶರ್ಮಾ ದಾಖಲೆ ಉಡೀಸ್..!
AUS vs WI: ವೆಸ್ಟ್ ಇಂಡೀಸ್ ನೀಡಿದ 220 ರನ್ಗಳ ಗುರಿ ಬೆನ್ನಟ್ಟಿರುವ ಆಸ್ಟ್ರೇಲಿಯಾ ತಂಡ ಕೂಡ ಉತ್ತಮ ಆರಂಭ ಪಡೆದುಕೊಂಡಿದೆ. ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವಾರ್ನರ್ 81 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಇದರೊಂದಿಗೆ ವಾರ್ನರ್, ರೋಹಿತ್ ಶರ್ಮಾರ ಅತಿ ದೊಡ್ಡ ದಾಖಲೆಯನ್ನು ಮುರಿದಿದ್ದಾರೆ.
1 / 9
ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಬರೋಬ್ಬರಿ 220 ರನ್ ಕಲೆಹಾಕಿದೆ.
2 / 9
ತಂಡದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಆಂಡ್ರೆ ರಸೆಲ್ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 71 ರನ್ ಕಲೆಹಾಕಿದರು.
3 / 9
ರಸೆಲ್ಗೆ ಉತ್ತಮ ಸಾಥ್ ನೀಡಿದ ಶೆರ್ಫೇನ್ ರುದರ್ಫೋರ್ಡ್ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 67 ರನ್ ಚಚ್ಚಿದರು. ರೋಸ್ಟನ್ ಚೇಸ್ ಕೂಡ 37 ರನ್ಗಳ ಕೊಡುಗೆ ನೀಡಿದರು.
4 / 9
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಕೂಡ ಉತ್ತಮ ಆರಂಭ ಪಡೆದುಕೊಂಡಿದೆ. ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವಾರ್ನರ್ 81 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಇದರೊಂದಿಗೆ ವಾರ್ನರ್, ರೋಹಿತ್ ಶರ್ಮಾರ ಅತಿ ದೊಡ್ಡ ದಾಖಲೆಯನ್ನು ಮುರಿದಿದ್ದಾರೆ.
5 / 9
ವೆಸ್ಟ್ ಇಂಡೀಸ್ ವಿರುದ್ಧ 14 ರನ್ ಬಾರಿಸಿದ ಕೂಡಲೇ ಡೇವಿಡ್ ವಾರ್ನರ್ ಟಿ20ಯಲ್ಲಿ 3000 ರನ್ ಪೂರೈಸಿದ್ದಾರೆ. ಟಿ20 ಯಲ್ಲಿ ಇದುವರೆಗೆ 102 ಇನ್ನಿಂಗ್ಸ್‌ಗಳನ್ನಾಡಿರುವ ವಾರ್ನರ್ 3000 ಟಿ20 ರನ್‌ಗಳನ್ನು ಗಳಿಸಿದ್ದಾರೆ.
6 / 9
ಇದರೊಂದಿಗೆ ಟಿ20 ಯಲ್ಲಿ ಅಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ 108 ಟಿ20 ಇನ್ನಿಂಗ್ಸ್‌ಗಳಲ್ಲಿ 3000 ರನ್ ಗಳಿಸಿದ್ದರು. ಇದೀಗ ವಾರ್ನರ್ 102 ರನ್ಗಳ ಈ ಸಾಧನೆ ಮಾಡಿದ್ದಾರೆ.
7 / 9
ಇನ್ನು ಈ ಪಂದ್ಯದಲ್ಲಿ 49 ಎಸೆತಗಳನ್ನು ಎದುರಿಸಿದ ವಾರ್ನರ್ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 81 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ದಾರೆ.
8 / 9
ಇನ್ನು ಟಿ20 ಮಾದರಿಯಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 3000 ರನ್ಗಳ ಗಡಿ ದಾಟಿದ ಆಟಗಾರರ ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಕೇವಲ 81 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಪೂರ್ಣಗೊಳಿಸಿದ್ದರು.
9 / 9
2009 ರಲ್ಲಿ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ವಾರ್ನರ್ ಅಂದಿನಿಂದ ಆಸ್ಟ್ರೇಲಿಯಾ ಪರ 102 ಪಂದ್ಯಗಳಲ್ಲಿ 3020 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 25 ಅರ್ಧ ಶತಕಗಳು ಸೇರಿವೆ.