ಆರ್ಸಿಬಿಗೆ ಬಿಗ್ ಶಾಕ್; ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಐಪಿಎಲ್‌ನ ದುಬಾರಿ ಆಟಗಾರ
Cameron Green: ಆಸ್ಟ್ರೇಲಿಯಾ ತಂಡದ ಯುವ ಆಲ್ರೌಂಡರ್ ಹಾಗೂ ಈ ಬಾರಿಯ ಐಪಿಎಲ್ನಿಂದ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಅತ್ಯಂತ ದುಬಾರಿ ಪ್ಲೇಯರ್ ಕ್ಯಾಮರೂನ್ ಗ್ರೀನ್, ತಾನು ಮಾರಣಾಂತಿಕ ಕಾಯಿಲೆಯಿಂದಾಗಿ ಬಳಲುತ್ತಿರುವ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
1 / 6
ಆಸ್ಟ್ರೇಲಿಯಾ ತಂಡದ ಯುವ ಆಲ್ರೌಂಡರ್ ಹಾಗೂ ಈ ಬಾರಿಯ ಐಪಿಎಲ್ನಿಂದ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಅತ್ಯಂತ ದುಬಾರಿ ಪ್ಲೇಯರ್ ಕ್ಯಾಮರೂನ್ ಗ್ರೀನ್, ತಾನು ಮಾರಣಾಂತಿಕ ಕಾಯಿಲೆಯಿಂದಾಗಿ ಬಳಲುತ್ತಿರುವ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
2 / 6
'7 ಕ್ರಿಕೆಟ್' ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಗ್ರೀನ್, ತಾನು ಹುಟ್ಟಿನಿಂದಲೇ ತೀವ್ರ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತನ್ನ ತಾಯಿಯ 19 ನೇ ವಾರದ ಗರ್ಭಧಾರಣೆಯ ಸ್ಕ್ಯಾನ್ ಸಮಯದಲ್ಲಿ ನನಗೆ ಈ ರೀತಿಯ ಕಾಯಿಲೆ ಇರುವುದು ಪತ್ತೆಯಾಯಿತು.
3 / 6
ನಾನು ಈ ರೋಗದ ಯಾವುದೇ ಲಕ್ಷಣಗಳನ್ನು ಹೊಂದಿರಲಿಲ್ಲ. ಆದರೆ ಅಲ್ಟ್ರಾಸೌಂಡ್ ಮೂಲಕ ನನಗೆ ಈ ರೋಗ ಇರುವುದನ್ನು ಕಂಡುಹಿಡಿಯಲಾಯಿತು. ನಾನು ಕೇವಲ 12 ವರ್ಷಗಳಷ್ಟೇ ಬದುಕಬಲ್ಲೆ ಎಂದು ಆರಂಭದಲ್ಲಿ ವೈದ್ಯರು ಹೇಳಿದ್ದರು. ಆದರೆ ನಾನು ನನ್ನ ಆಹಾರ ಪದ್ಧತಿಯನ್ನು ಬದಲಿಸಿಕೊಂಡೆ ಹಾಗೆಯೇ ನನ್ನ ವೃತ್ತಿಜೀವನ ಕೂಡ ನನ್ನ ಜೀವಿತಾವಧಿಯನ್ನು ಇನ್ನಷ್ಟು ವಿಸ್ತರಿಸಿದೆ.
4 / 6
ನನ್ನ ಮೂತ್ರಪಿಂಡಗಳು ಇತರ ಮೂತ್ರಪಿಂಡಗಳಂತೆ ದೇಹದಲ್ಲಿ ರಕ್ತವನ್ನು ಶೋಧಿಸುವುದಿಲ್ಲ. 60 ರಷ್ಟು ರಕ್ತವನ್ನು ಮಾತ್ರ ಫಿಲ್ಟರ್ ಮಾಡುವ ಸಾಮರ್ಥ್ಯ ಹೊಂದಿವೆ. ಸದ್ಯ ಈ ರೋಗ ನನ್ನಲ್ಲಿ ಎರಡನೇ ಹಂತದಲ್ಲಿದೆ. ಅದು ಐದನೇ ಹಂತವನ್ನು ತಲುಪಿದಾಗ ನಾನು ಮೂತ್ರಪಿಂಡ ಕಸಿ ಅಥವಾ ಡಯಾಲಿಸಿಸ್ಗೆ ಒಳಗಾಗಬೇಕಾಗುತ್ತದೆ ಎಂದಿದ್ದಾರೆ.
5 / 6
ಇನ್ನು ಗ್ರೀನ್ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. ಕಳೆದ ಐಪಿಎಲ್ ಹರಾಜಿನಲ್ಲಿ ಗ್ರೀನ್ ಅವರನ್ನು 17.50 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಖರೀದಿಸಿತ್ತು. ಆದರೆ ಈ ಆವೃತ್ತಿಯಲ್ಲಿ ಗ್ರೀನ್ ಅವರನ್ನು ಆರ್ಸಿಬಿ ತಂಡವು ಮುಂಬೈನಿಂದ ಟ್ರೆಡಿಂಗ್ ಮಾಡಿಕೊಂಡಿದೆ.
6 / 6
ಪ್ರಸ್ತುತ ಗ್ರೀನ್ ಐಪಿಎಲ್ 2023 ರಲ್ಲಿ 16 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 50.22 ಸರಾಸರಿ ಮತ್ತು 160.28 ಸ್ಟ್ರೈಕ್ ರೇಟ್‌ನಲ್ಲಿ 452 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳು ಸೇರಿವೆ.
Published On - 9:43 am, Fri, 15 December 23